
ಎಸ್ಎಸ್ಎಲ್ಸಿಯ ಪರಿಕ್ಷೆಗಳು ಎಂದಿನಿಂದ ಆರಂಭವಾಗಲಿದೆ ಗೊತ್ತ..?
ಬೆಂಗಳೂರು : ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕರೋನಾ ವೈರಸ್‌ನ ಸೋಂಕಿನ ಭೀತಿಯಿಂದಾಗಿ ರಾಜ್ಯಸರ್ಕಾರ ಮಾರ್ಚ್ 27ರಂದು ನಡೆಯಬೇಕಿದ್ದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮುಂದೂಡುವಂತೆ ಆದೇಶವನ್ನು ಹೊರಡಿಸಲಾಗಿತ್ತಿತ್ತು. ಆದರೆ ಶಿಕ್ಷಣ ಇಲಾಖೆ ಲಾಕ್ ಡೌನ್ ಬಳಿಕ ಎಸ್‌ಎಸ್‌ಎಲ್‌ಸಿ ಹಾಗೂ ೭ನೇತರಗತಿ ಪರೀಕ್ಷೆಗಳನ್ನು ನಡೆಸಲಾಗುವುದು ಎಂದು ತಿಳಿಸಿದೆ ಆಗಿದ್ದ ಮುಂದೂಡಿದ ಪರೀಕ್ಷೆಗಳು ಎಂದು ಆರಂಭವಾಗುತ್ತದೆ ಎಂಬುದರ ಬಗ್ಗೆ ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೇಲ್ಸ್.
ಕೊರೊನಾ ವೈರಸ್ ಸೋಂಕಿನ ಭೀತಿಯ ಹಿನ್ನಲೆಯಲ್ಲಿ ರಾಜ್ಯದ ೭ರಿಂದ ೧೦ನೇ ತರಗತಿ ಪರೀಕ್ಷೆಗಳನ್ನು ಮಾರ್ಚ್ 31 2020 ನಂತ್ರ ನಡೆಸಲಾಗುತ್ತದೆ ಎಂಬುದಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಘೋಷಣೆ ಮಾಡಿತ್ತು. ಇದೀಗ ಏಪ್ರಿಲ್ ೧೪, ೨೦೨೦ರ ವರೆಗೆ ಇಡೀ ಭಾರತವೇ ಲಾಕ್ ಡೌನ್ ಆಗಿರುವ ಹಿನ್ನಲೆಯಲ್ಲಿ, ೭ರಿಂದ ೧೦ನೇ ತರಗತಿಯ ಪರೀಕ್ಷೆಯನ್ನು ಏಪ್ರಿಲ್ ೨೦, ೨೦೨೦ರ ವರೆಗೆ ಮುಂದೂಡಿಕೆ ಮಾಡಿ ಸಾರ್ವಜನಿಕ ಶಿಕ್ಷಣ ಇಲಾಖೆ ಮುಂದೂಡಿದ ಆದೇಶ ಹೊರಡಿಸಿದೆ.
ಈ ಕುರಿತಂತೆ ಸುತ್ತೋಲೆ ಹೊರಡಿಸಿರುವ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು, ನೋವೆಲ್ ಕೊರೊನಾ ವೈರಸ್ ಕೋವಿಡ್-19 ಸೋಂಕು ತಡೆಗಟ್ಟುವಿಕೆಗೆ ಮುಂಜಾಗ್ರತ ಕ್ರಮವಾಗಿ ದಿನಾಂಕ ೧೪-೦೩-೨೦೨೦ರಲ್ಲಿ 7ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನು ೩೧-೦೩-೨೦೨೦ರವರೆಗೆ ಮುಂದೂಡಿ ಪರೀಕ್ಷಾ ಪೂರ್ವಸಿದ್ಧತಾ ರಜೆಯನ್ನು ಘೋಷಿಸಲಾಗಿತ್ತು.
ಆದ್ರೇ ರಾಜ್ಯದಲ್ಲಿ ಕೊರೊನಾ ವೈರಸ್ ಹರಡುತ್ತಿರುವುದು ಮುಂದುವರೆಯುತ್ತಿರುವುದರಿಂದ ಹಾಗೂ ದಿನಾಂಕ 15-15-04-2020ರವರೆಗೆ ಇಡೀ ರಾಷ್ಟ್ರವನ್ನು ಲಾಕ್ ಡೌನ್ ಮಾಡುವಂತೆ ಮಾನ್ಯ ಪ್ರಧಾನ ಮಂತ್ರಿಗಳು ಘೋಷಿಸಿರುವ ಹಿನ್ನಲೆಯಲ್ಲಿ ಈ ಕೆಳಕಂಡ ಪ್ರಕ್ರಿಯೆಗಳನ್ನು ದಿನಾಂಕ ೨೦-೦೪-೨೦೨೦ರ ವರೆಗೆ ಮುಂದೂಡಲಾಗಿದೆ.
೭ರಿಂದ ೯ನೇ ತರಗತಿಯ ಪರೀಕ್ಷೆಗಳು
ಎಸ್ ಎಸ್ ಎಲ್ ಸಿ ಪರೀಕ್ಷೆಗಳು
ಆರ್ ಟಿ ಇ ಅಡಿಯಲ್ಲಿ ಮಕ್ಕಳ ದಾಖಲಾತಿ ಪ್ರಕ್ರಿಯೆಗಳು
ಶಾಲೆಗಳಲ್ಲಿ ೨೦೨೦-೨೧ನೇ ಸಾಲಿಗೆ ದಾಖಲಾತಿ ಪ್ರಕ್ರಿಯೆಗಳು
ಮೇಲ್ಕಂಡ ಎಲ್ಲಾ ಪ್ರಕ್ರಿಯೆಗಳ ಪರಿಕಷ್ಕೃತ ವೇಳಾ ಪಟ್ಟಿಯನ್ನು ದಿನಾಂಕ 24-04-2020 ರ ನಂತ್ರ ಪ್ರಕಟಿಲಾಗುವುದು. ಈ ವಿಷಯವನ್ನು ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ವಾಟ್ಸ್ ಅಪ್, ಎಸ್ ಎಂ ಎಸ್, ಇ ಮೇಲ್ ಅಥವಾ ಇತರೆ ಎಲೆಕ್ಟ್ರಾನಿಕ್ ಮಾಧ್ಯಮದ ಮೂಲಕ ರವಾನಿಸಲು ಶಾಲಾ ಮುಖ್ಯ ಶಿಕ್ಷಕರು, ಶಾಲಾ ಆಡಳಿತ ಮಂಡಳಿಯವರಿಗೆ ಸೂಚಿಸಿ ಸಾರ್ವಜನಿಕರ ಶಿಕ್ಷಣ ಇಲಾಖೆಯ ಆಯುಕ್ತರು ಆದೇಶ ಹೊರಡಿಸಿದ್ದಾರೆ.