ಲೂಸ್ ಮಾದಾ ಯೋಗಿ ಮತ್ತು ಸತೀಶ್ ನೀನಾಸಂ ಸಲಿಂಗ ಕಾಮಿಗಳು..?!

somashekhar
ಸ್ಯಾಂಡಲ್ ವುಡ್ ನಟ ಲೂಸ್ ಮಾದಾ ಯೋಗಿ ಮತ್ತು ಸತೀಶ್ ನೀನಾಸಂ ಅವರು ಇದೀಗ ಸಲಿಂಗ ಕಾಮಿಗಳು. ಹೌದು ಇದು ನಿಜ ಜೀವನದಲ್ಲಿ ಅಂತ ನೀವು ತಿಳಿದುಕೊಂಡರೆ, ತಪ್ಪು. ಇದು ಸಿನಿಮಾದಲ್ಲಿ ಮಾಡುತ್ತಿರುವ ಪಾತ್ರ. ಹೌದು ಕನ್ನಡದಲ್ಲಿ ಲೈಂಗಿಕ ವಿಷಯದ ಮೇಲೆ ಬಂದಿರೋ ಸಿನಿಮಾಗಳು ಕಡಿಮೆ ಅದರಲ್ಲಿಯೂ ಗೇ ಚಿತ್ರಕತೆಗಳು ತುಂಬ ಕಡಿಮೆಯೇ ಎಂದು ಹೇಳಲಾಗಿದೆ. 

ನಿರ್ದೇಶಕ ವಿಜಯ್ ಪ್ರಸಾದ್ ಅವರ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಚಿತ್ರ ಪರಿಮಳ ಲಾಡ್ಜ್.  ಹೌದು ಇದೇ ಚಿತ್ರದಲ್ಲಿ ಸತೀಶ್ ನೀನಾಸಂ ಹಾಗೂ ಯೋಗಿ ಅವರು ಇಬ್ಬರು ಸಲಿಂಗ ಕಾಮಿಗಳಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಪರಮಳ ಲಾಡ್ಜ್ ಚಿತ್ರದ ಟೀಸರ್ ರಿಲೀಸ್ ಆಗಿದ್ದು, ಟೀಸರ್‌ ನಲ್ಲಿ ಇಬ್ಬರನ್ನೂ ಸಲಿಂಗ  ಕಾಮಿಗಳನ್ನಾಗಿ ಪರಿಚಯಿಸಲಾಗಿದೆ.

ನೀವು ಈ ಹಿಂದೆ ನೋಡಿರಬಹುದು. ಸಿದ್ಲಿಂಗು ಹಾಗೂ ನೀರ್ ದೋಸೆ ಇಂತಹ ಚಿತ್ರಗಳಲ್ಲಿ ಪೋಲಿ ಸಂಭಾಷಣೆಗಳು ಇರುತ್ತಿದ್ದವು. ಇದೀಗ ಅಂತಹುದೇ ಪೋಲಿ ಸಂಭಾಷಣೆ ಇರುವ ಚಿತ್ರವನ್ನು ವಿಜಯ್ ಪ್ರಸಾದ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಸದ್ಯ ರಿಲೀಸ್ ಆಗಿರುವ ಪರಿಮಳ ಲಾಡ್ಜ್ ಟೀಸರ್ ನಲ್ಲಿ ಇಂತಹ ಡೈಲಾಗ್ ಗಳ ಪರಿಚಯ ಮಾಡಿಸಿದ್ದಾರೆ.

ಇದು ವಿಜಜಯ್ ಪ್ರಸಾದ್ ಅವರ ಪೋಲಿ ಮತ್ತು ಫ್ಕೇವರ್ ಇರೋ ಸಿನಿಮಾ. ಈ ಚಿತ್ರದಲ್ಲಿ ನೀವು ಸಲಿಂಗ ಕಾಮದ ಬಗ್ಗೆ ಅನೇಕ ವಿಷ್ಯಗಳನ್ನು ತಿಳಿದುಕೊಳ್ಳಲಿದ್ದಿರಿ. ಸಮಾಜ ಅವರನ್ನು ಹೇಗೆ ಕಾಣುತ್ತದೆ ಎಂದು ನೀವು ನೋಡುತ್ತೀರಿ. ಅಲ್ಲದೇ ಸಲಿಂಗ ಕಾಮಿಗಳಜು ಹೇಗೆ ಬದುಕುತ್ತಾರೆ ಎನ್ನುವುದುನ್ನೂ ನೋಡುತ್ತೀರಿ.

ಇನ್ನು ಚಿತ್ರದಲ್ಲಿ ಬಹುತಾರಾಗಣವಿದೆ. ಯೋಗಿಯ ಜೊತೆ ನಟಿ ಸುಮನ್ ರಂಗನಾಥ್,, ದತ್ತಣ್ಣ, ಬುಲೆಟ್ ಪ್ರಕಾಶ್ ಸೇರಿದಂತೆ ಅನೇಕರು ಇದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಈ ಚಿತ್ರದ ಟೀಸರ್ ರಿಲೀಸ್ ಮಾಡಿ ಚಿತ್ರಕ್ಕೆ ಶುಭ ಹಾರೈಸಿದ್ದಾರೆ. ಹೀಗಾಗಿ ಸತೀಶ್ ನೀನಾಸಂ ಮತ್ತು ಲೂಸ್ ಮಾದಾ ಅವರನ್ನು ನೀವು ನಿಜ ಜೀವನದಲ್ಲಿನ ಸಲಿಂಗ ಕಾಮಿಗಳು ಎಂದುಕೊಳ್ಳುವ ಅವಶ್ಯಕತೆ ಇಲ್ಲ ಬಿಡಿ.


Find Out More:

Related Articles: