ಐ ಲವ್ ಯೂ ಚಿತ್ರದ ಮತ್ತೊಂದು ಲಿರಿಕಲ್ ಸಾಂಗ್ ಬಿಡುಗಡೆ

Narayana Molleti
ಉಪೇಂದ್ರ ಇಂಟರೆಸ್ಟಿಂಗ್ ವಿಷಯಗಳನ್ನು ತೆಗೆದುಕೊಂಡು ಸಿನಿಮಾ ಮಾಡ್ತಾರೆ. ಅವರ ಸಿನಿಮಾಗಳೆ ಹಾಗೆ ಟೈಟಲ್ ನಿಂದ ಡೈಲಾಗ್ ನಿಂದ ಪ್ರೇಕ್ಷರನ್ನು ರಂಜಿಸುತ್ತವೆ. ಉಪೇಂದ್ರ ಇಲ್ಲಿಯವರೆಗೂ ಕೆಲವೇ ಕೆಲವು ಲವ್ ಸ್ಟೋರಿ ಸಿನಿಮಾಗಳನ್ನು ಮಾಡಿದ್ದಾರೆ. ಇದರಲ್ಲಿ ಬಹುತೇಕ ಸಿನಿಮಾ ಪ್ರೀತಿಯನ್ನು ವಿಮರ್ಶೆ ಮಾಡಿವೆ. 

ಇದೀಗ ಮೊದಲ ಬಾರಿಗೆ ರಚಿತಾ ರಾಮ್ ಜೊತೆ ಉಪೇಂದ್ರ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದ ಹೆಸರು ಐ ಲವ್ ಯು. ಈ ಚಿತ್ರ ಇದೀಗ ಭಾರೀ ಕುತೂಹಲವನ್ನು ಉಂಟು ಮಾಡಿದೆ. ಜೂನ್ 14  ರಂದು ಚಿತ್ರ ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆ ಆಗಲಿದೆ. ಅದೂ ಏಕಕಾಲದಲ್ಲಿಯೇ ಬಿಡುಗಡೆ ಆಗಲಿದೆ. 

ಇದೀಗ ವಿಷಯ ಏನಪ್ಪ ಅಂದರೆ, ಉಪೇಂದ್ರ ಮತ್ತು ರಚಿತಾ ಜೊತೆಯಾಗಿ ನಟಿಸಿರೋ ಈ ಚಿತ್ರದ ರಿಲೀಸ್ಗೆ ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ಈ ಹಿಂದೆ ಟ್ರೈಲರ್ ಹಾಗೂ ಕೆಲ ಲಿರಿಕಲ್ ಹಾಡುಗಳಿಂದಲೇ ಸಿಕ್ಕಾಪಟ್ಟೆ ಸೌಂಡ್ ಮಾಡಿದ್ದ ಐ ಲವ್ ಯೂ ಚಿತ್ರ, ಇವತ್ತು ಮತ್ತೊಂದು ಲಿರಿಕ್ ಸಾಂಗ್ ರಿಲೀಸ್ ಮಾಡಿದೆ.

ಅಷ್ಟಕ್ಕೂ ಆ ಹಾಡು ಯಾವುದು ಅಂತೀರಾ? ನಿನ್ನ ಹೃದಯ ಇರುವ ಜಾಗದಲ್ಲಿ ಒಂದು ಕಲ್ಲು ಇದೆ. ಇದೇ ಆ ಹಾಡು. ಈ ಹಾಡು ಇದೀಗ ರಿಇಲೀಸ್ ಆಗಿದೆ. ಅಷ್ಟಕ್ಕೂ ಈ ಹಾಡಿನ ವಿಶೇಷತೆ ಎಂದರೆ, ಪ್ರೀತಿಯ ಬಲೆಯಲ್ಲಿ ಸಿಕ್ಕಿ, ಅಂತಿಮವಾಗಿ ಪ್ರೀತಿ ಸಿಗದಿದ್ದಾಗ ಭಾವನೆ ತುಂಬಿ ಹಾಡುವ ಹಾಡಿದು ಎನ್ನಲಾಗಿದೆ. ಪ್ರತಿಯೊಂದು ಜೀವಿಯಲ್ಲೂ ಒಂದು ಮನಸ್ಸಿರುತ್ತದೆ. ಅದೂ ಪ್ರೀತಿಗಾಗಿ ಹಂಬಲಿಸುತ್ತದೆ ಅನ್ನೋ ಸಂದೇಶವನ್ನು ಈ ಹಾಡು ಹೊತ್ತು ಹೊಂದಿದೆ. ಇಂದ್ರಾ. ಕೆ.ಎಂ ಲಿರಿಕ್ಸ್ ಬರೆದಿದ್ದು, ಅನುರಾಧ ಭಟ್ ಹಾಡಿದ್ದಾರೆ. 


Find Out More:

Related Articles: