ದಿ ವಿಲನ್ ಚಿತ್ರದ ಬಳಿಕ ಪ್ರೇಮ್ ಅನೇಕ ಟೀಕೆಗಳನ್ನು ಎದುರಿಸಿದರು. ಅದರಲ್ಲೂ ಶಿವಣ್ಣ ಅವರ ಅಭಿಮಾನಿಗಳು ಪ್ರೇಮ್ ವಿರುದ್ಧ ತಿರುಗಿ ಬಿದ್ದಿದ್ದರು. ಇದೀಗ ಹೊಸ ವಿಷ್ಯ ಏನಪ್ಪ ಅಂದರೆ, ಪ್ರೇಮ್ ಅವರು ಮತ್ತೊಂದು ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದ ಹೆಸರು ಏಕ್ ಲವ್ ಯಾ.
ರಕ್ಷಿತಾ ಪ್ರೇಮ್ ಅವರ ಸಹೋದರ ರಾಣಾ ಈಈ ಚಿತ್ರಕ್ಕೆ ನಾಯಕರಾಗಿದ್ದು, ರೀಷ್ಮಾ ನಾನಯ್ಯ ಎಂಬ ಕೊಡಗಿನ ಹುಡುಗಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಇನ್ನು ಪ್ರಮುಖ ಪಾತ್ರವೊಂದರಲ್ಲಿ ಸ್ಯಾಂಡಲ್ ವುಡ್ ಸುಪ್ರೀಂ ಹೀರೋ ಶಶಿಕುಮಾರ್ ಅವರು ಅಭಿನಯಿಸುತ್ತಿದ್ದಾರೆ.
ಈಗಾಗಲೇ ಏಕ್ ಲವ್ ಯಾ ಚಿತ್ರದ ಚಿತ್ರೀಕರಣ ಆರಂಭವಾಗಿದ್ದು. ಕೆಲವು ಆಕ್ಷನ್ ದೃಶ್ಯಗಳನ್ನ ಮಾಡಿ ಮುಗಿಸಲಾಗಿದೆ. ಇನ್ನುಳಿದಂತೆ ರಕ್ಷಿತಾ ಪ್ರೇಮ್ ಅವರೇ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.
ಸುಪ್ರೀಂ ಹೀರೋ ಶಶಿಕುಮಾರ್ ಮತ್ತು ಖ್ಯಾತ ಛಾಯಾ ಗ್ರಾಹಕ ಮಹೇಂದ್ರ ಸಿಂಹ ಅವರು ಏಕ್ ಲವ್ ಯಾ ಚಿತ್ರ ತಂಡ ಸೇರಿಕಕೊಂಡಿರುವುದು ಖುಷಿ ತಂದಿದೆ ಎಂದು ಪ್ರೇಮ್ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.