ಸೋಂಕಿತರ ಸಂಪರ್ಕವಿಲ್ಲದೆ ಕೊರೋನಾ ಸೋಂಕು ಹರಡುತ್ತದೆ..!! ಅದು ಹೇಗೆ ಗೊತ್ತಾ..?
ಕೊರೋನಾ ವೈರಸ್ ದಿನದಿಂದ ದಿನಕ್ಕೆ ತನ್ನ ರೂಪವನ್ನು ಬದಲಿಸಿಕೊಳ್ಳುತ್ತಲೇ ಇದೆ. ಈ ಮೊದಲು ಕೊರೋನಾ ಸೋಂಕಿತರು ಸಂಪರ್ಕಕ್ಕೆ ಬಂದರೆ ಕೊರೋನಾ ಹರಡುತ್ತಿತ್ತು. ಎಂದು ಹೇಳಲಾಗುತ್ತಿತ್ತು. ಆದರೆ ವಿಶ್ವ ಸಂಸ್ಥೆ ಕೊರೋನಾ ವೈರಸ್ ಹರಡುವ ಮತ್ತೊಂದು ಮಾರ್ಗದ ಮೂಲಕವೂ ಕೂಡ ತಿಳಿಸಿದ್ದಾರೆ. ಅಷ್ಟಕ್ಕೂ ಕೊರೋನಾ ವೈರಸ್ ಹರಡುವ ಮತ್ತೊಂದು ಮಾರ್ಗ ಏನು ಗೊತ್ತಾ..?
ಕಿಲ್ಲರ್ ಕೊರನಾ ಸೋಂಕಿನ ಕಣಗಳು ಗಾಳಿಯಲ್ಲೂ ಹರಡುತ್ತದೆ ಎಂಬ ವಿಜ್ಞಾನಿಗಳ ವಾದವನ್ನು ವಿಶ್ವ ಆರೋಗ್ಯ ಸಂಸ್ಥೆ ಒಪ್ಪಿಕೊಂಡಿದೆ. ಈ ಬಗ್ಗೆ ಹೇಳಿಕೆ ನೀಡಿರುವ ವಿಶ್ವಸಂಸ್ಥೆಯ ತಾಂತ್ರಿಕ ವಿಭಾಗದ ಮುಖ್ಯಸ್ಥ ಮರಿಯಾ ವ್ಯಾನ್ ಕೆರ್‍ಕೋವೆ ಅವರು ಕೋವಿಡ್ ಸೋಂಕು ಗಾಳಿಯಲ್ಲಿ ಹರಡುತ್ತದೆ ಎಂದು 32 ದೇಶಗಳ 239 ವಿಜ್ಞಾನಿಗಳು ಸಾಕ್ಷೀಕರಿಸಿರುವ ಅಂಶವನ್ನು ವಿಶ್ವ ಆರೋಗ್ಯ ಸಂಸ್ಥೆ ಒಪ್ಪಿಕೊಂಡಿದೆ ಎಂದು ಹೇಳಿದ್ದಾರೆ.
ವೈರಸ್ ಮೇಲೆ ನಿರಂತರವಾಗಿ ಸಂಶೋಧನೆ ನಡೆಸಿರುವ ನಾನಾ ದೇಶಗಳ ಸುಮಾರು 239 ವೈದ್ಯರು, ಸೋಂಕಿತ ವ್ಯಕ್ತಿಯೊಬ್ಬರು ಸೀನಿದ ನಂತರ ಗಾಳಿಯ ಮೂಲಕ ವೈರಸ್ ಕಣಗಳು ಬೇರೆಡೆಗೆ ಹರಡುತ್ತವೆ. ಗಾಳಿಯಲ್ಲಿರುವ ಕಣಗಳು ಉಸಿರಾಟದ ಮೂಲಕ ಮತ್ತೊಬ್ಬ ವ್ಯಕ್ತಿಯ ದೇಹವನ್ನು ಸೇರುತ್ತವೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಮೂಲಗಳ ಪ್ರಕಾರ ಈ ಬಗ್ಗೆ 32 ದೇಶಗಳ 239 ವಿಜ್ಞಾನಿಗಳು ವಿಶ್ವ ಆರೋಗ್ಯ ಸಂಸ್ಥೆ (WHO)ಗೆ ಪತ್ರ ಬರೆದಿದ್ದು, ಕೊರೊನಾ ರೋಗದ ಸೋಂಕು ಗಾಳಿಯ ಮುಖಾಂತರವೂ ಹರಡಲಿದೆ. ಈ ಬಗ್ಗೆ ಗಂಭೀರವಾಗಿ ಗಮನಹರಿಸಿ ಕ್ರಮ ಕೈಗೊಳ್ಳಿ. ಈಗಾಗಲೇ ಬಿಡುಗಡೆ ಮಾಡಿರುವ ಮಾರ್ಗದರ್ಶಿ ಸೂತ್ರಗಳನ್ನು ಪುನರ್ ಪರಿಶೀಲಿಸಿ ಎಂದು ಸಲಹೆ ನೀಡಿದ್ದಾರೆ.
