ತಮಿಳು ಬಿಗ್ ಬಾಸ್ ನಲ್ಲಿ ಕನ್ನಡತಿ
ತಮಿಳು ಬಿಗ್ ಬಾಸ್ ಸೀಸನ್ 3ಕ್ಕೆ ಕಮಲ್ ಹಾಸನ್ ಅವರು ನಿರೂಪಣೆ ಮಾಡುತ್ತಿದ್ದಾರೆ. ತಮಿಳು ಬಿಗ್ ಬಾಸ್ ಬಗ್ಗೆ ಏನಪ್ಪ ಹೊಸ ವಿಷ್ಯ ಅಂತೀರಾ? ಹೌದು ವಿಷ್ಯ ಇದೆ. ಈ ಕಾರ್ಯಕ್ರಮದಲ್ಲಿ ಕನ್ನಡದಲ್ಲಿ ದರ್ಶನ್ ಜೊತೆಗೆ ಅಭಿನಯಿಸಿದ ನಾಯಕ ನಟಿಯೊಬ್ಬಳು ಅಭಿನಯಿಸುತ್ತಿದ್ದಾಳೆ.
ಹೌದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದ ಶೆರಿನ್ ಶೃಂಗಾರ್ ಅವರು ಈ ಭಾರಿಯ ತಮಿಳು ಬಿಗ್ ಬಾಸ್ ನಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.
ಶೆರಿನ್ ಅವರು ದರ್ಶನ್ ಅವರ ಜೊತೆಗೆ ಧ್ರುವ ಚಿತ್ರದ ಮೂಲಕ ಸಿನಿ ಕೆರಿಯರ್ ಆರಂಭಿಸಿದ್ದರು. ಬಳಿಕ ಕಾಲಿವುಡ್, ಮತ್ತು ಟಾಲಿವುಡ್ ನತ್ತ ಅವರು ಮುಖ ಮಾಡಿದ್ದರು. ಪರಭಾಷೆಯಲ್ಲಿಯೂ ತಮ್ಮ ಅದೃಷ್ಟದ ಪರೀಕ್ಷೆಗೆ ಇಳಿದಿದ್ದ ಕನ್ನಡತಿ ಶೇರಿನ್ ಇದೀಗ ತಮಿಳಿನ ಬಿಗ್ ಬಾಸ್ ನಲ್ಲಿ ಭಾಗವಹಿಸುತ್ತಿರೋದು ಕನ್ನಡಿಗರಿಗೆ ಸಂತಸ ಮೂಡಿಸಿದೆ.