ಶನಿವಾರ ರಾಜ್ಯದಲ್ಲಿ ದಾಖಲಾದ ಕೊರೋನಾ ಸೋಂಕಿತರ ಸಂಖ್ಯೆ ಎಷ್ಟು ಗೊತ್ತಾ..?
ಕೊರೋನಾ ವೈರಸ್ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ರಾಜ್ಯದ ಜನರ ನಿದ್ದೆಗೆಡಿಸುವಂತೆ ಮಾಡಿದೆ. ಪ್ರತಿನಿತ್ಯವೂ ಕೂಡ ರಾಜ್ಯದಲ್ಲಿ ಸಾವಿರದ ಗಡಿಯನ್ನು ದಾಟುತ್ತಿದೆ. ಅದೇ ರೀತಿ ಸಾವಿನ ಪ್ರಕರಣಗಳೂ ಕೂಡ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದರ ಜೊತೆಗೆ ರೋಗಿಗಳಿಗೆ ಸರಿಯಾದ ಸಮಯಕ್ಕೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ದೊರೆಯದೆ ಸಾವನ್ನಪ್ಪಿದವರ ಸಂಖ್ಯೆಯೂ ಕೂಡ ಹೆಚ್ಚಾಗುತ್ತಿದೆ. ಅಷ್ಟಕ್ಕೂ ಶನಿವಾರ ರಾಜ್ಯದಲ್ಲಿ ದಾಖಲಾದ ಕೊರೋನಾ ಸೋಂಕು ಎಷ್ಟು..?
ಕೋವಿಡ್ ಸೋಂಕಿತ ಸಂಖ್ಯೆ ಏರುಗತಿಯಲ್ಲಿ ಸಾಗುತ್ತಿರುವ ಜತೆಗೆ ಸಾವಿನ ಸಂಖ್ಯೆಯೂ ಹೆಚ್ಚುತ್ತಿರುವುದು ಇನ್ನಷ್ಟು ಆತಂಕ ಸೃಷ್ಟಿಮಾಡುತ್ತಿದೆ. ಒಂದೇ ದಿನ ರಾಜ್ಯದಲ್ಲಿ 1839 ಹೊಸ ಪ್ರಕರಣ ದಾಖಲಾಗಿದ್ದು, 42 ಮಂದಿ ಸಾವನ್ನಪ್ಪಿದ್ದಾರೆ. ಬೆಂಗಳೂರಿನಲ್ಲಿ 1172 ಮಂದಿ ಸೋಂಕಿತರು ಪತ್ತೆಯಾಗಿದ್ದು, 24 ಸಾವು ಸಾವನ್ನಪ್ಪಿದ್ದಾರೆ.
ರಾಜ್ಯದಲ್ಲಿ 226 ಮಂದಿ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶನಿವಾರ ಆರೋಗ್ಯ ಇಲಾಖೆ ನೀಡಿದ ವರದಿಯ ಪ್ರಕಾರ ರಾಜ್ಯದಲ್ಲಿ ಅತಿಹೆಚ್ಚು ಕೋವಿಡ್ ಪ್ರಕರಣ ಕಂಡು ಬಂದಿದೆ. ಅದರ ಜತೆಗೆ ಬೆಂಗಳೂರು ಇನ್ನಷ್ಟು ಅಪಾಯದಲ್ಲಿದೆ ಎಂಬುದು ಸ್ಪಷ್ಟವಾಗುತ್ತಿದೆ.
1839 ಹೊಸ ಪ್ರಕರಣ ಸೇರಿ ರಾಜ್ಯದಲ್ಲಿ ಒಟ್ಟು 21549 ಜನರಲ್ಲಿ ಸೋಂಕು ಪತ್ತೆಯಾಗಿದೆ. ಶನಿವಾರ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ 439 ಮಂದಿ ಸೇರಿದಂತೆ ಈವರೆಗೆ 9244 ಮಂದಿ ಗುಣಮುಖರಾಗಿ ಮನೆಗೆ ಹೋಗಿದ್ದಾರೆ. 11966 ಸೋಂಕಿತರಿಗೆ ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈವರೆಗೆ ಕೋವಿಡ್ ಮಹಾಮಾರಿಗೆ ರಾಜ್ಯದಲ್ಲಿ 335 ಮಂದಿ ಸಾವನ್ನಪ್ಪಿದ್ದಾರೆ.
ರಾಜಧಾನಿ ಬೆಂಗಳೂರಿನಲ್ಲಿ 1172, ದಕ್ಷಿಣ ಕನ್ನಡದಲ್ಲಿ 75, ಬಳ್ಳಾರಿಯಲ್ಲಿ 73, ಬೀದರ್‌ನಲ್ಲಿ 51, ಧಾರವಾಡದಲ್ಲಿ 45 ಹಾಗೂ ರಾಯಚೂರಿನಲ್ಲಿ 41, ಮೈಸೂರಿನಲ್ಲಿ 38, ಕಲಬುರಗಿ ಹಾಗೂ ವಿಜಯಪುರದಲ್ಲಿ ತಲಾ 37 ಪ್ರಕರಣ ಸೇರಿ ರಾಜ್ಯದಲ್ಲಿ 1893 ಪ್ರಕರಣ ದಾಖಲಾಗಿದೆ. ಬೆಂಗಳೂರು ನಗರದಲ್ಲಿ 195, ಕಲಬುರಗಿಯಲ್ಲಿ 46, ದಕ್ಷಿಣ ಕನ್ನಡದಲ್ಲಿ 26, ಬಳ್ಳಾರಿಯಲ್ಲಿ 20 ಸೇರಿ 439 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.
ಒಂದೇ ದಿನ 42 ಮಂದಿ ಸಾವನ್ನಪ್ಪಿರುವುದು ರಾಜ್ಯದಲ್ಲಿ ಎಲ್ಲ ರೀತಿಯಿಂದಲೂ ಎಚ್ಚರಿಕೆ ಗಂಟೆ ಭಾರಿಸಿದಂತಿದೆ. ಬೆಂಗಳೂರಿನ 24, ಧಾರವಾಡದ 3, ಬೀದರ್‌ನ 6, ಕಲಬುರಗಿಯ 3, ದಕ್ಷಿಣ ಕನ್ನಡದಲ್ಲಿ 4, ಹಾಸನ ಹಾಗೂ ಬೆಂಗಳೂರು ಗ್ರಾಮಾಂತರದಲ್ಲಿ ತಲಾ 1 ಸಾವು ಸಂಭವಿಸಿದೆ. ಕೋವಿಡ್ ಸತ್ತವರಲ್ಲಿ ಬಹುತೇಕರು 50 ವರ್ಷ ಮೇಲ್ಪಟ್ಟವರಾಗಿದ್ದಾರೆ. 9 ಮಂದಿ ಮಾತ್ರ 50ವರ್ಷಕ್ಕಿಂತ ಕಡಿಮೆ ಪ್ರಾಯದವರಾಗಿದ್ದಾರೆ. ಕೋವಿಡ್ ಲಕ್ಷಣ ಇಲ್ಲದ ಇಬ್ಬರು ಸಾವನ್ನಪ್ಪಿರುವುದು ಇನ್ನಷ್ಟು ಆತಂಕ ಸೃಷ್ಟಿಮಾಡಿದೆ. ಸತ್ತವರಲ್ಲಿ 26 ಪುರುಷರು ಹಾಗೂ 16 ಮಹಿಳೆಯರು ಸೇರಿದ್ದಾರೆ.