ಪ್ರಭಾಸ್ ಮತ್ತು ಶ್ರಧ್ದಾ ಕಪೂರ್ ಅಭಿನಯದ ಬಹಿನಿರೀಕ್ಷಿತ ಚಿತ್ರ ಸಾಹೋ ಇಂದು ವಿಶ್ವದಾದ್ಯಂತ ರಿಲೀಸ್ ಆಗಿದೆ. ಅಭಿಮಾನಿಗಳು ಕಾತರದಿಂದ ಕಾಯುತ್ತ ಕುಳಿತಿದ್ದವರು ಇಂದು ಮೊದಲನೇ ದಿನವೇ ಚಿತ್ರವನ್ನು ವೀಕ್ಷಿಸಿದ್ದಾರೆ. ಎಲ್ಲ ಚಿತ್ರಮಂದಿರಗಳೂ ಹೌಸ್ ಫುಲ್ ಆಗಿದ್ದವು. ಆದರೆ ಚಿತ್ರದ ಬಗ್ಗೆ ಮಿಶ್ರ ಅಭಿಪ್ರಾಯಗಳು ಕೇಳಿ ಬರುತ್ತಿವೆ. ಬರೋಬ್ಬರಿ ಎರಡು ವರ್ಷಗಳ ಬಳಿಕ ಪ್ರಭಾಸ್ ತೆರೆ ಮೇಲೆ ಕಾಣಿಸಿಕೊಂಡಿದ್ದಾರೆ. ಹೀಗಾಗಿ ಸಹಜವಾಗಿಯೇ ಚಿತ್ರದ ಬಗ್ಗೆ ಅಭಿಮಾನಿಗಳು ಕುತೂಗಲ ಹೆಚ್ಚಿತ್ತು ಎಂದು ಹೇಳಬಹುದು.
ಸಿನಿ ವಿಶ್ಲೇಷಕರ ಪ್ರಕಾರ ಸಿನಿಮಾ ಮೊದಲನೇ ದಿನವೇ ನುರು ಕೋಟಿ ಸಂಪಾದನೇ ಮಾಡುತ್ತಿದೆ ಎನ್ನಲಾಗುತ್ತಿದೆ. ತೆಲಂಗಾಣ, ಆಂದ್ರ ಮತ್ತು ಕರ್ನಾಟಕದಿಂದ ಅತಿಹೆಚ್ಚು ಅಭಿಮಾನಿಗಳನ್ನು ಹೊಂದಿರೋ ಪ್ರಭಾಸ್ ಅತ್ತ ಉತ್ತರ ಭಾರತದ ಥೀಯಟರ್ ಗಳಲ್ಲಿಯೂ ತಮ್ಮ ಹವಾ ಸೃಷ್ಟಿಸಿದ್ದಾರೆ. ಹೀಗಾಗಿ ಬಾಲಿವುಡ್ ಲೋಕದ ಕೆಲವು ದಾಖಲೆಗಳನ್ನು ಈ ಸಿನಿಮಾ ಮುರಿಯಬಹುದು ಎನ್ನಲಾಗುತ್ತಿದೆ.
ಆದರೆ ಇಂತಹ ಸಂದರ್ಭದಲ್ಲಿಯೇ ಚಿತ್ರತಂಡಕ್ಕೆ ಒಂದು ಶಾಕ್ ಎದುರಾಗಿದೆ. ಹೌದು ಈ ಚಿತ್ರವನ್ನು ತಮಿಳು ರಾಕರ್ಸ್ ತಂಡದವರು ತಮ್ಮ ಪೈರಸಿ ಮಾಡಿ ತಮ್ಮ ವೆಬ್ ನಲ್ಲಿ ಅಪಲೋಡ್ ಮಾಡಿದ್ದಾರೆ ಎನ್ನಲಾಗಿದೆ. ಈ ಕುರಿತು ರಾಷ್ಟ್ರೀಯ ಮಾದ್ಯಮಗಳು ವರದಿ ಮಾಡಿವೆ. ಹೌದು ಹೀಗಾಗಿ ಇದು ಚಿತ್ರತಂಡಕ್ಕೆ ಇದೀಗ ಭಾರಿ ತಲೇ ನೋವಾಗಿ ಪರಿಣಮಿಸಿದೆ. ಈ ಸಿನಿಮಾ ಬಿಡುಗಡೆಗೂ ಮೊದಲು ಚಿತ್ರದ ನಾಯಕಿ ಶ್ರದ್ಧಾ ಕಪೂರ್ ಅವರು ಚಿತ್ರಬಿಡುಗಡೆಗೂ ಮುನ್ನವೇ ಅಭಿಮಾನಿಗಳಿಗೆ ಒಂದು ಮನವಿ ಮಾಡಿಕೊಂಡಿದ್ದರು.
ಈ ಚಿತ್ರವು ಬಿಗ್ ಸ್ಕ್ರೀನ್ ಮೇಲೆಯೇ ರಿಲೀಸ್ ಆಗುತ್ತದೆ. ಅಲ್ಲಿಯೇ ಬಂದು ಚಿತ್ರವನ್ನು ವೀಕ್ಷಣೆ ಮಾಡಿ, ಪೈರಸಿಗೆ ಪ್ರೋತ್ಸಾಹ ನೀಡಬೇಡಿ ಎಂದು ಹೇಳಿದ್ದರು,. ಆದರೆ ಇದೀಗ ತಮಿಳು ರಾಕರ್ಸ್ ತನ್ನ ಅಟ್ಟಹಾಸವನ್ನು ಪ್ರಭಾಸ್ ಚಿತ್ರದ ಮೇಲೆಯೂ ಬೀರಿದೆ. ಸುಮಾರು 350+ ಕೋಟಿ ಹಣ ಬಂಡವಾಳ ಹೂಡಿ ನಿರ್ಮಿಸಿದ ಚಿತ್ರ ಈ ಸಾಹೋ. ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳ ಭಾಷೆಯಲ್ಲಿ ನಿರ್ಮಾಣಗೊಂಡಿರುವ ಈ ಚಿತ್ರ 4,500ಕ್ಕೂ ಹೆಚ್ಚು ಥಿಯೇಟರ್ಗಳಲ್ಲಿ ಬಿಡುಗಡೆಯಾಗಿದೆ.
ಇಂತಹ ಸಂದರ್ಭದಲ್ಲಿ ಚಿತ್ರವನ್ನು ಸೋರಿಕೆ ಮಾಡಿದ್ದು ಚಿತ್ರದ ಕಲೆಕ್ಷನ್ ಮೇಲೆ ಪರಿಣಾಮ ಬೀರುತ್ತಾ ಅನ್ನೋದನ್ನು ಕಾದು ನೋಡಬೇಕಿದೆ