ಸ್ವರ ಭಾಸ್ಕರ್ ಹೊಸ ಲವ್ ಸ್ಟೋರಿ ಶುರುವಾಗಿದೆ. ಹೀಗಂತ ಮಾತುಗಳು ಕೇಳಿ ಬರುತ್ತಿವೆ. ಹೌದು, ಸ್ವರ ಭಾಸ್ಕರ್ ಬಾಲಿವುಡ್ ಲೋಕದ ಟ್ಯಾಲೆಂಟೆಡ್ ಬ್ಯೂಟಿ. ಇದೀಗ ಈಕೆಯೇ ಹೆಸರು ತಾಲೂಕು ಹಾಕಿಕೊಂಡಿರೋದು ಬೇರೆ ಯಾರ ಜೊತೆಗೆ ಅಲ್ಲ, ಅದು ಜ್ಞಾನಪೀಠ ಪುರಸ್ಕೃತ ಸಾಹಿತಿ ದಿವಂಗತ ಗಿರೀಶ್ ಕಾರ್ನಾಡ್ ಪುತ್ರನ ಜೊತೆಗೆ. ಆತನ ಹೆಸರು ರಘು ಕಾರ್ನಾಡ್. ರಘು ಕಾರ್ನಾಡ್ ಪತ್ರಕರ್ತ ಮತ್ತು ಲೇಖಕನೂ ಹೌದು.
ಇದೀಗ ಸ್ವರ ಭಾಸ್ಕರ್ ರಘು ಜೊತೆಗೆ ಡೇಟಿಂಗ್ ಮಾಡುತ್ತಿದ್ದಾಳೆ ಎನ್ನಲಾಗುತ್ತಿದೆ. ಪತ್ರಕರ್ತ ಮತ್ತು ಲೇಖಕರೂ ಆಗಿರುವ ರಘು ಕಾರ್ನಾಡ್ ಅವರು ಅವರ ತಂದೆ ಗಿರೀಶ್ ಕಾರ್ನಾಡ್ ಅವರಂತೆ ಪ್ರತಿಭಾವಂತರು. ಅಲ್ಲದೆ ಇವರು ಕೆಲವು ಪುಸ್ತಕ ಬರೆದಿದ್ದಾರೆ. ಆವೂ ಎರಡನೇ ವಿಶ್ವಯುದ್ದದ ಭಾರತದ ಕಥೆಗಳು. ಇನ್ನು ಕೆಲವು ಪುಸ್ತಕಗಳನ್ನು ಬರೆದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ-ಪುರಸ್ಕಾರಕ್ಕೆ ಪಡೆದಿರೋದು ವಿಶೇಷ.
ಇಷ್ಟೇ ಅಲ್ಲದೆ ಅಲ್ಲದೇ ಕೇಂದ್ರ ಸಾಹಿತ್ಯ ಅಕಾಡೆಮಿಯ ಯುವ ಪುರಸ್ಕಾರ ಸಹರಘು ಅವರಿಗೆ ದೊರಕಿದೆ. ಅದು ಸಾಹಿತ್ಯ ಕ್ಷೇತ್ರಕ್ಕೆ ಇವರು ನೀಡಿದ ಕೊಡುಗೆಗಾಗಿ ಅನ್ನೋದು ಮತ್ತೊಂದು ವಿಶೇಷ. ಇದೀಗ ಸ್ವರ ಜೊತೆಗೆ ಸಿನಿಮಾಗಳ ಪೂರ್ವಭಾವಿ ಪ್ರದರ್ಶನ ಮತ್ತು ಇತರ ಸಭೆ-ಸಮಾರಂಭಗಳಲ್ಲಿ ರಘು ಕಾಣಿಸಿಕೊಂಡಿದ್ದಾರೆ. ಇದು ಗಣ್ಯಾತಿಗಣ್ಯರ ಹುಬ್ಬೇರುವಂತೆ ಮಾಡಿದೆ.
ಬರಿ ಕಾಣಿಸಿಕೊಂಡಿದ್ದರೇ ಸಮಸ್ಯೆ ಇರಲಿಲ್ಲ. ಬದಲಾಗಿ ಇಬ್ಬರೂ ರೆಸ್ಟೋರೆಂಟ್ಗಳಲ್ಲಿ ಡಿನ್ನರ್ ಚಾಟಿಂಗ್ನನ್ನೂ ಅನೇಕರು ಗಮನಿಸಿದ್ದಾರೆ. ಇನ್ನೊಂದು ವಿಷಯ ಏನಪ್ಪಾ ಅಂದರೆ ಸಾರ್ವಜನಿಕವಾಗಿ ಈ ಜೋಡಿ ಪದೇ ಪದೇ ಕಾಣಿಸಿಕೊಳ್ಳುತ್ತಿರುವುದು ಅನೇಕ ಊಹಾಪೋಹಗಳಿಗೆ ಕಾರಣವಾಗಿದೆ. ಅನೇಕ ರೂಮರ್ ಗಳು ಹಬ್ಬಿವೆ. ಇವರಿಬ್ಬರ ಸಂಬಂಧದ ಮುಂದಿನ ಹಂತ ಏನೆಂಬುದನ್ನು ಕಾಲವೇ ನಿರ್ಧರಿಸಬೇಕು.
ಸ್ವರ ಭಾಸ್ಕರ್ 2016ರಲ್ಲಿ ಹಿಮಾಂಶು ಶರ್ಮ ಜೊತೆ ಮೂರು ವರ್ಷ ಡೇಟಿಂಗ್ ನಡೆಸಿದ್ದರು. ಆದರೆ ನಂತರ ಇವರ ಸಂಬಂಧ ಹಳಸಿತ್ತು. ಈಗ ಪ್ರತಿಭಾನ್ವಿತ ಪತ್ರಕರ್ತ ಹಾಗು ಲೇಖಕ ರಘು ಕಾರ್ನಾಡ್ ನಡುವೆ ಪ್ರೇಮ ಸ್ವರಾಲಾಪ ಆರಂಭವಾಗಿದೆ ಎಂದೇ ಹೇಳಲಾಗುತ್ತಿದೆ.