
ವಿಜಯ್ ದೇವರಕೊಂಡ ಮೆಂಟರ್ ದಿಗಂತ್!
ಸ್ಯಾಂಡಲ್ ವುಡ್ ದೂದ್ ಪೇಡಾ ಎಂದೇ ಖ್ಯಾತಿ ಆಗಿರುವ ದಿಗಂತ್, ಇದೀಗ ಮತ್ತೊಮ್ಮೆ ಸುದ್ದಿ ಮಾಡಿದ್ದಾರೆ. ಈಗಾಗಕೇ ಹುಟ್ಟು ಹಬ್ಬದ ಶುಭಾಶಯಗಳು ಅನ್ನೋ ದಿಗಂತ್ ಚಿತ್ರ ತೆರೆಗೆ ಬರೋಕೆ ಸಜ್ಜಾಗಿದೆ. ಈ ಹೊತ್ತಿನಲ್ಲಿ ದಿಗಂತ್ ತನ್ನ ಅಭಿಮಾನಿಗಳಿಗರ ಖುಷಿ ಸುದ್ದಿ ನೀಡಿದ್ದಾನೆ.
ಹೌದು, ವಿಜಯ್ ದೇವರಕೊಂಡ ಅವರ ಮತ್ತೊಂದು ಚಿತ್ರದ ಹೆಸರು 'ಹೀರೊ' ಈ ಚಿತ್ರ ಇದೀಗ ಸೆಟ್ಟೇರಿದ್ದು, ಕನ್ನಡದ ನಟ ದಿಗಂತ್ ಈ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಅಭಿನಯಿಸಲಿದ್ದಾರೆ. ಇದು ಸದ್ಯಕ್ಕೆ ಸ್ಯಾಂಡಲ್ ವುಡ್ ಗೆ ಖುಷಿ ಸುದ್ದಿ.
ನಟ ದಿಗಂತ್ ಹೀರೋ ಚಿತ್ರದ ನಾಯಕ ವಿಜಯ್ ದೇವರಕೊಂಡ ಅವರ ಮೆಂಟರ್ ಆಗಿ ಅಭಿನಯಿಸಲಿದ್ದಾರೆ. ಹೌದು, ಈ ಚಿತ್ರ ಬೈಕ್ ರೇಸಿಂಗ್ ಕುರಿತಾದ ಚಿತ್ರ. ಇದರಲ್ಲಿ ನಾಯಕಿಯ ಅಣ್ಣನಾಗಿ ದಿಗಂತ್ ಕಾಣಿಸಿಕೊಳ್ಳಲಿದ್ದಾರೆ.