
ಮ್ಯಾಕ್ಸ್ ಫ್ಯಾಷನ್ ನೊಂದಿಗಿನ ಫ್ಲಿಪ್ ಕಾರ್ಟ್ ಒಪ್ಪಂದದ ಹಿಂದಿನ ಕಾರಣ ಏನು..?
ಭಾರತದಲ್ಲಿ 100 ಕ್ಕೂ ಹೆಚ್ಚು ನಗರಗಳಲ್ಲಿ 375 ಕ್ಕೂ ಅಧಿಕ ಸ್ಟೋರ್‍ಗಳನ್ನು ಹೊಂದಿರುವ ಮ್ಯಾಕ್ಸ್ ಫ್ಯಾಷನ್ ದೇಶದ ಅತಿ ದೊಡ್ಡ ಫ್ಯಾಷನ್ ಸಂಸ್ಥೆ ಎನಿಸಿದೆ. ತನ್ನ ವಿಸ್ತಾರವಾದ ಜಾಲದ ಮೂಲಕ ಮ್ಯಾಕ್ಸ್ ಇದುವರೆಗೆ 100 ದಶಲಕ್ಷಕ್ಕೂ ಅಧಿಕ ಗಾರ್ಮೆಂಟ್‍ಗಳನ್ನು ಮಾರಾಟ ಮಾಡಿದೆ.
ಮ್ಯಾಕ್ಸ್ ಫ್ಯಾಷನ್ ಈ ಪಾಲುದಾರಿಕೆ ಮೂಲಕ ತನ್ನ ಮಾರುಕಟ್ಟೆಯನ್ನು ಇನ್ನೂ ವಿಸ್ತಾರಗೊಳಿಸಿಕೊಳ್ಳಲಿದೆ ಮತ್ತು ಅಕ್ಸೆಸರಿಗಳು, ಪಾದರಕ್ಷೆ, ಮಹಿಳೆಯರ ಉಡುಪು, ಪುರುಷರ ಉಡುಪುಗಳು ಮತ್ತು ಮಕ್ಕಳ ಉಡುಪುಗಳನ್ನು ಇನ್ನೂ ಹೆಚ್ಚಿನ ಭಾರತೀಯ ಗ್ರಾಹಕರಿಗೆ ತಲುಪಿಸಲಿದೆ. ಫ್ಲಿಪ್‍ಕಾರ್ಟ್‍ನಲ್ಲಿ ಮ್ಯಾಕ್ಸ್ ಫ್ಯಾಷನ್ ಸ್ಟೋರ್ 13,000 ಕ್ಕೂ ಹೆಚ್ಚು ಹೊಸ ಸ್ಟೈಲ್‍ಗಳ ಉಡುಪುಗಳನ್ನು ಹೊಂದಿರಲಿದೆ. ಇವುಗಳಲ್ಲಿ ಬಹುತೇಕ ಉತ್ಪನ್ನಗಳು 1000 ರೂಪಾಯಿಗಿಂತ ಕಡಿಮೆ ಬೆಲೆಯನ್ನು ಹೊಂದಿವೆ.
ಸಣ್ಣ ಪಟ್ಟಣಗಳು ಮತ್ತು ನಗರಗಳಲ್ಲಿ ಫ್ಲಿಪ್‍ಕಾರ್ಟ್
ಫ್ಲಿಪ್‍ಕಾರ್ಟ್‍ನೊಂದಿಗಿನ ಈ ಪಾಲುದಾರಿಕೆಯಿಂದಾಗಿ ಸಣ್ಣ ಪಟ್ಟಣಗಳು ಮತ್ತು ನಗರಗಳಲ್ಲಿ ಫ್ಲಿಪ್‍ಕಾರ್ಟ್ ಅತ್ಯುತ್ತಮವಾದ ವ್ಯಾಪ್ತಿಯ ಮೂಲಕ ವ್ಯಾಪಕವಾದ ರೀತಿಯಲ್ಲಿ ವ್ಯಾಪಾರಿಗಳನ್ನು ತಲುಪಲು ಬ್ರ್ಯಾಂಡ್‍ಗೆ ಅನುವು ಮಾಡಿಕೊಡುತ್ತದೆ. ಈ ಮೂಲಕ ಫ್ಯಾಷನ್ ಅನ್ನು ಮತ್ತಷ್ಟು ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ಅವಕಾಶವನ್ನು ನೀಡುತ್ತದೆ.
