
ಪುನೀತ್ ಹೆಗಲ ಮೇಲೆ ಕೈ ಹಾಕಿದ ಕಾನ್ಸ್ ಟೇಬಲ್ ಸರೋಜಾ!
ಟಗರು ಚಿತ್ರದಲ್ಲಿ ಗಮನ ಸೆಳೆದಿದ್ದು ಕಾನ್ಸ್ ಟೇಬಲ್ ಸರೋಜಾ. ಇವರ ಹೆಸರು ತ್ರಿವೇಣಿ ರಾವ್. ಹೌದು ಇದೇ ತ್ರಿವೇಣಿ ಇದೀಗ ಯುವರತ್ನ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಪ್ರಮುಖ ಪಾತ್ರವೊಂದರಲ್ಲಿ ಇವರು ಮಿಂಚಲಿದ್ದಾರೆ. ಆದರೆ ಇದೀಗ ತ್ರಿವೇಣಿ ಸುದ್ದಿ ಆಗಿದ್ದೇಕೆ?
ಹೌದು ತ್ರಿವೇಣಿ ರಾವ್ ಸುದ್ದಿ ಆಗಿದ್ದಾರೆ. ಅದೂ ಪುನೀತ್ ಅಭಿನಯದ ಯುವರತ್ನ ಚಿತ್ರದ ಮೂಲಕ ಅಷ್ಟೇ ಅಲ್ಲ. ಪುನೀತ್ ರಾಜ್ ಕುಮಾರ್ ಅವರ ಹೆಗಲ ಮೇಲೆ ಕೈ ಹಾಕಿ ಪೋಸ್ ನೀಡಿದ್ದಾರೆ. ಹೀಗಾಗಿ ಪುನೀತ್ ಅಭಿಮಾನಿಗಳಿಗೆ ಇದು ಸಿಟ್ಟು ತರಿಸಿದೆ ಎನ್ನಲಾಗಿದೆ.
ಯುವರತ್ನ ಚಿತ್ರವನ್ನು ಸಂತೋಷ ಆನಂದ್ ರಾಮ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದ ಚಿತ್ರೀಕರಣ ಮೈಸೂರಿನಲ್ಲಿ ನಡೆಯುತ್ತಿದೆ. ಇದರಲ್ಲಿ ತ್ರಿವೇಣಿ ರಾವ್ ಅವರು ಪ್ರಮುಖ ಪಾತ್ರವನ್ನು ಅಭಿನಯಿಸಲಿದ್ದಾರೆ. ಹೊಸ ರೀತಿಯಾದ ಪಾತ್ರ ಅವರದ್ದು ಎಂದು ಸೋಶಿಯಲ್ ಮೀಡಿಯಾದಲ್ಲಿ ತ್ರಿವೇಣಿ ಬರೆದುಕೊಂಡಿದ್ದಾರೆ.