ಈ ಮೊದಲು ಕೊರೊನಾ ಸೋಂಕು ಕಣ್ಣು ಮೂಗು ಬಾಯಿ ಮುಟ್ಟಿದಾಗ ಮಾತ್ರ ಹರಡುತ್ತದೆ ಎಂಬ ವಾದ ಮಂಡನೆಯಾಗಿತ್ತು. ವಿಜ್ಞಾನಿಗಳ ಸಂಶೋಧನೆಗೆ ಅನುಗುಣವಾಗಿ ವಿಶ್ವ ಆರೋಗ್ಯ ಸಂಸ್ಥೆ ಅದನ್ನು ಒಪಿಕೊಂಡಿತು. ಕೊಲರೊಡೊ ವಿಶ್ವವಿದ್ಯಾಲಯದ ರಾಸಾಯನಿಕ ತಜ್ಞ ಜೋಸ್ ಜಿಮೆನ್ಜ್ ಅವರ ತಂಡ ಗಾಳಿಯಲ್ಲೂ ಕೋವಿಡ್ ಹರಡಲಿದೆ ಎಂ ಸಂಶೋಧನೆಯನ್ನು ನಡೆಸಿದೆ. 32 ದೇಶಗಳ 239 ವಿಜ್ಞಾನಿಗಳು ಅದಕ್ಕೆ ಪೂರಕವಾದ ಪುರಾವೆಗಳನ್ನು ಒದಗಿಸಿದ್ದಾರೆ.
ಅಷ್ಟೂ ಮಂದಿ ವಿಜ್ಞಾನಿಗಳು ವಿಶ್ವ ಆರೋಗ್ಯ ಸಂಸ್ಥೆ ಕೋವಿಡ್ ವಿಷಯದಲ್ಲಿ ಈ ಮೊದಲು ಮಂಡಿಸಿದ್ದ ಮಾರ್ಗಸೂಚಿಗಳನ್ನು ಬದಲಾವಣೆ ಮಾಡಬೇಕೆಂದು ಆಗ್ರಹಿಸಿದ್ದಾರೆ. ಈ ಹಿನ್ನೆಲೆಯಲ್ಲಿ ವಿಜ್ಞಾನಿಗಳ ವಾದವನ್ನು ಒಪ್ಪಿಕೊಳ್ಳಲಾಗಿದೆ ಎಂದು ಮರಿಯಾ ತಿಳಿಸಿದ್ದಾರೆ.
ಹೀಗಾಗಿ ಕೋವಿಡ್ ಸಾಂಕ್ರಾಮಿಕದ ಅಪಾಯ ಮತ್ತಷ್ಟು ಹೆಚ್ಚಾಗಿದೆ. ಗಾಳಿಯಲ್ಲೂ ಕೂಡ ಸೋಂಕಿನ ಕಣಗಳು ತೇಲಿ ಆರೋಗ್ಯವಂತರನ್ನೂ ಸೇರಿ ಪೀಡಿಸುವ ಆತಂಕ ಹೆಚ್ಚಾಗಿದೆ. ಇನ್ನು ಮುಂದೆ ಸುರಕ್ಷತಾ ಕ್ರಮಗಳನ್ನು ಮತ್ತಷ್ಟು ಬಿಗಿಗೊಳಿಸಬೇಕಾದ ಅನಿವಾರ್ಯತೆ ಎದುರಾಗಿದೆ.
ಕೋವಿಡ್ ಕುರಿತಂತೆ ರೂಪಿಸಲಾಗಿರುವ ಮಾರ್ಗಸೂಚಿಗಳಲ್ಲೂ ಮಹತ್ವದ ಬದಲಾವಣೆ ತರುವ ಅಗತ್ಯವಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಅಭಿಪ್ರಾಯ ಪಟ್ಟಿದೆ.