ರಿವೀಲ್ ಆಯ್ತು ರೇಮೊ ಚಿತ್ರದ ಟೈಟಲ್!

frame ರಿವೀಲ್ ಆಯ್ತು ರೇಮೊ ಚಿತ್ರದ ಟೈಟಲ್!

somashekhar
ರೋಗ್ ಚಿತ್ರವನ್ನು ಮಾಡಿದ್ದ ಇಶನ್ ಇದೀಗ ರೇಮೊ ಮೂಲಕ ಮತ್ತೊಂದು ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಸ್ಕ್ರಿಪ್ಟ್ ಪೂಜೆ ಕೆಲವೇ ದಿನಗಳ ಹಿಂದೆ ನಡೆದಿತ್ತು. ಇದೀಗ, ರೇಮೊ ಸಿನಿಮಾದ ಟೈಟಲ್ ಕೂಡ ರಿವೀಲ್ ಆಗಿದೆ. ಸಖತ್ ಸ್ಟೈಲಿಶ್ ಆಗಿರೋ ರೇಮೊ ಟೈಟಲ್ ಡಿಸೈನ್ ಎಲ್ಲರ ಗಮನ ಸೆಳೆಯುತ್ತಿದೆ.


ಅಷ್ಟಕ್ಕೂ ಈ ವಿನ್ಯಾಸ ಮಾಡಿದ್ದು ಬೇರೆ ಯಾರೂ ಅಲ್ಲ, Kanni ಸ್ಟೂಡಿಯೋ ಇದನ್ನು ಡಿಸೈನ್ ಮಾಡಿದೆ. ಅಷ್ಟೇ ಅಲ್ಲದೇ, ಇದೇ ಪೋಸ್ಟರ್ ನಲ್ಲಿ ಸಿನಿಮಾದ ತಾಂತ್ರಿಕ ವರ್ಗದ ಬಗ್ಗೆಯೂ ಮಾಹಿತಿ ನೀಡಲಾಗಿದೆ. ಹೌದು, ಸಂಗೀತ- ಅರ್ಜುನ್ ಜನ್ಯ, ಕ್ಯಾಮೆರಾ-ವೈದಿ, ಸಂಕಲನ-ಕೆ.ಎಂ.ಪ್ರಕಾಶ್, ನಿರ್ದೇಶಕ-ಕರಣ್ ಕಲಾ.



ಈ ಸಿನಿಮಾದ ನಾಯಕ ಇಶಾನ್ ಆದರೆ, ನಾಯಕಿ ಆಶಿಕಾ ರಂಗನಾಥ್. ಅಷ್ಟಕ್ಕೂ ಇದ್ಯಾಕೆ ರೇಮೊ ಅನ್ನೋ ಹೆಸರನ್ನು ಚಿತ್ರಕ್ಕೆ ಇಟ್ಟಿದ್ದಾರೆ ಅಂದರೆ, ಚಿತ್ರದಲ್ಲಿ ನಾಯಕನ ಹೆಸರು ರೇವಂತ, ನಾಯಕಿ ಹೆಸರು ಮೋಹನಾ. ಹೀಗಾಗಿ ಇಬ್ಬರ ಲವ್ ಸ್ಟೋರಿಗೆ ಅವರ ಹೆಸರಿನ ಮೊದಲ ಅಕ್ಷರವನ್ನು ಟೈಟಲ್ ಆಗಿ ಮಾಡಲಾಗಿದೆ.


ಇದು ಪವನ್ ಒಡೆಯರ್ ಚಿತ್ರವಾಗಿದ್ದು, ಸಿ.ಆರ್.ಮನೋಹರ್ ಈ ಸಿನಿಮಾದ ನಿರ್ಮಾಣ ಮಾಡುತ್ತಿದ್ದಾರೆ. ಇನ್ನೊಂದು ವಿಶೇಷ ಏನಂದರೆ, ಇದೇ ಮೊದಲ ಬಾರಿಗೆ ಮನೋಹರ್, ಇಶಾನ್ ಹಾಗೂ ಆಶಿಕಾ ರಂಗನಾಥ್ ಜೊತೆಗೆ ಪವನ್ ಒಡೆಯರ್ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ. 


Find Out More:

Related Articles:

Unable to Load More