ದೇಶದ ಅತೀ ದೊಡ್ಡ ಕೊರೋನಾ ಚಿಕಿತ್ಸಾ ಘಟಕ ಸ್ಥಾಪನೆ: ಈ ಘಟಕ ಸ್ಥಾಪನೆಯಾಗಿರುವುದು ಎಲ್ಲಿ ಗೊತ್ತಾ..?

Soma shekhar

ದೇಶದಲ್ಲಿ ಕೊರೋನಾ ದಿನದಿಂದ ದಿನಕ್ಕೆ ದಿನಕ್ಕೆ ಹೆಚ್ಚಾಗುತ್ತಿದ್ದು ಅದರಲ್ಲೂ ದೇಶದ ರಾಜಧಾನಿ ದೆಹಲಿಯಲ್ಲಿ ಸಾಕಷ್ಟು ಪ್ರಮಾಣದ ಸೋಂಕು ಪತ್ತೆಯಾಗುತ್ತಿದೆ. ಈ ಸೋಂಕನ್ನು ತಡೆಯಲು ಎಷ್ಟೇ ಪ್ರಯತ್ನಿಸಿದರೂ ಕೂಡ ಕೈ ಮೀರಿ ಹೋಗುತ್ತಿದೆ. ಇದರಿದಾಗಿ ದೇಶದ ಜನರಲ್ಲಿ ಸಾಕಷ್ಟು ಆತಂಕ ನಿರ್ಮಾಣವಾಗುತ್ತಿದೆ. ಪ್ರತಿನಿತ್ಯ ಹೊಸ ಕೊರೋನಾ ಸೋಂಕುಗಳು ಹೆಚ್ಚಾಗುತ್ತಿರುವುದರಿಂದ ಆಸ್ಪತ್ರೆಗಳಲ್ಲಿ ಜಾಗದ ಕೊರತೆ ದೆಹಲಿಯಲ್ಲಿ ಉಂಟಾಗಿದೆ. ಇದಕ್ಕೆ ದೆಹಲಿ ಸರ್ಕಾರ ಕೊರೋನಾ ಸೋಂಕಿತರಿಗೆ ಚಿಕಿತ್ಸೆಯನ್ನು ನೀಡಲು ಅತೀ ದೊಡ್ಡ ಚಿಕಿತ್ಸಾ ಕೇಂದ್ರವನ್ನು ಸ್ಥಾಪಿಸಿದೆ.

 

ಹೌದು ಕೋವಿಡ್​ ರೋಗಿಗಳ ಚಿಕಿತ್ಸೆಗಾಗಿ ಜಗತ್ತಿನಲ್ಲೇ ಅತಿ ದೊಡ್ಡ ಚಿಕಿತ್ಸಾ ಕೇಂದ್ರ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಿರ್ಮಾಣಗೊಂಡಿದೆ. ಏಕಕಾಲಕ್ಕೆ 10,000 ರೋಗಿಗಳಿಗೆ ಇಲ್ಲಿ ಚಿಕಿತ್ಸೆ ದೊರೆಯಲಿದೆ. ದಕ್ಷಿಣ ದೆಹಲಿಯ ಛತ್ತರಪುರ್​ದಲ್ಲಿರುವ ರಾಧಾ ಸಓಮಿ ಸತ್ಸಂಗ ಬಿಯಾಸ್​ ಕೇಂದ್ರದ 300 ಎಕರೆ ಪ್ರದೇಶದಲ್ಲಿ ಇದನ್ನು ಸ್ಥಾಪಿಸಲಾಗಿದೆ. ಇಂಡೋ ಟಿಬೇಟಿಯನ್​ ಬಾರ್ಡರ್​ ಫೋರ್ಸ್​ನ (ಐಟಿಬಿಪಿ) ಹಾಗೂ ಇತರ ಕೇಂದ್ರೀಯ ಪಡೆಗಳ ವೈದ್ಯರು, ನರ್ಸ್​ಗಳು ಸೇರಿ 3,000ಕ್ಕೂ ವೈದ್ಯಕೀಯ ಸಿಬ್ಬಂದಿ ಇಲ್ಲಿ ಸೇವೆ ಸಲ್ಲಿಸಲಿದ್ದಾರೆ.

 

 

  • ಜಗತ್ತಿನಲ್ಲಿಯೇ ಅತಿ ಚಿಕಿತ್ಸಾ ಕೇಂದ್ರದ ವಿಶೇಷತೆಗಳೇನು ಎಂಬುದಕ್ಕೆ ಇಲ್ಲಿದೆ ವಿವರ.
    * ಕೋವಿಡ್​ ಚಿಕಿತ್ಸಾ ಕೇಂದ್ರವನ್ನು 300 ಎಕರೆಯಲ್ಲಿ ಸ್ಥಾಪಿಸಲಾಗಿದೆ. 70 ಎಕರೆಯನ್ನು ಕ್ವಾರಂಟೈನ್​ ಉದ್ದೇಶಕ್ಕೆ ಮೀಸಲಾಗಿರಿಸಲಾಗಿದೆ.
    * 10,200 ಹಾಸಿಗೆಗಳಿವೆ. ಈ ಪೈಕಿ ಶೇ.10ಕ್ಕೆ ಗಂಭೀರ ಸ್ಥಿತಿಯಲ್ಲಿರುವ ರೋಗಿಗಳಿಗಾಗಿ ಮೀಸಲಿಟ್ಟಿದ್ದು, ಆಮ್ಲಜನಕ ಪೂರೈಕೆ ಸೌಲಭ್ಯವಿದೆ.
    * ಎಲ್ಲ ಮಂಚಗಳನ್ನು ರಟ್ಟಿನಿಂದ ಮಾಡಲಾಗಿದ್ದು, ಪರಿಸರ ಸ್ನೇಹಿಯಾಗಿವೆ. ಫೋಮ್​ ಹಾಸಿಗೆಯನ್ನು ಹೊಂದಿವೆ.
    * ರೋಗಿಗಳ ಚಿಕಿತ್ಸೆಗಾಗಿ 1,000 ವೈದ್ಯರು 2,000 ನರ್ಸ್​ ಹಾಗೂ ಅರೆವೈದ್ಯಕೀಯ ಸಿಬ್ಬಂದಿ ರನ್ನು ನಿಯೋಜಿಸಲಾಗುತ್ತಿದೆ.
    * 500 ಮೂತ್ರಗೃಹ, 450 ಸ್ನಾನದ ಮನೆ ಹಾಗೂ ಬಯೋ ಟಾಯ್ಲೆಟ್​ಗಳು ಇಲ್ಲಿವೆ.
    * ಅಂದಾಜು 60 ಅಂಬುಲೆನ್ಸ್​ಗಳು, 50 ಇ-ರಿಕ್ಷಾಗಳು ಸ್ಥಳದಲ್ಲಿರಲಿವೆ.
  •  

* ಪ್ರತಿ ರೋಗಿಗೆ ಪ್ರತ್ಯೇಕ ಹಾಸಿಗೆ, ಕುರ್ಚಿ, ಪ್ಲಾಸ್ಟಿಕ್​ ಕಬೋರ್ಡ್​, ಡಸ್ಟ್​ಬಿನ್​, ಸೋಪು, ಪೇಸ್ಟ್​ ಕಿಟ್​ ಹಾಗೂ ಚಾರ್ಜಿಂಗ್​ ಪಾಯಿಂಟ್​ ನೀಡಲಾಗಿದೆ. * ರೋಗಿಗಳ ಮನರಂಜನೆಗಾಗಿ ಅಲ್ಲಲ್ಲಿ ದೊಡ್ಡ ಎಲ್​ಇಡಿ ಸ್ಕ್ರೀನ್​ಗಳನ್ನು ಅಳವಡಿಸಲಾಗಿದೆ.
* ದೆಹಲಿಯಲ್ಲಿ ಭಾರಿ ಸೆಖೆ ಇರುವುದರಿಂದ ಇಡೀ ಕೇಂದ್ರಕ್ಕೆ ಸೆಂಟ್ರಲೈಸ್ಡ್​ ಎಸಿ ವ್ಯವಸ್ಥೆ ಮಾಡಲಾಗಿದೆ. ಒಟ್ಟಾರೆ 18 ಸಾವಿರ ಟನ್​ ಸಾಮರ್ಥ್ಯದ ಎಸಿ ವ್ಯವಸ್ಥೆ ಇಲ್ಲಿದೆ.
* ಇಲ್ಲಿಗೆ ವಿದ್ಯುತ್​ ವ್ಯವಸ್ಥೆ ಕಲ್ಪಿಸಲು 22 ಕಿಮೀ. ದೂರದಷ್ಟು ಭೂಗತ ಕೇಬಲ್​, 20 ಟ್ರಾನ್ಸಫಾರ್ಮರ್​ ಅಳವಡಿಸಲಾಗಿದೆ.

 

Find Out More:

Related Articles: