ರೋನಾ ವೈರಸ್ ಸೋಂಕಿನಿಂದ ಭಾರತದ ನಾಳೆಗಳ ಸ್ಥಿತಿಗತಿಗಳು ಹೇಗಿರಲಿವೆ ಗೊತ್ತಾ..?

Soma shekhar

ಕೊರೊನಾ ವೈರಸ್‌ನ ಸೋಂಕು ದಿನದಿಂದ ದಿನಕ್ಕೆ  ಹೆಚ್ಚಾಗುತ್ತಿದ್ದು ಈಗಾಗಲೇ ಪ್ರಪಂಚಾದ್ಯಂತ ಸಾಕಷ್ಟು ಜನರನ್ನು ಬಲಿತೆಗೆದು ಕೊಂಡಿದೆ ಪಾಪಿ ಕೊರೋನಾ. ಇದರ ಪ್ರಭಾವವನ್ನು ಕಡಿಮೆ ಮಾಡಿಸುವ ಉದ್ದೇಶದಿಂದ ಭಾರತದಲ್ಲಿ ಲಾಕ್ ಡೌನ್ ಮಾಡಲಾಗಿದ್ದರೂ ಕೂಡ ಭಾರತದಲ್ಲಿ ಕೊರೋನಾ ಇಂದ ಸಾವನ್ನಪ್ಪಿದವರ ಸಂಖ್ಯೆ 1೦೦ ಗಡಿ ಮೀರಿ ಬೆಳೆಯುತ್ತಿದೆ. ಇದರ ನಡುವೆಯೂ ಭಾರತಕ್ಕೆ ಆಘಾತಕಾರಿ ಸುದ್ದಿ ಜನರನ್ನು ದಂಗಾಗುವಂತೆ ಮಾಡಿದೆ.. ಅಷ್ಟಕ್ಕೂ ಅಂತಹ ವಿಷಯ ಏನು ಗೊತ್ತಾ? ಇಲ್ಲಿದೆ ನೋಡಿ.,.

 

 ಮಾರಕ ಕೊರೋನಾ ಸೋಂಕು ನಿಗ್ರಹದ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಘೋಷಿಸಿದ್ದ 21 ದಿನಗಳ ದೇಶವ್ಯಾಪಿ ಲಾಕ್ಡೌನ್ ಮುಕ್ತಾಯವಾದ ದಿನ ಸಮೀಪಿಸುತ್ತಿರುವಂತೆಯೇ, ಭಾರತದಲ್ಲಿನ ಪ್ರಸಕ್ತ ಕೊರೋನಾ ಸ್ಥಿತಿಗತಿಯೂ ವಿಶ್ವದಲ್ಲಿಯೇ ಅತಿಹೆಚ್ಚು ಸಾವು ಸಂಭವಿಸಿದ ರಾಷ್ಟ್ರಗಳಾದ ಅಮೆರಿಕ, ಸ್ಪೇನ್ಗಿಂತಲೂ ಗಂಭೀರವಾಗಿದೆ ಎಂಬ ಆಘಾತಕಾರಿ ಮಾಹಿತಿಯೊಂದು ಹೊರಬಿದ್ದಿದೆ.

 

ಹೀಗಾಗಿ ಒಂದು ವೇಳೆ ಲಾಕ್ಡೌನ್ ನಿಯಮಗಳನ್ನು ಮೀರಿ ಜನತೆ ಬೀದಿಗೆ ಬಂದಿದ್ದೇ ಆದಲ್ಲಿ ವಿಶ್ವದ ಯಾವುದೇ ದೇಶಕ್ಕಿಂತ ಹೆಚ್ಚಿನ ಸಾವು-ನೋವು ಭಾರತದಲ್ಲಿ ಸಂಭವಿಸುವ ಗಂಭೀರ ಆತಂಕವೊಂದು ಎದುರಾಗಿದೆ.

 

ಗಂಭೀರ ಪರಿಸ್ಥಿತಿ: ವಿದೇಶಗಳಿಗೆ ಹೋಲಿಸಿದರೆ ಮೇಲ್ನೋಟಕ್ಕೆ ಭಾರತದ್ದು ಉತ್ತಮ ಸಾಧನೆ ಎಂದು ಕಂಡು ಬಂದರೂ, ಅಮೆರಿಕ, ಸ್ಪೇನ್ ಮತ್ತು ಚೀನಾದಲ್ಲಿ ಸೋಂಕಿತರ ಸಂಖ್ಯೆ 5೦೦೦-6೦೦೦ ಇದ್ದಾಗ, ಸಾವಿನ ಸಂಖ್ಯೆ ಇನ್ನೂ ಕಡಿಮೆ ಇತ್ತು ಎಂದು ದಾಖಲೆಗಳು ಹೇಳಿವೆ. ಹೀಗಾಗಿ ಸೋಂಕು ನಿಗ್ರಹಕ್ಕೆ ಭಾರತ ಇನ್ನಿಲ್ಲದ ಯತ್ನ ಮಾಡಿದ ಹೊರತಾಗಿಯೂ ಪರಿಸ್ಥಿತಿ ಭಾರತದ ಕೈ ಜಾರಿಹೋಗಿದೆಯೇ ಎಂಬ ಅನುಮಾನಕ್ಕೂ ಕಾರವಾಗಿದೆ.

 

ಒಂದು ವೇಳೆ ಲಾಕ್ಡೌನ್ ಇನ್ನಷ್ಟು ದಿನ ವಿಸ್ತರಣೆ ಮಾಡದೇ ಹೋದಲ್ಲಿ ಮತ್ತು ಅದನ್ನು ಕಟ್ಟುನಿಟ್ಟಾಗಿ ಜಾರಿಗೆ ತರದೇ ಹೋದಲ್ಲಿ ಭಾರೀ ಅಪಾಯವೊಂದು ದೇಶದ ಮೇಲೇರುವ ಎಲ್ಲಾ ಸಾಧ್ಯತೆಗಳಿವೆ. ಮುಂದಿನ 10 ದಿನಗಳು ತುಂಬಾ ಮಹತ್ವದ್ದಾಗಿದ್ದು, ಜನತೆ ಕಟ್ಟೆಚ್ಚರ ವಹಿಸಬೇಕಾಗಿದೆ ಎಂದು ತಜ್ಞರು ತಿಳಿಸಿದ್ದಾರೆ. ಭಾರತದಲ್ಲಿ ಸೋಂಕಿತರ ಸಂಖ್ಯೆ 100 ರಿಂದ 10000 ಕ್ಕೆ ತಲುಪಲು 15 ದಿನ ತೆಗೆದುಕೊಂಡಿತ್ತು. ಆದರೆ 1000 ದಿಂದ 5೦೦೦ಕ್ಕೆ ತಲುಪಲು ಕೇವಲ 9 ದಿನ ತೆಗೆದುಕೊಂಡಿದೆ. ಅಂದರೆ 9 ದಿನಗಳಲ್ಲಿ 5 ಪಟ್ಟು ಹೆಚ್ಚಿದೆ.

ಇತರೆ ದೇಶಗಳಲ್ಲಿ ಏನಾಗಿತ್ತು?

 

ಪ್ರತಿ 5  ಸಾವಿರ ಸೋಂಕಿಗೆ ಅತಿಹೆಚ್ಚು ಸಾವು ಸಂಭವಿಸಿದ ದೇಶಗಳ ಪೈಕಿ ಭಾರತ 149 ಸಾವಿನೊಂದಿಗೆ 8ನೇ ಸ್ಥಾನದಲ್ಲಿದೆ. ಅತಿ ಹೆಚ್ಚು ಸೋಂಕು ಬೆಳಕಿಗೆ ಬಂದಿರುವ ಮತ್ತು ಹೆಚ್ಚು ಸಾವು ಸಂಭವಿಸಿರುವ ದೇಶಗಳಾದ ಫ್ರಾನ್ಸ್, ಇರಾನ್, ಚೀನಾ, ಅಮೆರಿಕ ನಂತರದ ಸ್ಥಾನಗಳಲ್ಲಿವೆ! ಇದು ಆತಂಕಕಕಾರಿಯಾಗಿದೆ.

 

 

Find Out More:

Related Articles: