ರಾಜ್ಯದಲ್ಲಿ ಹೆಚ್ಚಿದ ಕೊರೋನಾ ರಣಕೇಕೆ..!! ಇಂದು ಕೊರೋನಾದಿಂದ ಸಾವನ್ನಪ್ಪಿದವರ ಸಂಖ್ಯೆ ಎಷ್ಟು ಗೊತ್ತಾ..?
ರಾಜ್ಯದಲ್ಲಿ ಕೊರೋನಾ ವೈರಸ್ ಅಟ್ಟಹಾಸವನ್ನು ಮೆರೆಯುತ್ತಿದೆ, ಇದರ ವಿರುದ್ಧ ಸರ್ಕಾರ ಎಷ್ಟೇ ಕ್ರಮವನ್ನು ಕೈಗೊಂಡರೂ ಕೂಡ ಕೈಮೀರಿ ಬೆಳೆಯುತ್ತಿದೆ, ಇದರ ಜೊತೆಗೆ ರಾಜ್ಯ ರಾಜಧಾನಿಯಲ್ಲಿ ಕೊರೋನಾ ವೈರಸ್ ರಣಕೇಕೆಯನ್ನು ಹಾಕುತ್ತಿದ್ದು ಪ್ರತಿನಿತ್ಯ ಸಾವಿರಾರು ಕೇಸ ದಾಖಲಾಗುತ್ತಿದೆ, ಅದರಂತೆ ಇಂದೂ ಕೂಡ ಸಾವಿರಾರು ಕೇಸ್ ದಾಖಲಾಗಿ ಲಾಕ್ ಡೌನ್ ಅವಶ್ಯಕ ಎಂಬುದು ಮತ್ತೆ ಸಾಬೀತು ಮಾಡಿದೆ.
ಹೌದು ಒಂದೆಡೆ ರಾಜ್ಯ ಸರ್ಕಾರ ಕೊರೋನಾ ಮಹಾಮಾರಿಯನ್ನು ನಿಯಂತ್ತಿಸಲು ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳನ್ನು ಲಾಕ್ ಡೌನ್ ಮಾಡಿದ ಬೆನ್ನಲ್ಲೇ, ಇಂದೂ ಕೂಡ ಕೊರೋನಾ ತನ್ನ ಅಟ್ಟಹಾಸ ಮೆರೆದಿದೆ. ರಾಜ್ಯದಲ್ಲಿ ಇಂದು 2496 ಮಂದಿಗೆ ಕೊರೋನಾ ದೃಢಪಟ್ಟಿದ್ದು, ಬರರೊಬ್ಬರಿ ಅತಿಹೆಚ್ಚು ಅಂದರೆ 87 ಮಂದಿ ಕಿಲ್ಲರ್ ಕೊರೋನಾಗೆ ಬಲಿಯಾಗಿದ್ದಾರೆ.
ಇತ್ತ ಸಿಲಿಕಾನ್ ಸಿಟಿಯೊಳಗೆ ಶರವೇಗದಲ್ಲಿ ಸಾಗುತ್ತಿರುವ ಕೊರೊನಾ 1267 ಜನರಿಗೆ ತಗುಲಿದೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 44077 ಕ್ಕೇರಿಕೆಯಾಗಿದೆ. ಸೋಮವಾರ ಒಂದೇ ದಿನ 23674 ಪರೀಕ್ಷೆಗಳನ್ನು ನಡೆಸಲಾಗಿದೆ. ರಾಜ್ಯದಲ್ಲಿ ಈವರೆಗೆ 889822 ಲಕ್ಷ ಪರೀಕ್ಷೆ ನಡೆಸಲಾಗಿದೆ.
ಇವತ್ತು ರಾಜ್ಯದಲ್ಲಿ 1142 ಮಂದಿ ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. 540 ರೋಗಿಗಳು ಐಸಿಯುನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಇದೇ ಮೊದಲ ಬಾರಿಗೆ ಕಳೆದ 24 ತಾಸುಗಳಲ್ಲಿ 1,142 ಜನರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ರಾಜ್ಯದಲ್ಲಿ ಒಟ್ಟು 25839 ಸಕ್ರಿಯ ಪ್ರಕರಣಗಳಿದ್ದು ಈವರೆಗೆ 842 ಮಂದಿ ಕೊರೋನಾದಿಂದ ಸಾವನ್ನಪ್ಪಿದ್ದಾರೆ. ಇನ್ನು, ಬೆಂಗಳೂರಿನಲ್ಲಿ ಕಳೆದ 24 ತಾಸುಗಳಲ್ಲಿ ಹೊಸ ಪ್ರಕರಣಗಳು 1,267 ಪತ್ತೆಯಾಗಿದ್ದು. ಒಟ್ಟಾರೆ ಕೊರೋನಾ ಪೀಡಿತರ 20,969 ಕ್ಕೆ ಏರಿಕೆಯಾಗಿದೆ. ಈ ಪೈಕಿ ಸಕ್ರಿಯವಾಗಿರುವ ಪ್ರಕರಣಗಳು 15,599 ಆಗಿವೆ. ರಾಜಧಾನಿಯಲ್ಲಿ ಇಂದು 56 ಜನರು ಸಾವಿಗೀಡಾಗಿದ್ದು, ಒಟ್ಟು 377 ಜನರು ಮೃತಪಟ್ಟಿದ್ದಾರೆ.
# ಕೋವಿಡ್ಗೆ ಪಿಎಸ್ಐ ಸಾವು :
ಮಹಾಮಾರಿ ಕೊರೊನಾ ಸೋಂಕಿನಿಂದ ಸಬ್ಇನ್ಸ್ಪೆಕ್ಟರ್ (ಸಿವಿಲ್)ರೊಬ್ಬರು ಸಾವನ್ನಪ್ಪಿದ್ದಾರೆ. ನಗರದ ಪೊಲೀಸ್ ಕಂಟ್ರೋಲ್ ರೂಂನಲ್ಲಿ ಸೇವೆ ಸಲ್ಲಿಸುತ್ತಿದ್ದ 59 ವರ್ಷದ ಸಬ್ಇನ್ಸ್ಪೆಕ್ಟರ್ ಒಬ್ಬರು ಕೋವಿಡ್ ಪರೀಕ್ಷೆಗೊಳಪಟ್ಟಾಗ ಪಾಸಿಟಿವ್ ಕಂಡುಬಂದಿತ್ತು.
ಅತ್ತಿಬೆಲೆಯಲ್ಲಿ ವಾಸವಾಗಿದ್ದ ಅವರು ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಗುಣಮುಖರಾಗದೆ ಮೃತಪಟ್ಟಿದ್ದಾರೆ.