ಇದಲ್ಲದೇ, ಈ ಪಾಲುದಾರಿಕೆಯು ಫ್ಲಿಪ್‍ಕಾರ್ಟ್‍ನ ಫ್ಯಾಷನ್ ಪೋರ್ಟ್‍ಫೋಲಿಯೋವನ್ನು ನಿರಂತರವಾಗಿ ವಿಸ್ತರಣೆ ಮಾಡಲು ಅವಕಾಶ ನೀಡಲಿದ್ದು, ಭಾರತದಾದ್ಯಂತ ಇತ್ತೀಚಿನ ಟ್ರೆಂಡ್‍ಗಳನ್ನು ಗ್ರಾಹಕರಿಗೆ ತಲುಪಿಸಲು ಸಾಧ್ಯವಾಗುತ್ತದೆ.
ಈ ಬಗ್ಗೆ ಮಾತನಾಡಿದ ಫ್ಲಿಪ್‍ಕಾರ್ಟ್ ಫ್ಯಾಷನ್‍ನ ಉಪಾಧ್ಯಕ್ಷ ನಿಶಿತ್ ಗಾರ್ಗ್ ಅವರು, ''ಫ್ಲಿಪ್‍ಕಾರ್ಟ್‍ನಲ್ಲಿ ಮ್ಯಾಕ್ಸ್ ಫ್ಯಾಷನ್ ಅನ್ನು ಪರಿಚಯಿಸಲು ನಮಗೆ ಅತ್ಯಂತ ಸಂತಸವೆನಿಸುತ್ತಿದೆ. ಇದು ಈ ವರ್ಷದ ಅತ್ಯಂತ ದೊಡ್ಡ ಪಾಲುದಾರಿಕೆಯಾಗಿದೆ. ದೇಶಾದ್ಯಂತ ಇರುವ ಗ್ರಾಹಕರಿಗೆ ಇತ್ತೀಚಿನ ಟ್ರೆಂಡ್‍ನ ಫ್ಯಾಷನ್ ಉಡುಪುಗಳನ್ನು ತಲುಪಿಸುವುದರಲ್ಲಿ ನಾವು ನಂಬಿಕೆ ಇಟ್ಟಿದ್ದೇವೆ ಮತ್ತು ಮ್ಯಾಕ್ಸ್ ಫ್ಯಾಷನ್‍ನೊಂದಿಗಿನ ನಮ್ಮ ಸಹಭಾಗಿತ್ವವು ಈ ದಿಸೆಯಲ್ಲಿ ಕಾರ್ಯನಿರ್ವಹಿಸಲಿದೆ.
ನಾವು ಮೆಟ್ರೋಗಳು ಮತ್ತು 2+ ದರ್ಜೆಯ ಪ್ರದೇಶದ ಪಟ್ಟಣಗಳಲ್ಲಿರುವ ಗ್ರಾಹಕರ ನಡುವಿನ ಅಂತರಕ್ಕೆ ಸೇತುವೆಯಾಗಿ ಕಾರ್ಯ ನಿರ್ವಹಿಸಲಿದ್ದೇವೆ. ಈ ಮೂಲಕ ಗ್ರಾಹಕರು ಅತ್ಯುತ್ತಮವಾದ ಫ್ಯಾಷನ್ ಟ್ರೆಂಡ್‍ಗಳನ್ನು ಪಡೆಯಬಹುದಾಗಿದೆ.