ಕರ್ನಾಟಕದ ಮೊದಲ ಕೊರೋನಾ ಸೋಂಕಿತ ವ್ಯಕ್ತಿ ಸಂಪೂರ್ಣಗುಣಮುಖ, ಆಸ್ಪತ್ರೆಯಿಂದ ಮನೆಗೆ ತೆರಳಿದ ಟೆಕ್ಕಿ..!
ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕೊರೋನಾ ವೈರಸ್ ಸೋಂಕು ಇಂದು ಭಾರತದಲ್ಲೇ 700 ಗಡಿ ದಾಟಿದೆ ಹಾಗೂ ಕರ್ನಾಟಕದಲ್ಲಿ 64ರಲ್ಲಿದ್ದು ಮುಂದಿನ ದಿನಗಳಲ್ಲೂ ಕೂಡ ಮತ್ತಷ್ಟು ಹೆಚ್ಚಾಗುವ ಎಲ್ಲಾ ಲಕ್ಷಣಗಳೂ ಕೂಡ ಗೋಚರವಾಗುತ್ತಿದೆ. ಇದರ ಜೊತೆ ಜೊತೆಗೆ ಕೊರೋನಾ ಸೋಂಕು ದೃಡ ಪಟ್ಟ ವ್ಯಕ್ತಿಗಳು ಗುಣಮುಖರೂ ಆಗುತ್ತಿದ್ದಾರೆ ಎಂಬ ಸುದ್ದಿ ಜನರಲ್ಲಿ ಸ್ವಲ್ಪ ಸಮದಾನ ತಂದಿದೆ ಅಷ್ಟಕ್ಕೂ ಇಂದು ಒಬ್ಬ ವ್ಯಕ್ತಿ ಕೊರೋನಾ ಸೋಂಕಿನಿಂದ ಗುಣ ಮುಖನಾಗಿ ಮನೆಗೆ ತೆರಳಿದ್ದಾನೆ ಅಷ್ಟಕ್ಕೂ ಆ ವ್ಯಕ್ತಿ ಎಲ್ಲಿಯವನು ಗೊತ್ತಾ?
ರಾಜ್ಯದ ರಾಜಧಾನಿಗೆ, ಅಲ್ಲದೇ ರಾಜ್ಯಕ್ಕೆ ಮೊದಲ ಕೊರೊನಾ ವೈರಸ್ ಸೋಂಕು ಹೊತ್ತು ತಂದಿದ್ದಂತ ಮೊದಲ ಟೆಕ್ಕಿ, ಕೊರೊನಾ ವೈರಸ್ ಸೋಂಕಿನಿಂದ ಇದೀಗ ಸಂಪೂರ್ಣ ಗುಣಮುಖರಾಗಿದ್ದಾರೆ. ಇವರು ಬೆಂಗಳೂರಿನ ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಈಗ ಸಂಪೂರ್ಣವಾಗಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ
ಹೌದು.. ಅಮೇರಿಕಾದಿಂದ ಬೆಂಗಳೂರಿಗೆ ಆಗಮಿಸಿದ್ದ ಟೆಕ್ಕಿಯೊಬ್ಬರಿಗೆ ಕೊರೊನಾ ವೈರಸ್ ಸೋಂಕು ಕಳೆದ ತಿಂಗಳು ದೃಢ ಪಟ್ಟಿತ್ತು. ಅಲ್ಲದೇ ಇದೇ ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿನ ಮೊದಲ ಪ್ರಕರಣ ಕೂಡ ಆಗಿತ್ತು. ಇಂತಹ ವ್ಯಕ್ತಿಗೆ ನಿರಂತರವಾಗಿ ಅವಿರತವಾಗಿ ರಾಜೀವ್ ಗಾಂಧಿ ಆಸ್ಪತ್ರೆಯ ವೈದ್ಯರು ಚಿಕಿತ್ಸೆ ನೀಡಿದ ಪರಿಣಾಮವಾಗಿ, ಇಂದು ಸಂಪೂರ್ಣ ಗುಣಮುಖರಾಗಿದ್ದಾರೆ.
ಹೀಗಾಗಿ ಬೆಂಗಳೂರಿನ ವೈಟ್ ಫೀಲ್ಡ್ ಮೂಲದ ಮೊದಲ ಕೊರೊನಾ ಸೋಂಕಿತ ವ್ಯಕ್ತಿಯನ್ನು ಇಂದು ರಾಜೀವ್ ಗಾಂಧಿ ಆಸ್ಪತ್ರೆಯಿಂದ ಡಿಸ್ಟಾರ್ಜ್ ಮಾಡಲಾಯಿತು. ಈ ಮೂಲಕ ರಾಜ್ಯದಲ್ಲಿ ದಾಖಲಾದಂತ ಮೊದಲ ಕೊರೊನಾ ಸೋಂಕಿತ ಪ್ರಕರಣದ ವ್ಯಕ್ತಿ ಇದೀಗ ಸಂಪೂರ್ಣ ಗುಣಮುಖರಾಗಿದ್ದಾರೆ. ಅಲ್ಲದೇ ಕೊರೊನಾ ಭಯ ಪಡುವಂತ ಖಾಯಿಲೆ ಅಲ್ಲ, ನಿರಂತರವಾಗಿ ಚಿಕಿತ್ಸೆ ಮೂಲಕ ಗುಣಪಡಿಸಬಹುದು ಎಂಬ ಆಶಾ ಭಾವನೆಯನ್ನು ಹುಟ್ಟು ಹಾಕಿದ್ದಾರೆ.
ಆದರೆ ನಮ್ಮ ಜನರು ಈ ಖಾಯಿಲೆಯನ್ನು ತುಂಬಾ ತಾತ್ಸಾರದಿಂದ ನೋಡುವುದು ಸರ್ಕಾರ ವಿಧಿಸಿಸಿರುವ ಲಾಕ್ ಡೌನ್ ನಿರ್ಬಂದವನ್ನು ಮುರಿದು ಬೀದಿಗಿಳಿಯುವುದು ಕೊರೋನಾ ಮತ್ತಷ್ಟು ಹೆಚ್ಚಾಗಲು ಕಾರಣವಾಗಬಹುದು ಆದ್ದರಿಂದ ಮನೆಯಲ್ಲೇ ಇರಿ ಆರೋಗ್ಯವಾಗಿರಿ.