ಪ್ರಜ್ವಲ್ ಹುಟ್ಟುಹಬ್ಬಕ್ಕೆ ಈ ಚಿತ್ರದ ಟೀಸರ್ ಗಿಫ್ಟ್!

somashekhar
ಇನ್ಸ್ ಪೆಕ್ಟರ್ ವಿಕ್ರಂ ಚಿತ್ರದಲ್ಲಿ ದೇವರಾಜ್ ಅವರ ಮಗ ಡೈನಾಮಿಕ್ ಪ್ರಿನ್ಸ್ ಎಂದೇ ಹೆಸರಾದ ಪ್ರಜ್ವಲ್ ದೇವರಾಜ್ ಅವರು ನಾಯಕರಾಗಿ ನಟಿಸುತ್ತಿದ್ದಾರೆ. ಈ ಚಿತ್ರದ ಟೀಸರ್ ಈಗಾಗಲೇ ಬಿಡುಗಡೆ ಆಗಿ ದಾಖಲೆ ಮಟ್ಟದ ವ್ಯೂವ್ಸ್ ಪಡೆದಿದೆ. ಆದರೆ ಪ್ರಜ್ವಲ ಅವರ ಜನ್ಮ ದಿನದ ಪ್ರಯುಕ್ತ ಮತ್ತೊಂದು ವಿಶೇಷ ಟೀಸರ್ ಕೂಡ ಬಿಡುಗಡೆ ಆಗಲಿದೆ. 


ಹೌದು, ನಾಯಕನಟರ ಜನ್ಮದಿನದಂದೇ ಟೀಸರ್ ಬಿಡುಗಡೆ ಮಾಡೋದು ಇತ್ತೀಚೆನ ಟ್ರೆಂಡ ಆಗಿದೆ. ಹೀಗಾಗಿ ಜುಲೈ 4 ರಂದು ಪ್ರಜ್ವಲ್ ದೇವರಾಜ್ ಅವರ ಜನ್ಮದಿನ. ಹೀಗಾಗಿ ವಿಖ್ಯಾತ್ ನಿರ್ಮಿಸುತ್ತಿರುವ ಇನ್ಸ್ ಪೆಕ್ಟರ್ ವಿಕ್ರಂ ಚಿತ್ರದ ಒಂದು ನಿಮಿಷದ ವಿಶೇಷ ಟೀಸರ್ ಜುಲೈ ಮೂರರ ಮಧ್ಯರಾತ್ರಿ ಬಿಡುಗಡೆ ಮಾಡಲಾಗುತ್ತದೆ. 
  
ಈ ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ಅವರು ಎರಡು ಶೇಡ್ ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಪ್ರಜ್ವಲ್ ಗೆ ನಾಯಕಿಯಾಗಿ ಭಾವನಾ ಅವರು ನಟಿಸಿದ್ದಾರೆ. ಅಂದಹಾಗೆ ದರ್ಶನ್ ತೂಗುದೀಪ ಅವರು ಈ ಚಿತ್ರದಲ್ಲಿ ಒಂದು ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಇನ್ನು ಚಿತ್ರದ ಛಾಯಾಗ್ರಾಹಕ ಮಫ್ತಿ ಖ್ಯಾತಿಯ ನವೀನ್ ಕುಮಾರ್.



Find Out More:

Related Articles: