ಹಾಟ್ಸ್ ಪಾಟ್ ಪಟ್ಟಿಯಲ್ಲಿ ಡೇಂಜರ್ ಜೋನ್ ನಲ್ಲಿರುವ ಕರ್ನಾಕದ ಜಿಲ್ಲೆಗಳು ಯಾವುವು ಗೊತ್ತಾ..? ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೇಲ್ಸ್..
ಕೊರೋನಾ ಬೈರಸ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಇದನ್ನು ತಡೆಗಟ್ಟಲು ಸಾಕಷ್ಟು ಕ್ರಮಗಳನ್ನು ಕೈಗೊಳ್ಳಲಾಗಿದೆ 21 ದಿನಗಳ ಕಾಲ ಲಾಕ್ ಡೌನ್‌ನ ಮೊದಲ ಹಂತ ಮುಗಿದ ಮೇಲೆ ಏಪ್ರಿಲ್ 14 ರ ಮಧ್ಯರಾತ್ರಿಯಿಂದ ಎರಡನೇ ಹಂತದ ಲಾಕ್ ಡೌನ್ ಅನ್ನು ಘೋಷಣೆಯನ್ನು ಮಾಡಲಾಗಿದೆ.. ಎರಡನೇ ಹಂತದ ಲಾಕ್ ಡೌನ್‌ನಲ್ಲಿ ಎಲ್ಲಾ ನಿಯಮಗಳು ಕಟ್ಟುನಿಟ್ಟಾಗಿದ್ದು. ಈ ಭಾರಿ ಕೊರೋನಾ ಜಾಟ್ ಸ್ಪಾಟ್ ಪಟ್ಟಿ ಬಿಡುಗಡೆಯಾಗಿದೆ. ಅಷ್ಟಕ್ಕೂ ಈ ಪಟ್ಟಿಯಲ್ಲಿ ಏನಿದೆ ಗೊತ್ತಾ..?
ದೇಶವನ್ನೇ ಆಲ್ಲೋಲ ಕಲ್ಲೋಲ ಮಾಡಿರುವ ಮಹಾಮಾರಿ ಕೊರೊನಾ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಹಲವು ಕ್ರಮಗಳನ್ನ ಕೈಗೊಂಡಿದ್ದು, ದೇಶದಲ್ಲಿ 170 ಜಿಲ್ಲೆಗಳು ಕೊರೊನಾ ವೈರಸ್ ಹಾಟ್ಸ್ಪಾಟ್ಗಳಾಗಿವೆ. ಇದರಲ್ಲಿ 207 ಜಿಲ್ಲೆಗಳು ಅಪಾಯದಲ್ಲಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಅತಿ ಹೆಚ್ಚು ಕರೊನಾ ಬಾಧಿತವಾಗಿರುವ ರಾಷ್ಟ್ರದ 170 ಜಿಲ್ಲೆಗಳ ಪೈಕಿ ಕರ್ನಾಟಕದ 8 ಜಿಲ್ಲೆಗಳು ಕೂಡ ಸೇರಿವೆ. ಯಾವ ಜಿಲ್ಲೆಗಳಲ್ಲಿ ಸೋಂಕಿತರ ಸಂಖ್ಯೆ ಜಾಸ್ತಿ ಇದೆಯೋ ಅಂಥಹ ಜಿಲ್ಲೆಗಳನ್ನು ಕೇಂದ್ರ ಆರೋಗ್ಯ ಸಚಿವಾಲಯ ಹಾಟ್ ಸ್ಪಾಟ್ ಎಂದು ಗುರುತಿಸಿದೆ.
ಕರ್ನಾಟಕದ ಬೆಂಗಳೂರು ನಗರ, ಮೈಸೂರು, ಬೆಳಗಾವಿ, ದಕ್ಷಿಣ ಕನ್ನಡ, ಬೀದರ್, ಕಲಬುರಗಿ, ಬಾಗಲಕೋಟೆ ಮತ್ತು ಧಾರವಾಡ ಜಿಲ್ಲೆಗಳನ್ನು ಹಾಟ್ ಸ್ಪಾಟ್ ಎಂದು ಗುರುತಿಸಲಾಗಿದೆ. ಬುಧವಾರ ಸಂಜೆ ಆರೋಗ್ಯ ಇಲಾಖೆ ದೇಶದಲ್ಲಿ ಕೊರೊನಾ ಸೋಂಕು ಇರುವ ಮತ್ತು ಇಲ್ಲದಿರುವ ಜಿಲ್ಲೆಗಳನ್ನ ಒಟ್ಟು ಮೂರು ವಲಯಗಳಲ್ಲಿ ವಿಂಗಡಿಸಿದೆ. ಇದರಲ್ಲಿ ಒಂದು ಹಾಟ್ಸ್ಪಾಟ್, ಎರಡನೆಯದ್ದು ನಾನ್ ಹಾಟ್ಸ್ಪಾಟ್ ಮತ್ತು ಮೂರನೆಯದ್ದು ಹಸಿರು ವಲಯದ ಜಿಲ್ಲೆಗಳು.
