ಮತ್ತೆ ಟ್ರಾಲ್ ಆದ ಪ್ರಿಯಾಂಕಾ ಚೋಪ್ರಾ!

frame ಮತ್ತೆ ಟ್ರಾಲ್ ಆದ ಪ್ರಿಯಾಂಕಾ ಚೋಪ್ರಾ!

somashekhar
ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಇದೀಗ ಮತ್ತೆ ಟ್ರಾಲ್ ಆಗಿದ್ದಾರೆ. ಮದುವೆ ನಂತರದಿಂದಲ ಪ್ರಿಯಾಂಕಾ ಟ್ರಾಲ್ ಆಗುತ್ತಲೇ ಇದ್ದಾರೆ. ಹಾಗಾದರೆ ಈ ಬಾರಿ ಪ್ರಿಯಾಂಕಾ ಟ್ರಾಲ್ ಆಗಿದ್ದಾದ್ರೂ ಯಾಕೆ ಅನ್ನೋದು ಇಲ್ಲಿದೆ ನೋಡಿ. 


ಈ ಹಿಂದೆ ಪ್ರಿಯಾಂಕಾ ಚೋಪ್ರಾ, "ದೀಪಾವಳಿ ಆಚರಣೆ ವೇಳೆ ಪಟಾಕಿ ಹಚ್ಚದಿರಿ. ಇದರಿಂದ ಅಸ್ತಮಾ ಹರಡುತ್ತದೆ," ಎಂದಿದ್ದರು. ಅಷ್ಟೇ ಅಲ್ಲ, ಕಳೆದ ವರ್ಷದ ವಿಡಿಯೋ ಒಂದರಲ್ಲಿ, " ನಾನು 5 ವರ್ಷವಿದ್ದಾಗ ಅಸ್ತಮಾ ರೋಗದಿಂದ ಬಳಲುತ್ತಿದ್ದೆ. ಪಟಾಕಿ ಹಚ್ಚಿದರೆ ಅದು ಅಸ್ತಮಾ ರೋಗಿಗಳಿಗೆ ತೊಂದರೆ ನೀಡುತ್ತದೆ ಎಂದಿದ್ದರು. 


ಆದರೆ ಇದೀಗ ಪ್ರಿಯಾಂಕಾ ಚೋಪ್ರಾ ಅವರು, ತಮ್ಮ ಪತಿ ನಿಕ್ ಜೋನ್ಸ್ ಮತ್ತು ತಾಯಿ ಮಧೂ ಚೋಪ್ರಾ ಜೊತೆಗೆ ಬೀಚ್ ಒಂದರಲ್ಲಿ ಧಂ ಹೊಡೆದಿದ್ದಾರೆ. ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನೆಟ್ಟಿಗರು ಪ್ರಿಯಾಂಕಾ ಚೋಪ್ರಾ ಅವರನ್ನು ತರಾಟೆಗೆ ತೆಗದುಕೊಂಡಿದ್ದಾರೆ. 


Find Out More:

Related Articles:

Unable to Load More