ಬುಧವಾರ ರಾಜ್ಯದಲ್ಲಿ ದಾಖಲಾದ ಕೊರೋನಾ ಸೋಂಕಿತ ಪ್ರಕರಣಗಳು ಎಷ್ಟು ಗೊತ್ತಾ..?

Soma shekhar

ಕೊರೋನಾ ವೈರಸ್ ಪ್ರತಿನಿತ್ಯವೂ ಕೂಡ ಹೆಚ್ಚುತ್ತಲೇ ಹೋಗುತ್ತಿದ್ದು ಇಂದು ರಾಜ್ಯದಲ್ಲಿ ನಾಲ್ಕು ಸಾವಿರದ ಗಡಿಯನ್ನು ತಲುಪಿದೆ ಅದೇ ರೀತಿ ರಾಜ್ಯ ರಾಜಧಾನಿಯಲ್ಲಿ ಕೊರೋನಾ ವೈರಸ್ ಇಂದು ತನ್ನ ದಾಳಿಯನ್ನು ಮುಂದುವರಿಸಿದೆ, ಆದರೆ ಇಂದು ರಾಜ್ಯದಲ್ಲಿ ಸಾವಿರಕ್ಕೂ ಅಧಿಕ ಮಂದಿ ಕೊರೋನಾ ವೈರಸ್ ನಿಂದ ಗುಣ ಮುಖರಾಗಿದ್ದಾರೆ. ಅಷ್ಟಕ್ಕೂ ಇಂದು ದಾಖಲಾದ ಒಟ್ಟಾರೆ ಸೋಂಕಿತ ಪ್ರಕರಣಗಳು ಎಷ್ಟು ಗೊತ್ತಾ..?

 

ರಾಜ್ಯದಲ್ಲಿ ಇಂದು 4,764 ಹೊಸ ಕೋವಿಡ್-19 ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, 55 ಜನರು ಸಾವನ್ನಪ್ಪಿದ್ದಾರೆ. ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 47,069ಕ್ಕೆ ಏರಿಕೆಯಾಗಿದೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 1,518ಕ್ಕೆ ಏರಿಕೆಯಾಗಿದೆ.

 

ಒಟ್ಟು 1,780 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.ಸಾವಿನ ಸಂಖ್ಯೆ ಕಡಿಮೆಯಾಗಿ, ಗುಣಮುಖರಾಗುವವರ ಸಂಖ್ಯೆ ಹೆಚ್ಚಾಗಿರುವುದು ರಾಜ್ಯದ ಜನತೆಗೆ ಸ್ವಲ್ಪ ಸಮಾಧಾನ ತಂದಿದೆ. ಬೆಂಗಳೂರಿನಲ್ಲಿಯೂ ಕೂಡ ಹೊಸ ಸೋಂಕಿತರ ಸಂಖ್ಯೆ ಮತ್ತೆ 2000 ದಾಟಿರುವುದು ಆತಂಕ ಮೂಡಿಸಿದೆ.

 

ಬೆಂಗಳೂರಿನಲ್ಲಿ ಅತಿ ಹೆಚ್ಚು 2,050 ಮಂದಿಗೆ ಸೋಂಕು ಬಂದಿದ್ದರೆ 15 ಮಂದಿ ಮೃತಪಟ್ಟಿದ್ದಾರೆ. ಉಡುಪಿಯಲ್ಲಿ 281, ಬೆಳಗಾವಿಯಲ್ಲಿ 219, ಕಲಬುರಗಿಯಲ್ಲಿ 175, ದಕ್ಷಿಣ ಕನ್ನಡದಲ್ಲಿ 162 ಮಂದಿಗೆ ಸೋಂಕು ದೃಢಪಟ್ಟಿದೆ. ಇಲ್ಲಿಯವರೆಗೆ ಒಟ್ಟು 75,833 ಮಂದಿಗೆ ಸೋಂಕು ಬಂದಿದೆ. ಈ ಪೈಕಿ 47,069 ಸಕ್ರಿಯ ಪ್ರಕರಣಗಳಿದ್ದು, 27,239 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

 

ಒಟ್ಟು 1,519 ಮಂದಿ ಮೃತಪಟ್ಟಿದ್ದು, 618 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ಬೆಂಗಳೂರಿನಲ್ಲಿ 812, ಬೀದರ್‌ 186, ಧಾರವಾಡ 135, ಉತ್ತರ ಕನ್ನಡ 96, ಚಿಕ್ಕಬಳ್ಳಾಪುರ 92 ಮಂದಿ ಬಿಡುಗಡೆಯಾಗಿದ್ದಾರೆ. ಬೆಂಗಳೂರಿನಲ್ಲಿ 336, ಕಲಬುರಗಿ 37, ಧಾರವಾಡ 35, ಬಳ್ಳಾರಿ 21, ಹಾಸನ 18, ಮಂಡ್ಯ ಮತ್ತು ರಾಯಚೂರಿನಲ್ಲಿ 17 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

 

ಬೆಂಗಳೂರು ನಗರ 2050,ಉಡುಪಿ 281, ಬೆಳಗಾವು 219, ಕಲಬುರಗಿ 175, ದಕ್ಷಿಣ ಕನ್ನಡ 162, ಧಾರವಾಡ 158, ಮೈಸೂರು 145, ಬೆಂಗಳೂರು ಗ್ರಾಮಾಂತರ 139, ರಾಯಚೂರು 136, ಬಳ್ಳಾರಿ 134, ಚಿಕ್ಕಬಳ್ಳಾಪುರ 110, ದಾವಣಗೆರೆ 96, ಕೋಲಾರ 88, ಚಿಕ್ಕಮಗಳೂರು 82, ಬೀದರ್‌ 77,

 

ಹಾಸನ 72, ಗದಗ 71, ಬಾಗಲಕೋಟೆ 70, ಉತ್ತರ ಕನ್ನಡ 63, ಶಿವಮೊಗ್ಗ 59, ವಿಜಯಪುರ 52, ತುಮಕೂರು 52, ಹಾವೇರಿ 50, ರಾಮನಗರ 45, ಯಾದಗಿರಿ 43, ಚಿತ್ರದುರ್ಗ 40, ಮಂಡ್ಯ 37, ಚಾಮರಾಜನಗರ 31, ಕೊಪ್ಪಳ 21 ಹಾಗೂ ಕೊಡಗು ಜಿಲ್ಲೆಗಳಲ್ಲಿ 07 ಹೊಸ ಪ್ರಕರಣಗಳು ಪತ್ತೆಯಾಗಿವೆ.

 

ಕರ್ನಾಟಕದಲ್ಲಿ ಚೇತರಿಕೆ ಪ್ರಮಾಣ ಶೇ.35.92 ಇದ್ದರೆ ಮರಣ ಪ್ರಮಾಣ ಶೇ.2 ರಷ್ಟಿದೆ. ಇಂದು ಒಟ್ಟು 48,140 ಮಂದಿಗೆ ಪರೀಕ್ಷೆ ನಡೆಸಿದ್ದು ಒಟ್ಟು ರಾಜ್ಯದಲ್ಲಿ 11,12,874 ಮಂದಿಗೆ ಪರೀಕ್ಷೆಯನ್ನು ನಡೆಸಲಾಗಿದೆ.

 

ಬೆಂಗಳೂರಿನಲ್ಲಿ ಇಂದಿನ 2,050 ಸೇರಿ ಒಟ್ಟು 36,993 ಮಂದಿಗೆ ಸೋಂಕು ಬಂದಿದೆ. ಇಂದು 812 ಮಂದಿ ಬಿಡುಗಡೆಯಾಗಿದ್ದು ಒಟ್ಟು 8,288 ಬಿಡುಗಡೆಯಾಗಿದ್ದಾರೆ. 27,969 ಸಕ್ರಿಯ ಪ್ರಕರಣಗಳಿದ್ದು ಒಟ್ಟು 735 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ.

ಇನ್ನು ಚೇತರಿಕೆ ಪ್ರಮಾಣವೂ ಉತ್ತಮವಾಗಿದ್ದು ಬೆಂಗಳೂರಿನಲ್ಲಿ 812 ಜನ ಚೇತರಿಕೆ ಸೇರಿ ರಾಜ್ಯದಲ್ಲಿ 1780 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ ಎಂದು ಸುಧಾಕರ್ ಟ್ವೀಟ್ ಮಾಡಿದ್ದಾರೆ.

 

ಉಡುಪಿಯಲ್ಲಿ 34, ಧಾರವಾಡದಲ್ಲಿ 135, ಬೀದರ್‌ನಲ್ಲಿ 186, ಚಿಕ್ಕಬಳ್ಳಾಪುರದಲ್ಲಿ 92, ಕಲಬುರಗಿಯಲ್ಲಿ 47, ದಕ್ಷಿಣ ಕನ್ನಡದಲ್ಲಿ 51, ಬಳ್ಳಾರಿಯಲ್ಲಿ 39, ಚಿಕ್ಕಮಗಳೂರು 50, ವಿಜಯಪುರ 52, ಉತ್ತರ ಕನ್ನಡದಲ್ಲಿ 96 ಜನ ಚೇತರಿಸಿಕೊಂಡು ಬುಧವಾರ ಬಿಡುಗಡೆಯಾಗಿದ್ದಾರೆ.

 

ಒಟ್ಟು 75,833 ಸೋಂಕಿತರ ಪೈಕಿ 27,239 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಇನ್ನು 47,096 ಮಂದಿ ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ಒಂದೇ ದಿನದಲ್ಲಿ 48,140 ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, ಈವರೆಗೂ 11,12,874 ಟೆಸ್ಟ್ ನಡೆಸಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಟ್ವೀಟ್ ಮಾಡಿದ್ದಾರೆ.

 

Find Out More:

Related Articles: