
ಯಶ್ ಮಗಳಿಗೆ ಏನು ಹೆಸರಿಡ್ತಾರೆ ಗೊತ್ತಾ?
ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಮಗಳು ಬೇಬಿ ವೈಆರ್ ಗೆ ಇನ್ನೂ ನಾಮಕರಣ ಆಗಿಲ್ಲ ಅನ್ನೋದು ಎಲ್ಲರಿಗೂ ಗೊತ್ತಿದೆ. ಈ ಬೇಬಿಗೆ ಏನಂತ ಹೆಸರಿಡಬೇಕು ಎಂದು ಮನೆಯವರು ಹುಡುಕಾಟ ನಡೆಸಿದ್ದಾರೆ. ಅನೇಕರು ಮಗುವನ್ನು ಯಶಿಕಾ ಎಂದೇ ಕರೆಯುತ್ತಿದ್ದಾರೆ. ಈ ಬೇಬಿ ಹೆಸರು ಇನ್ನೆರಡು ದಿನಗಳಲ್ಲಿ ಗೊತ್ತಾಗಲಿದೆ.
ಯಶ್ ತಮ್ಮ ಆರು ತಿಂಗಳ ಮಗಳ ವಿಡಿಯೋ ಕೂಡ ಶೇರ್ ಮಾಡಿದ್ದಾರೆ. ಜೊತೆಗೆ ಮೊನ್ನೆಯಷ್ಟೇ ಅಪ್ಪಂದಿರ ದಿನಾಚರಣೆ ದಿನದಂದು ಯಶ್ ಮಗಳನ್ನು ತಬ್ವಿಕೊಂಡಿರುವ ಪೋಟೋ ಶೇರ್ ಮಾಡಿದ್ದಾರೆ. ಜೊತೆಗೆ ಇನ್ಬೇನು ಜೂನ್ 23 ರಂದು ಮುದ್ದು ಮಗಳ ಹೆಸರನ್ನು ಬಹಿರಂಗ ಮಾಡುತ್ತೇನೆ ಎಂದು ಅವರು ಹೇಳಿದ್ದಾರೆ."ಕೊನೆಗೂ ನಮ್ಮ ಮಗಳಿಗೆ ಹೆಸರು ಸಿಕ್ಕಿದೆ. ನೀವೂ ಕೂಡ ತುಂಬ ಸುಂದರವಾದ ಹೆಸರನ್ನು ನೀಡಿದ್ದೀರಿ. ಇದೇ ತಿಂಗಳ 23 ರಂದು ಮಗಳ ಹೆಸರನ್ನು ಬಹಿರಂಗ ಮಾಡ್ತೀನಿ" ಎಂದು ಅವರು ಹೇಳಿದ್ದಾರೆ.