ಇಡೀ ವಿಶ್ವದಾಧ್ಯಂತ ಕೊರೋನಾ ವೈರಸ್ ನನ್ನು ಗೆದ್ದು ಬಂದವರ ಸಂಖ್ಯೆ ಎಷ್ಟು ಗೊತ್ತಾ..?
ಕೊರೋನಾ ವೈರಸ್ ಇಂದಾಗಿ ಇಡೀ ವಿಶ್ವವೇ ನಲುಗಿ ಹೋಗಿದೆ, ಈ ವೈರಸ್ ನಿಂದ ವಿಶ್ವ ದಲ್ಲಿ ಲಕ್ಷಾಂತರ ಮಂದಿ ಸಾವನ್ನಪ್ಪಿದ್ದಾರೆ, ಇನ್ನು 73ಲಕ್ಷ ಮಂದಿ ಕೊರೋನಾ ಸೋಂಕನ್ನು ಹೊಂದಿದ್ದಾರೆ, ಇದರ ಜೊತೆಗೆ ಕೊರೋನಾ ವೈರಸ್ ಇಂದ ಗುಣ ಮುಖರಾದ ಸಂಖ್ಯೆಯೂ ಕೂಡ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಅಷ್ಟಕ್ಕೂ ಇದುವರೆಗೂ ಕೊರೋನಾ ಸೋಂಕಿನಿಂದ ಎಷ್ಟು ಮಂದಿ ಗುಣಮುಕರಾಗಿದ್ದಾರೆ ಗೊತ್ತಾ..?
ಅಗೋಚರ ವೈರಾಣು ದಾಳಿಯಿಂದ ಜಗತ್ತು ತಳಮಳಗೊಂಡಿದ್ದು, ಹೆಮ್ಮಾರಿ ಪಿಡುಗಿಗೆ ಸಾವಿನ ಸಂಖ್ಯೆ 4 ಲಕ್ಷ 6 ಸಾವಿರ ದಾಟಿದೆ. ಅಲ್ಲದೇ ಸುಮಾರು 71 ಲಕ್ಷ ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆ. ಇದರ ನಡುವೆಯೂ ವಿಶ್ವದಲ್ಲಿ 34.62 ಲಕ್ಷ ರೋಗಿಗಳು ಚೇತರಿಸಿಕೊಂಡಿದ್ದಾರೆ ಅಥವಾ ಗುಣಮುಖರಾಗಿದ್ದಾರೆ. ಡೆಡ್ಲಿ ಕೊರೊನಾ ಹಾವಳಿಯಿಂದ ಜಗತ್ತಿನ ನಾನಾ ದೇಶಗಳಲ್ಲಿ ಸೋಂಕು ಮತ್ತು ಸಾವು ಸಂಖ್ಯೆಯಲ್ಲಿ ಮತ್ತೆ ಭಾರೀ ಏರಿಕೆ ಕಂಡುಬಂದಿದೆ.
ನಿನ್ನೆ ಮಧ್ಯರಾತ್ರಿವರೆಗೆ ಲಭಿಸಿದ ಮಾಹಿತಿ ಪ್ರಕಾರ ಜಗತ್ತಿನಾದ್ಯಂತ ಈವರೆಗೆ 4,06,207 ಮಂದಿ ಸಾವಿಗೀಡಾಗಿದ್ದು, 70,92,919 ಸೋಂಕು ಪ್ರಕರಣಗಳು ವರದಿಯಾಗಿವೆ. ಸಕ್ರಿಯ ಪ್ರಕರಣಗಳ ಸಂಖ್ಯೆ 32.24 ಲಕ್ಷಕ್ಕೇರಿದೆ. ಅಲ್ಲದೇ ಇನ್ನೂ 53,748 ರೋಗಿಗಳ ಸ್ಥಿತಿ ಶೋಚನೀಯವಾಗಿದ್ದು, ಸಾವಿನ ಸಂಖ್ಯೆಯಲ್ಲಿ ಭಾರೀ ಹೆಚ್ಚಳವಾಗುವ ಆತಂಕವಿದೆ. ನಾಳೆ ವೇಳೆಗೆ ಸಾವಿನ ಸಂಖ್ಯೆ 4.11 ಲಕ್ಷ ಮತ್ತು ಗೋಗಿಗಳ ಪ್ರಮಾಣ 73 ಲಕ್ಷ ದಾಟುವ ಆತಂಕವಿದೆ.
ವ್ಯಾಪಕ ಸಾವು-ನೋವು ಮತ್ತು ಸೋಂಕು ಪ್ರಕರಣಗಳು ಹೆಚ್ಚಾಗುತ್ತಿರುವ ಮಧ್ಯೆ ರೋಗಿಗಳ ಚೇತರಿಕೆ/ಗುಣಮುಖ ಪ್ರಮಾಣದಲ್ಲೂ ವೃದ್ದಿ ಕಂಡು ಬಂದಿದೆ. ವಿಶ್ವದಲ್ಲಿ ಈವರೆಗೆ 34,62,185 ಮಂದಿ ರೋಗಿಗಳು ಚೇತರಿಸಿಕೊಂಡಿದ್ದಾರೆ ಮತ್ತು ಗುಣಮುಖರಾಗಿದ್ದಾರೆ. ಅಮೆರಿಕ, ಬ್ರೆಜಿಲ್, ರಷ್ಯಾ, ಇಂಗ್ಲೆಂಡ್ ಮತ್ತು ಭಾರತ - ಅತಿ ಹೆಚ್ಚು ಸಾವು ಮತ್ತು ಸೋಂಕು ಸಂಭವಿಸಿದ ವಿಶ್ವದ ಟಾಪ್ ಫೈವ್ ದೇಶಗಳಾಗಿವೆ.
ಭಾರೀ ಸಂಕಷ್ಟಕ್ಕೆ ಸಿಲುಕಿರುವ ದೇಶಗಳಲ್ಲಿ ಸ್ಪೇನ್, ಇಟಲಿ, ಫ್ರಾನ್ಸ್, ಜರ್ಮನಿ, ಮತ್ತು ಟರ್ಕಿ ದೇಶಗಳಿವೆ. ಅತಿ ಹೆಚ್ಚು ಸೋಂಕು ಮತ್ತು ಸಾವು ಪಟ್ಟಿಯಲ್ಲಿ ಈ ಹಿಂದೆ 9ನೇ ಸ್ಥಾನದಲ್ಲಿದ್ದ ಭಾರತ ಈಗ ಸ್ಪೇನ್ನನ್ನು ಹಿಂದಿಕ್ಕೆ ಐದನೇ ಸ್ಥಾನದಲ್ಲಿದೆ. ಏಷ್ಯಾ ಖಂಡದಲ್ಲಿ ಚೀನಾ, ದಕ್ಷಿಣ ಕೊರಿಯಾ, ಪಾಕಿಸ್ತಾನ ಸೇರಿದಂತೆ ಅನೇಕ ದೇಶಗಳಲ್ಲಿ ಸೋಂಕು ಮತ್ತು ಸಾವಿನ ಪ್ರಮಾಣದಲ್ಲಿ ಏರಿಕೆಯಾಗಿದೆ. ಕೊರೊನಾ ವೈರಸ್ ಕೇಂದ್ರ ಬಿಂದು ಚೀನಾದ ವುಹಾನ್ ನಗರದಲ್ಲಿಯೂ ಹೊಸ ಪಾಸಿಟಿವ್ ಕೇಸ್ಗಳು ಕಂಡುಬರುತ್ತಿವೆ.
ಅಮೆರಿಕ, ಯುರೋಫ್, ಆಫ್ರಿಕಾ ಖಂಡಗಳ ಅನೇಕ ರಾಷ್ಟ್ರಗಳೂ ಕೂಡ ವೈರಸ್ ಹಾವಳಿಯಿಂದ ಕಂಗೆಟ್ಟಿವೆ. ಕೆಲವು ದೇಶಗಳಲ್ಲಿ ಸೋಂಕು ಮತ್ತು ಸಾವಿನ ಪ್ರಕರಣಗಳಲ್ಲಿ ಸ್ವಲ್ಪ ಇಳಿಕೆ ಕಂಡುಬಂದಿರುವುದು ಸಮಾಧಾನಕರ ಸಂಗತಿಯಾಗಿದೆ.