'ಸಾಹೋ' ಮೊದಲ ದಿನದ ಕಲೆಕ್ಷನ್ ಎಷ್ಟು?

somashekhar
ಬಹುನಿರೀಕ್ಷಿತ ಚಿತ್ರ ಸಾಹೋ ಕಳೆದ ಶುಕ್ರವಾರವಷ್ಟೇ ಬಿಡುಗಡೆ ಆಗಿತ್ತು. ಸುಮಾರು ಎರಡು ವರ್ಷಗಳ ನಂತರ ಪ್ರಭಾಸ್ ಈ ಚಿತ್ರದಲ್ಲಿ ಅಭಿನಯ ಮಾಡಿದ್ದರು. ಈ ಎರಡು ವರ್ಷಗಳ ಕಾಲ ಅವರು ಸಾಹೋ ಚಿತ್ರಕ್ಕೆ ತಮ್ಮ ಸಮಯವನ್ನು ಮೀಸಲಿಟ್ಟಿದ್ದರು. ಒಂದು ಹಂತರದಲ್ಲಿ ಸಿನಿಮಾ ಕೋಟಿ ಕೋಟಿ ಗಳಿಸೋದರಲ್ಲಿ ಸಕ್ಸಸ್ ಆಗಿದೆ. ಆದರೆ ವಿಮರ್ಶಕರ ದೃಷ್ಟಿಯಲ್ಲಿ ಈ ಚಿತ್ರ ದೊಡ್ಡ ಮಟ್ಟದ ಟೀಕೆಗೆ ಗುರಿಯಾಗಿದೆ. ಆದರೆ ಮೊದಲ ದಿನ ಸಾಹೋ ಗಳಿಸಿದ್ದೆಷ್ಟು ಅನ್ನೋದೇ ಇಂಟರೆಸ್ಟಿಂಗ್. ಈ ಕುರಿತು ಡಿಟೇಲ್ಸ್ ಇಲ್ಲಿದೆ.



ಸಿನಿಮಾ ಸುಮಾರಾಗಿದೆ ಎಂದು ಬಹುತೇಕರು ಹೇಳುತ್ತಿದ್ದರೂ ಇದು ಮೊದಲ ದಿನದ ಕಲೆಕ್ಷನ್ ಮೇಲೆ ಪರಿಣಾಮ ಬೀರಿಲ್ಲ. ಯಾಕೆಂದರೆ ಈ ಚಿತ್ರ ಬಿಡುಗಡೆ ಆಗಿದ್ದು ಜಗತ್ತಿನಾದ್ಯಂತ ಬರೋಬ್ಬರಿ 3500 ಚಿತ್ರಮಂದಿರಗಳಲ್ಲಿ. ಮೊದಲನೇ ದಿನ ಅಂದರೆ ಬಹುತೇಕರು ಮುಂಗಡವಾಗಿ ಟಿಕೇಟ್ ಬುಕ್ ಮಾಡಿರುತ್ತಾರೆ. ಹೀಗಾಗಿ ಮೊದಲ ದೊನ ಕಲೆಕ್ಷನ್ ಭರ್ಜರಿಯಾಗಿಗೇ ನಡೆದಿದೆ. ಆಕ್ಷನ್ ಚಿತ್ರವಾಗಿರೋ ಸಾಹೋ ಮೊದಲ ದಿನದ ಕಲೆಕ್ಷನ್ ಬರೋಬ್ಬರಿ 125 ಕೋಟಿ ಎನ್ನಲಾಗುತ್ತಿದೆ. 


ಹೌದು ಸಾಹೋದ ಹಿಂದಿ ಅವತರಣಿಕೆಯಿಂದ 24 ಕೋಟಿ ಕಲೆಕ್ಷನ್ ಆಗಿದೆ ಎಂದು ಖ್ಯಾತ ಸಿನಿಮಾ ವಿಶ್ಲೇಷಕ ತರಣ್ ಆದರ್ಶ್ ತಿಳಿಸಿದ್ದಾರೆ. ಇನ್ನುಳಿದ ಲೋಕಲ್ ಭಾಷೆ ಸೇರಿದಂತೆ ಚಿತ್ರದ ಮೊದಲ ದಿನದ ಕಲೆಕ್ಷನ್ 100 ಕೋಟಿ ಎನ್ನಲಾಗುತ್ತಿದೆ. ಹೀಗಾಗಿ ಒಟ್ಟಾರೆ ಮೊದಲ ದಿನದ ಕಲೆಕ್ಷನ್ 125 ಕೋಟಿ ಎಂದು ಲೆಕ್ಕಾಚಾರವಿದೆ.


ಚಿತ್ರದ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿವೆ. ಆದರೂ ಪ್ರೇಕ್ಷಕರು ಒಮ್ಮೆ ಸಿನಿಮಾ ನೋಡಿಬಿಡೋಣ ಎಂದು ಚಿತ್ರಮಂದಿರದತ್ತ ಹೋಗುತ್ತಲೇ ಇದ್ದಾರೆ. ಮುಂಬಯಿ, ಗುಜರಾತ್ ಸೇರಿದಂತೆ ಇತರ ಭಾಗಗಳಲ್ಲಿ 'ಸಾಹೋ' ಕಲೆಕ್ಷನ್ ಜೋರಾಗಿದೆ. ಇನ್ನು ಟಾಲಿವುಡ್​ನಲ್ಲಿ ಪ್ರಭಾಸ್ ಅಭಿಮಾನಿಗಳು ಸಾಹೋಗೆ ಜೈ ಅನ್ನುತ್ತಿದ್ದಾರೆ. ಅಷ್ಟೇ ಅಲ್ಲದೇ  ಆಂಧ್ರ ಪ್ರದೇಶ-ನಿಜಾಂ ಭಾಗಗಳಿಂದ ಮೊದಲ ದಿನ 56.3 ಕೋಟಿ ಕಲೆಕ್ಷನ್ ಆಗದೆ ಎಂತಲೂ ಹೇಳಲಾಗುತ್ತಿದೆ.


ಇನ್ನು ಕರ್ನಾಟಕದಲ್ಲಿಯೂ ಪ್ರಭಾಸ್ ಫ್ಯಾನ್‌ಗಳಿಗೆ ಏನೂ ಕಡಿಮೆ ಇಲ್ಲ. ಸುಮಾರು 300ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಸಾಹೋ ಕೆರ್ನಾಟಕದಲ್ಲಿ ರಿಲೀಸ್ ಆಗಿತ್ತು. ಹೀಗಾಗಿ ಮೊದಲ ದಿನ 13 ಕೋಟಿ ಕರ್ನಾಟಜದಲ್ಲಿ ಕಲೆಕ್ಷನ್ ಮಾಡಿದೆ ಎಂದು ಸಿನಿ ವಿಶ್ಲೇಷಕ ರಮೇಶ್ ಬಾಲ ತಿಳಿಸಿದ್ದಾರೆ. ಆದರೆ ನೆಗೆಟಿವ್ ರಿವ್ಯೂ ಬಂದರೂ ಇದು ಚಿತ್ರದ ಕಲೆಕ್ಷನ್ ಮೇಲೆ ಯಾವುದೇ ಪರಿಣಾಮ ಬೀರೋದಿಲ್ಲ ಎನ್ನಲಾಗಿದೆ. ಯಾಕೆಂದರೆ ನೆಗೆಟಿವ್ ರಿವ್ಯೂ ಕೂಡ ಒಂದು ಮಟ್ಟಿಗಿನ ಪ್ರಚಾರ ಮಾಡುತ್ತದೆ ಎನ್ನುವುದು ಸತ್ಯ.


Find Out More:

Related Articles: