ಅಮಿರ್ ಖಾನ್ ಅವರು ಫಿಟ್ ನೆಸ್ ಸಿಕ್ರೇಟ್ ಏನು?

somashekhar

ಬಾಲಿವುಡ್ ಲೋಕದ ಮಿ. ಪರ್ಫೆಕ್ಟ್ ಎಂದೇ ಖ್ಯಾತಿ ಪಡೆದವರು ಅಂದರೆ ಅದು ಅಮೀರ್ ಖಾನ್. ಯೆಸ್, ಅಮಿರ್ ಖಾನ್ ಅವರಿಗೆ ಸಿನಿಮಾ ಮೇಲೆ ಪ್ರೀತಿ ಇದೆ. ಬದ್ಧತೆ ಇದೆ. ಅಲ್ಲದೇ ಅವರಯ ವೃತ್ತಿಪರತೆಗೆ ಹೆಚ್ಚು ಹೆಸರು ವಾಸಿ ಆಗಿರುವ ಬಾಲಿವುಡ್ ನಟ. ಇವರು ತಮ್ಮ ಆರೋಗ್ಯದಲ್ಲಿ ಹಾಗೂ ಫಿಟ್ ನೆಸ್ ವಿಚಾರದಲ್ಲಿ ತುಂಬಾನೇ ಕಾಳಜಿ ವಹಿಸುತ್ತಾರೆ. ಹಾಗಾದರೆ ಇದರ ಸಿಕ್ರೇಟ್ ಏನು ಗೊತ್ತಾ?


ಅಮಿರ್ ಖಾನ್ ಅವರಿಗೆ 54 ವರ್ಷ ವಯಸ್ಸ ಅಂದರೆ ಯಾರಾದರೂ ನಂಬ್ತೀರಾ? ನೋ, ಸಾಧ್ಯವೇ ಇಲ್ಲ. ಅವರು ಕಾಣೋದು 28ಯ ವಯಸ್ಸಿನ ಯುವಕನಂತೆ. ಹೌದು ಅವರ ಅಂಗ ಸೌಷ್ಣವಕ್ಕೆ ಅನೇಕ ಅಭಿಮಾನಿಗಳು ಫೀದಾ ಆಗಿದ್ದಾರೆ. ಅಲ್ಲದೇ ಅಮಿರ್ ಖಾನ್ ಜಗತ್ತಿನಾದ್ಯಂತ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ.


ಅಮಿರ್ ಖಾನ್ ಅವರು ತಮ್ಮ ಫಿಟ್‌ನೆಸ್ ದೇಹವನ್ನು ಹೆಚ್ಚಾಗಿ ಪ್ರೀತಿಸುತ್ತಾರೆ. ಅವರು ತಮ್ಮ ಒಆತ್ರಕ್ಕೆ ನ್ಯಾಯ ಒದಗಿಸುವ ದೃಷ್ಟಿಯಿಂದ ಎಂತಹುದೇ ಆದರೂ ರಿಸ್ಕ್ ತೆಗೆದುಕೊಳ್ಳೋಕೆ ರೆಡಿ ಇರ್ತಾರೆ. ಹೌದು, ದೇಹವನ್ನು ಹೆಚ್ಚಾಗಿ ಪ್ರೀತಿಸುವ ಅಮೀರ್‌, ಈ ಹಿಂದೆ ತೂಕ ಇಳಿಸಿಕೊಳ್ಳುವ ಮತ್ತು ಹೆಚ್ಚಿಸಿ ಕೊಳ್ಳುವ ಪ್ರಯೋಗಕ್ಕೆ ಕೈ ಹಾಕಿದ್ದರು. ಅದರಲ್ಲಿ ಅವರು ಯಶಸ್ವಿಯೂ ಆಗಿದ್ದರು.


ಹೌದು ಅಮಿರ್ ಖಾನ್ ಅಂದರೆ ಹಾಗೆಯೇ. ಅವರು ಸಮತೋಲಿತ ಆಹಾರ ಮತ್ತು ನಿಯಮಿತ ವ್ಯಾಯಾಮದ ಫಲವಾಗಿ ತಮ್ಮ ದೇಹವನ್ನು ಯಾವ ಪ್ರಮಾಣದಲ್ಲಿ ಬೇಕಾದರೂ ದಂಡಿಸೋಕೆ ಸಿದ್ದರಿದ್ದಾರೆ. ಆ ಪ್ರಯೋಗದಲ್ಲಿ ಅವರು ಯಶಸ್ವಿಯೂ ಆಗುತ್ತಾರೆ. ಇನ್ನೊಂದು ವಿಚಿತ್ರ ಸಂಗತಿ ಏನಪ್ಪ ಅಂದರೆ 2009ರಲ್ಲಿ ತೆರೆಕಂಡ ಘಜನಿ ಸಿನಿಮಾಕ್ಕೆ ಅಮಿರ್ ಖಾನ್ ಕಳೆದುಕೊಂಡಿದ್ದು ಎಷ್ಟು ಗೊತ್ತಾ? ಬರೋಬ್ಬರಿ 30 ಕೆ.ಜಿ. ಇನ್ನು 2016ರಲ್ಲಿ ಬಿಡುಗಡೆಯಾಗಿದ್ದ 'ದಂಗಲ್' ಚಿತ್ರಕ್ಕಾಗಿ ಅಮಿರ್ 97 ಕೆ.ಜಿ.ವರೆಗೂ ತೂಕ ಹೆಚ್ಚಿಸಿಕೊಂಡಿದ್ದರು.


ಇದೇ ಕಾರಣಕ್ಕೆ ಅಮಿರ್ ಖಾನ್ ಅವರನ್ನು ಮಿ. ಪರ್ಫೆಕ್ಟ್ ಎಂದು ಕರೆಯುವುದು. ತಮ್ಮ ಆರೋಗ್ಯವನನ್ನು ಸರಿಯಾಗಿ ಕಾಯ್ದುಕೊಂಡು ಅಮಿರ್ ಇನ್ನೂ ಚಿರಯುವಕನಂತೆ ಕಾಣಿಸುವ ಗುಟ್ಟು ಇದೇ ನೋಡಿ.


Find Out More:

Related Articles: