ಸಬ್ಯಸಾಚಿ ವಿನ್ಯಾಸದ ಲೆಹಂಗಾ ಆರ್ಡರ್ ಮಾಡಿದ ಅಲಿಯಾ

somashekhar
ಅಲಿಯಾ ಭಟ್ ಅವರು ರಣಬೀರ್ ಕಪೂರ್ ಜತೆಗೆ 2018 ರಿಂದಲೂ ಡೇಟಿಂಗ್ ಮಾಡುತ್ತಿರೋದು ಎಲ್ಲರಿಗೂ ಗೊತ್ತಿರೋದೇ. ಅಲ್ಲದೇ ಅವರು 2020ಕ್ಕೆ ದಾಂಪತ್ಯಕ್ಕೆ ಕಾಲಿಡಲಿದ್ದಾರೆ. ಹೀಗಾಗಿ ಅಲಿಯಾ ಭಟ್ ಸಬ್ಯಸಾಚಿ ಲೆಹಂಗಾವನ್ನು ಆರ್ಡರ್ ಮಾಡಿದ್ದಾರೆ ಎನ್ನುವ ಮಾತುಗಳು ಬಿ-ಟೌನ್‌ನಲ್ಲಿ ಕೇಳಿ ಬರುತ್ತಿವೆ.


ಅಲಿಯಾ ಅವರು ವಸ್ತ್ರವಿನ್ಯಾಸಕ ಸಬ್ಯಸಾಚಿ ಅವರನ್ನು ಕಳೆದ ಏಪ್ರಿಲ್ ತಿಂಗಳಲ್ಲೇ ಭೇಟಿ ಮಾಡಿದ್ದರಂತೆ. ಅಲ್ಲದೇ ಮದುವೆ ಲೆಹಂಗಾ ಬಗ್ಗೆ ಮಾತುಕತೆ ನಡೆಸದ್ದರು ಎನ್ನಲಾಗಿದೆ. ಇದೀಗ ಅವರು ಹೇಳಿದ ರೀತಿಯಲ್ಲೇ ಲೆಹಂಗಾ ತಯಾರಿಸುವ ಕೆಲಸ ಶುರುವಾಗಿದೆ ಎಂದು ಹೇಳಲಾಗುತ್ತಿದೆ. 


ಸಬ್ಯಸಾಚಿ ಅವರು ಪ್ರಖ್ಯಾತ ನಟ-ನಟಿಯರಿಗೆ ವಸ್ತ್ರವಿನ್ಯಾಸ ಮಾಡಿ ಕೊಡುತ್ತಾರೆ. ಈ ಮೊದಲು, ಅನುಷ್ಕಾ ಶರ್ಮಾ, ದೀಪಿಕಾ ಪಡುಕೋಣೆ ಹಾಗೂ ಪ್ರಿಯಾಂಕಾ ಚೋಪ್ರಾ ಅವರಿಗೂ ಮದುವೆ ಲೆಹಂಗಾ ವಿನ್ಯಾಸ ಮಾಡಿದ್ದಾರೆ.


Find Out More:

Related Articles: