ಮತ್ತೆ ಜಿಯೋ ಕಂಪನಿಯ ಶೇರನ್ನು ಮಾರಾಟಕ್ಕಿಟ್ಟ ರಿಲಿಯನ್ಸ್ ಇಂಡಸ್ಟ್ರೀಸ್..!! ಈ ಬಾರಿ ಶೇರನ್ನು ಪಡೆದ ಸಂಸ್ಥೆ ಯಾವುದು ಗೊತ್ತಾ..?

Soma shekhar

ಜಿಯೋ ಟೆಲಿಕಾಂ ರಂಗದಲ್ಲಿ ಬಹು ಬೇಗನೆ ಜನಪ್ರಿಯತೆಯನ್ನು ಗಳಿಸಿಕೊಂಡಂತಹ ಒಂದು ಕಂಪನಿ, ಜಿಯೋ ಟೆಲಿ ಕಾಂಮ್ ರಂಗಗ್ಗೆ ಹೆಜ್ಜೆ ಇಡುತ್ತಿದ್ದಂತೆ ಟಎಲಿಕಾಂ ರಂಗದಲ್ಲಿ ಅಭೂತ ಪೂರ್ವ ಬದಲಾವಣೆಗಳಾಗದವು, ಈ ಮೂಲಕ ಜಿಯೋ ಟೆಲಿ ಕಾಂ ರಂಗದಲ್ಲಿ ಅತೀ ವೇಗವಾಗಿ ಜನ ಮನ್ನಣೆಯನ್ನು ಪಡೆದುಕೊಂಡಿತು, ಇಷ್ಟೆಲ್ಲಾ ಮನ್ನಣೆ ಯಿರುವ ಜಿಯೋ ದಿನ ದಿಂದ ದಿನಕ್ಕೆ ತನ್ನ ಪಾಲುಗಳನ್ನು ಮಾರಾಟ ಮಾಡಲಾಗುತ್ತಿದೆ, ಇದುವರೆಗೆ ಜಿಯೋ 6 ಸಂಸ್ಥೆಗೆ ತನ್ನ ಪಾಲುಗಳನ್ನು ಮಾರಾಟ ಮಾಡಲಾಗಿದೆ. ಪ್ರಸ್ತುತ  ದುಬೈ ಮೂಲದ ಒಂದು ಸಂಸ್ಥೆ ಜಿಯೋ ಶೇರನ್ನು ಪಡೆದು ಕೊಂಡಿದೆ. ಅಷ್ಟಕ್ಕೂ ಆ ಸಂಸ್ಥೆ ಯಾವುದು. ದುಬೈ ಕಂಪನಿ ಖರೀದಿಸಿದ ಶೇರು ಎಷ್ಟು ಗೊತ್ತಾ..?

 

 ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (RIL) ತನ್ನ ಜಿಯೋ ಪ್ಲಾಟ್‌ ಫಾರ್ಮ್‌ಗಳಿಗಾಗಿ ಹೂಡಿಕೆಗಳನ್ನು ಸಂಗ್ರಹಿಸುವುದನ್ನು ಮುಂದುವರೆಸಿದೆ. ಇದೀಗ ಅಬುಧಾಬಿ ಮೂಲದ ಮುಬದಲಾ ಸಂಸ್ಥೆ ಜಿಯೋದ ಶೇ 1.85 ರಷ್ಟು ಪಾಲನ್ನು 9,093 ಕೋಟಿ ರೂ. ಗಳಿಗೆ ಖರೀದಿಸಿದೆ ಎಂದು ಆರ್ ಐ ಎಲ್ ತಿಳಿಸಿದೆ.

 

ಗಮನಾರ್ಹ ಸಂಗತಿಯೆಂದರೇ ಕಳೆದ 6 ವಾರಗಳಲ್ಲಿ ಜಿಯೋದಲ್ಲಿ ಹೂಡಿಕೆ ಮಾಡಿದ 6 ಸಂಸ್ಥೆ ಇದಾಗಿದೆ. ಜಿಯೋದಲ್ಲಿ ಮುಬದಲಾ ಹೂಡಿಕೆ ಮಾಡುವ ಮೂಲಕ ಮಾರ್ಚ್ 2021 ರ ವೇಳೆಗೆ ಆರ್‌ಐಎಲ್ ಅನ್ನು ನಿವ್ವಳ ಸಾಲ ಮುಕ್ತ ಕಂಪನಿಯನ್ನಾಗಿ ಮಾಡುವ ಮತ್ತೊಂದು ದಿಟ್ಟ ಹೆಜ್ಜೆಯಾಗಿದೆ ಎಂದೇ ವಿಶ್ಲೇಷಿಲಾಗಿದೆ.

 

ಮುಖೇಶ್ ಅಂಬಾನಿಯ ಒಡೆತನದ ಜಿಯೋ ಸಂಸ್ಥೆಯ ಮೇಲೆ ಸತತ ಜಾಗತಿಕ ಹೂಡಿಕೆಯ ಒಟ್ಟು ಮೌಲ್ಯ 87,655.35 ಕೋಟಿ ರೂ. ಎಂದು ತಿಳಿದುಬಂದಿದೆ. ಪ್ರಥಮಬಾರಿಗೆ ಫೇಸ್​ಬುಕ್​ ಜಿಯೋದ ಷೇರನ್ನು ಶೇ.9.99 ಪಾಲನ್ನು ಖರೀದಿಸಿತ್ತು.

ಇನ್ನು, ಖಾಸಗಿ ಹೂಡಿಕೆ ನಿರ್ವಹಣಾ ಸಂಸ್ಥೆಯಾ ಸಿಲ್ವರ್ ಲೇಕ್ ಜಿಯೋದಲ್ಲಿ ಶೇ. 1 ಪಾಲನ್ನು 5,655.75 ಕೋಟಿ ರೂ.ಗೆ ಖರೀದಿಸಿತ್ತು. ಜಿಯೋದ ಶೇ.2.3 ಪಾಲನ್ನು 11,367 ಕೋಟಿ ರೂಪಾಯಿಗೆ ವಿಸ್ತಾ ಸಂಸ್ಥೆ ಪಡೆದುಕೊಂಡಿತ್ತು. ನಂತರ ಜಿಯೋ ಸಂಸ್ಥೆ ಶೇ. 1.34 ಪಾಲನ್ನು 6598.38 ಕೋಟಿ ರೂಪಾಯಿಗೆ ಜನರಲ್​ ಅಟ್ಲಾಂಟಿಕ್​ ಹಾಗೂ ಶೇ. 2.32 ಪಾಲನ್ನು 11,367 ಕೋಟಿ ರೂಪಾಯಿಗೆ ಕೆಕೆಆರ್​ ಖರಿದಿಸಿತ್ತು.

 

ಈ ಬಗ್ಗೆ ಮಾತನಾಡಿದ ಮುಖೇಶ್ ಅಂಬಾನಿ, ಅಬುಧಾಬಿ ಸಂಸ್ಥೆ ಜಿಯೋ ಮೇಲೆ ಹೂಡಿಕೆ ಮಾಡುತ್ತಿರುವ ವಿಚಾರ ಖುಷಿ ತಂದಿದೆ. ಡಿಜಿಟಲ್​ ಇಂಡಿಯ ಯೋಜನೆ ಸಂಪೂರ್ಣವಾಗಿ ಜಾರಿಗೆ ಬರಲು ಈ ಹೂಡಿಕೆ ಸಹಕಾರಿಯಾಗಲಿದೆ ಎಂದರು.

 

Find Out More:

Related Articles: