ಕುರುಕ್ಷೇತ್ರ ಸಿನಿಮಾ ನಾಲ್ಕನೇ ಹಾಡು ಬಿಡುಗಡೆ

frame ಕುರುಕ್ಷೇತ್ರ ಸಿನಿಮಾ ನಾಲ್ಕನೇ ಹಾಡು ಬಿಡುಗಡೆ

somashekhar
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿನಯದ ಕುರುಕ್ಷೇತ್ರ ಸಿನಿಮಾ ಇದೇ ಆಗಸ್ಟ್ 9ರಂದು ಬಿಡುಗಡೆ ಆಗುವ ಸಾಧ್ಯತೆ ಇದೆ. ಇದೀಗ ವಿಶೇಷ ಏನು ಅಂದರೆ, ಕುರುಕ್ಷೇತ್ರ ಚಿತ್ರದ ನಾಲ್ಕನೇ ಹಾಡು ಬಿಡುಗಡೆ ಆಗಿದೆ. ಅಲ್ಲದೇ ಟ್ರೆಂಡ್ ಕ್ರಿಯೇಟ್ ಮಾಡಿದೆ. ಹೀಗಾಗಿ ದರ್ಶನ್ ಅವರ ಅಭಿಮಾನಿಗಳು ಇದೀಗ ಫುಲ್ ಖುಷ್ ಆಗಿದ್ದಾರೆ. 


ಕುರುಕ್ಷೇತ್ರ ಅಭಿನಯದ ಸಿನಿಮಾದಲ್ಲಿ ದರ್ಶನ್ ಹಾಗೂ ಹರಿ]\ಪ್ರಿಯಾ ಜೋಡಿಯ ಕೆಮಿಸ್ಟ್ರಿ ಸಖತ್ ಆಗಿ ವರ್ಕೌಟ್ ಆಗಿದೆ. ಅದರಲ್ಲೂ ಈ ಹಾಡನ್ನೊಮ್ಮೆ ನೋಡಿದರೆ ಸಾಕು ನಿಮಗೆ ತಂತಾನೆ ಗೊತ್ತಾಗುತ್ತದೆ.  ಈ ಹಾಡು ಇದೀಗ ಎಲ್ಲರನ್ನೂ ಮೋಡಿ ಮಾಡುತ್ತಿದೆ. ದರ್ಶನ್ ಅವರ ಅಭಿಮಾನಿಗಳಂತೂ ಸಖತ್ ಖುಷ್ ಆಗಿದ್ದಾರೆ. ಹೌದು ದರ್ಶನ್ ಅವರನ್ನು ಪೌರಾಣಿಕ ಪಾತ್ರಗಳಲ್ಲಿ ನೋಡಿದ್ದೆ ಸಂಗೊಳ್ಳಿ ರಾಯಣ್ಣ ಪಾತ್ರದಲ್ಲಿ, ಇದೀಗ ದುರ್ಯೋದನನಾಗಿ ದರ್ಶನ್ ತೆರೆ ಮೇಲೆ ಮಿಂಚಲಿದ್ದಾರೆ.  


ಹೌದು, ಜುಮ್ಮ ಜುಮ್ಮ ಎಂಬ ಈ ಹಾಡು ನೋಡಲು ಸಖತ್ ಆಗಿದ್ದು, ದಚ್ಚು ಹಾಗೂ ಹರಿಪ್ರಿಯಾ ಅವರು ತುಂಬ ರೋಮ್ಯಾಂಟಿಕ್ ಆಗಿ ಅಭಿನಯಸಿದ್ದಾರೆ. ಕಾಂಬಿನೇಷನ್ ಸಾಂಗ್ ತೆರೆಯ ಮೇಲೆ ಸಖತ್ ವರ್ಕೌಟ್ ಆಗಿದೆ ಎನ್ನಲಾಗುತ್ತಿದೆ. ಈ ಹಾಡು ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನರಿಂದ ವೀಕ್ಷಣೆ ಪಡೆದುಕೊಂಡಿದೆ. 


ಕುರುಕ್ಷೇತ್ರ ಸಿನಿಮಾದ ಮೂರು ಹಾಡುಗಳು ಈಗಾಗಲೇ ಬಿಡುಗಡೆ ಆಗಿವೆ. ಅವು ಕೂಡ ಹಿಟ್ ಆಗಿದ್ದು, ಇದೀಗ ನಾಲ್ಕನೇ ಹಾಡು ಸಿನಿಮಾ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದೆ. ಈ ಹಾಡಿಗೆ ವಿ.ಹರಿಕೃಷ್ಣರವರ ಸಂಗೀತ ಸಂಯೋಜನೆ ಇದೆ. ಜೊತೆಗೆ ಅನುರಾಧ ಭಟ್ ಹಾಗೂ ಶ್ವೇತ ಮೋಹನ್ ಈ ಹಾಡಿಗೆ ಧ್ವನಿಯಾಗಿದ್ದಾರೆ. 


ಇನ್ನು ಈ ಹಾಡಿನ ಸಾಹಿತ್ಯ ಬರೆದವರು ಡಾ.ವಿ.ನಾಗೇಂದ್ರ ಪ್ರಸಾದ್. ಲಹರಿ ಮ್ಯೂಸಿಕ್ ಯೂ ಟ್ಯೂಬ್ ಚಾನೆಲ್ ನಲ್ಲಿ ಈ ಹಾಡು ಬಿಡುಗಡೆಯಾಗಿದೆ. ಕುರುಕ್ಷೇತ್ರ ಚಿತ್ರ ನಾಗಣ್ಣರವರ ನಿರ್ದೇಶನದಲ್ಲಿ ಈ ಚಿತ್ರ ಮೂಡಿ ಬಂದಿದೆ. ಮುನಿರತ್ನ'ಕುರುಕ್ಷೇತ್ರ' ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

Find Out More:

Related Articles:

Unable to Load More