ಮೂರು ತಿಂಗಳಿಂದ ನೀರು ಕಾಣದ ಸುಹಾಸಿನಿ ತಾಯಿ

somashekhar
ಸುಹಾಸಿನಿ ಯಾರಿಗೆ ಗೊತ್ತಿಲ್ಲ ಹೇಳಿ? ಈ ನಟಿ ಬಹುಭಾಷಾ ನಟಿ. ಇದೀಗ ಸುಹಾಸಿನಿ ನೀರಿನ ಕುರಿತು ಧ್ವನಿ ಎತ್ತಿದ್ದಾರೆ. ನದಿಗಳ ಕುರಿತು ಮಾತನಾಡುತ್ತಿದ್ದಾರೆ. ಅಷ್ಟಕ್ಕೂ ಇದರ ಹಿಂದೆ ಅದೊಂದು ಘಟನೆ ಇದೆ. ಅದ್ಯಾವುದು ಅನ್ನೋದನ್ನು ಹೇಳ್ತೀವಿ ನೋಡಿ.

ಹೌದು, ಸುಹಾಸಿನಿ ತಾಯಿ ಚೈನ್ನೈನಲ್ಲಿದ್ದಾರೆ. ಇಲ್ಲಿ ನೀರಿಗೆ ತೀವ್ರತರನಾದ ತೊಂದರೆ ಆಗಿದೆ. ಕಳೆದ ಮೂರು ತಿಂಗಳಿಂದಲೂ ಸುಹಾಸಿನಿ ತಾಯಿ ಹನಿ ನೀರನ್ನು ನೋಡಿಲ್ಲ. ಹೀಗಂತ ಸ್ವತಃ ಸುಹಾಸಿನಿ ಅವರೇ ಹೇಳಿದ್ದಾರೆ. 


"ನನ್ನ ತಾಯಿಗೆ 85 ವರ್ಷ ವಯಸ್ಸು. ಅವರು ಪ್ರತಿನಿತ್ಯ ಮೂರು ಮಹಡಿ ಕೆಳಗಿಳಿದು, ಟ್ಯಾಂಕ್ ಬಾಗಿಲು ತೆಗೆದು ನೀರು ಬಂದಿಲ್ಲ ಎಂದು ಕಣ್ಣೀರು ಹಾಕುತ್ತಾರೆ," ಎಂದು ಹೇಳಿದ್ದಾರೆ. 


ಇದೀಗ ಕಾವೇರಿ ಕೂಗು ಅನ್ನೋ ಅಭಿಯಾನದ ಸುದ್ದಿಗೋಷ್ಟಿ ಕುರಿತು ಅವರು ಮಾತನಾಡಿದ್ದಾರೆ. ಮೂರು ವರ್ಷಗಳ ಹಿಂದೆಯೇ ಚೈನ್ನೈನಲ್ಲಿ ನೆರೆ ಪರಿಸ್ತೀತಿ ಉಂಟಾಗಿತ್ತು. ಆಗ ಸದ್ಗುರು ನದಿ ಉಳಿಸುವ ಅಭಿಯಾನ ಕೈಗೊಂಡಿದ್ದರು. ಅದರ ಮಹತ್ವ ಈಗ ಅರಿವಾಗುತ್ತಿದೆ ಎಂದರು. 


Find Out More:

Related Articles: