
ಸಖತ್ ಸೌಂಡು ಮಾಡ್ತಿದಾರೆ ರಕ್ಷಿತ್!
ರಕ್ಷಿತ್ ಶೆಟ್ಟಿ ಇದೀಗ ಅವನೇ ಶ್ರೀ ಮನ್ನಾರಾಯಾಣ ನಾಗಿ ತೆರೆ ಮೇಲೆ ಬರುತ್ತಾ ಇದ್ದಾರೆ. ಈ ಚಿತ್ರದ ಟೀಸರ್ ಈಗಾಗಲೇ ಬಿಡುಗಡೆ ಆಗಿದೆ. ಈ ಟೀಸರ್ ಗೆ ಎಲ್ಲೆಡೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಅಭಿಮಾನಿಗಳಂತೂ ಫುಲ್ ಫಿದಾ ಆಗಿದ್ದಾರೆ. ಈ ಕುರಿತು ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ.
ರಕ್ಷಿತ ಶೆಟ್ಟಿ ಇತ್ತೀಚೆಗಷ್ಟೇ ಸೋಶಿಯಲ್ ಮೀಡಿಯಾಗೆ ಮರಳಿದ್ದಾರೆ. ಶೆಟ್ಟರ ಜನ್ಮ ದಿನವೇ ಟೀಸರ್ ಕೂಡ ಲಾಂಚ್ ಮಾಡಲಾಗಿದೆ. ಇದು ಅಭಿಮಾನಿಗಳಲ್ಲಿ ಖುಷಿ ಹೆಚ್ಚಿಸಿದೆ.
ಈ ಟೀಸರ್ ನೋಡಿದವರಿಗೆ ಇದೊಂದು ಪಕ್ಕಾ ಮನರಂಜನಾ ಸಿನಿಮಾ ಅನ್ನೋದು ಗೊತ್ತಾಗುತ್ತೆ. ಅಲ್ಲದೆ ಕನ್ನಡದ ಮಟ್ಟಿಗೆ ಇದೊಂದು ಹೊಸ ಸಿನಿಮಾ ಅನ್ನೋ ಫೀಲ್ ನೀಡುತ್ತಿದೆ.