ಈಗಾಗಲೇ ಕೊರೊನಾ ಸೋಂಕು ದೃಢಪಟ್ಟಿರುವ ಜಿಲ್ಲೆಗಳಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಸೋಂಕಿತರು ಪತ್ತೆಯಾಗುವ ಸಾಧ್ಯತೆಗಳು ದಟ್ಟವಾಗಿರುವ ಜಿಲ್ಲೆಗಳನ್ನ ಹಾಟ್ಸ್ಪಾಟ್ ಜಿಲ್ಲೆಗಳು ಎಂದು ಪರಿಗಣಿಸಲಾಗಿದೆ.
ಹಾಟ್ಸ್ಪಾಟ್ನಲ್ಲಿ ಒಟ್ಟು 170 ಜಿಲ್ಲೆಗಳಿವೆ. ಇಲ್ಲಿ ಕೊರೊನಾ ನಿಯಂತ್ರಣಕ್ಕೆ ಕ್ಲಸ್ಟರ್ ಲಾಕ್ಡೌನ್ ಮಾದರಿ ಸೇರಿದಂತೆ ಎಲ್ಲಾ ಅಗತ್ಯ ಕಠಿಣ ಕ್ರಮಗಳನ್ನೂ ಕೈಗೊಳ್ಳಲಾಗುತ್ತದೆ. ದೇಶಾದ್ಯಂತ ಒಟ್ಟು 170 ಜಿಲ್ಲೆಗಳನ್ನು ಹಾಟ್ ಸ್ಪಾಟ್ ಎಂದು ಗುರುತಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲಾವ್ ಅಗರವಾಲ್ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಕೊರೊನಾ ಸೋಂಕು ದೃಢಪಟ್ಟಿರುವ ಪ್ರಕರಣಗಳಿದ್ದು, ಕೆಲ ದಿನಗಳಿಂದ ಯಾವುದೇ ಹೊಸ ಪ್ರಕರಣಗಳು ಕಂಡು ಬಂದಿಲ್ಲ ಅಂದರೆ ಈ ಜಿಲ್ಲೆಗಳನ್ನ ನಾನ್ ಹಾಟ್ಸ್ಪಾಟ್ ಜಿಲ್ಲೆಗಳು ಅಂತ ಪರಿಗಣಿಸಲಾಗಿದೆ.
ಇಲ್ಲೂ ಸಹ ನಿರ್ಬಂಧಗಳು ಇರುತ್ತದೆ, ಆದರೆ ಒಂದಷ್ಟು ವಿನಾಯಿತಿಯೂ ಇರುತ್ತೆ. ದೇಶದ ಒಟ್ಟು 207 ಜಿಲ್ಲೆಗಳು ನಾನ್ ಹಾಟ್ಸ್ಪಾಟ್ನಲ್ಲಿ ಬರುತ್ತವೆ. ಇಲ್ಲಿವರೆಗೂ ಒಂದೂ ಕೊರೊನಾ ಪ್ರಕರಣಗಳು ಪತ್ತೆಯಾಗದೇ ಇರುವ ಜಿಲ್ಲೆಗಳನ್ನ ಹಸಿರು ವಲಯದಲ್ಲಿರುವ ಜಿಲ್ಲೆಗಳು ಎಂದು ಪರಿಗಣಿಸಲಾಗಿದೆ.
ಈ ಜಿಲ್ಲೆಗಳಲ್ಲಿ ಲಾಕ್ಡೌನ್ ಸಡಿಲಿಕೆ ಮಾಡಲಾಗುತ್ತದೆ. ಆದರೆ, ಆಯಾ ರಾಜ್ಯ ಸರ್ಕಾರಗಳು ಯಾವ ರೀತಿಯ ವಿನಾಯಿತಿಯನ್ನ ನೀಡುತ್ತವೆಯೋ ಅವು ಮಾತ್ರ ಇಲ್ಲಿ ಜಾರಿಯಲ್ಲಿ ಇರುತ್ತವೆ. ಹಾಟ್ಸ್ಪಾಟ್ ಹಾಗೂ ನಾನ್ ಹಾಟ್ಸ್ಪಾಟ್ ಜಿಲ್ಲೆಗಳನ್ನ ಹೊರತುಪಡಿಸಿ ಮಿಕ್ಕೆಲ್ಲಾ ಜಿಲ್ಲೆಗಳೂ ಹಸಿರು ವಲಯದ ಅಡಿಯಲ್ಲಿ ಬರುತ್ತವೆ.
ಇದು ಕೇಂದ್ರ ಸರ್ಕಾರ ಘೋಷಿಸಿರುವ ಹಾಟ್ಸ್ಪಾಟ್, ನಾನ್ ಹಾಟ್ಸ್ಪಾಟ್ ಹಾಗೂ ಹಸಿರು ವಲಯದ ಜಿಲ್ಲೆಗಳ ಪಟ್ಟಿಯನ್ನು ಸಂದರ್ಭಕ್ಕೆ ತಕ್ಕಂತೆ ಬದಲಿಸುವ ಅಧಿಕಾರ ಆಯಾ ರಾಜ್ಯ ಸರ್ಕಾರ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಇರುತ್ತದೆ ಅಂತ ಕೇಂದ್ರ ಆರೊಗ್ಯ ಇಲಾಖೆ ಹೇಳಿದೆ.