ಐಸ್ ಲ್ಯಾಂಡ್ ನಲ್ಲಿ ರವಿತೇಜ ಏನು ಮಾಡುತ್ತಿದ್ದಾರೆ!?

frame ಐಸ್ ಲ್ಯಾಂಡ್ ನಲ್ಲಿ ರವಿತೇಜ ಏನು ಮಾಡುತ್ತಿದ್ದಾರೆ!?

somashekhar
ಇತ್ತೀಚೆಗೆ ಗೋವಾ ಶೆಡ್ಯೂಲ್ ಮುಗಿಸಿಕೊಂಡ 'ಡಿಸ್ಕೋ ರಾಜಾ' ತಂಡ ಪ್ರಸ್ತುತ ಫಾರಿನ್ ಕಡೆ ಮುಖ ಮಾಡಿದ್ದಾರೆ. ವಿ.ಐ ಆನಂದ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಡಿಸ್ಕೋ ರಾಜಾ ಸಿನಿಮಾದಲ್ಲಿ ರವಿತೇಜ ನಟನಾಗಿ, ಪಾಯಲ್ ರಜಫುತ್, ಸಭಾ ನಟೇಶ್, ತಾನ್ಯಾ ಪ್ರೇಪ್  ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಎಸ್. ಆರ್. ಟಿ ಎಂಟರ್ಟೈನ್ಮೆಂಟ್ ಬ್ಯಾನರ್ ಅಡಿಯಲ್ಲಿ ರಾಮ್ ತಳ್ಳೂರಿ ