ಶೃತಿ ಹರಿಹರನ್ ಅವರ ಹೆಸರು ಕೇಳಿದರೆ ಸಾಕು ನಿಮಗೆ ಮೀ ಟೂ ಆರೋಪ ನೆನಪಿಗೆ ಬರುತ್ತದೆ ಅಲ್ಲವೇ? ಹೌದು, ಅದೇ ಶೃತಿ ಹರಿಹರನ್ ಇದೀಗ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಅಂದರೆ ನಿಮಗೆ ಆಶ್ಚರ್ಯ ಆಗುತ್ತದೆಯೇ? ಹೌದು ಶೃತಿ ಇದೀಗ ಮಗುವಿನ ನಿರೀಕ್ಷಯೆಲ್ಲಿ ಇದ್ದಾರೆ.
ಶೃತಿ ಹರಿಹರನ್ ಪ್ರತಿಭಾನ್ವಿತ ನಟಿ ಅನ್ನೋದು ಎಲ್ಲರಿಗೂ ಗೊತ್ತಿರೋದೇ. ಯಾಕಂದರೆ ಅವರು ಆಯ್ಕೆ ಮಾಡಿಕೊಂಡ ಪಾತ್ರಗಳು ಹಾಗೂ ಅವು ಸಮಾಜಕ್ಕೆ ನೀಡಿದ ಸಂದೇಶಗಳು ನಿಜಕ್ಕೂ ವಿಭಿನ್ನವೇ. ಇದೀಗ ಈ ನಟಿ ತಾಯಿಯಾಗವ ಸಂಭ್ರಮದಲ್ಲಿ ಇದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಅವರು, "ನಿನ್ನನ್ನು (ಮಗು) ನೋಡುವ ಕಾತುರ ತುಂಬ ಇದೆ. ನನಗೆ ತಾಳಲು ಆಗುತ್ತಿಲ್ಲ. ಹೊಸ ಪ್ರಯಾಣದ ವಿಜಯಕ್ಕೆ ನಿನಗೆ ಸ್ವಾಗತ" ಎಂದು ಶೃತಿ ಬರೆದುಕೊಂಡಿದ್ದಾರೆ. ತಾನು ಗರ್ಬಿಣಿಯಾಗಿರುವ ಫೋಟೊ ಕೂಡ ಹಾಕಿದ್ದಾರೆ. ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿ ಶೃತಿ ಹರಿಹರನ್-ರಾಮ್ ಕಳಾರಿ ಇದ್ದಾರೆ.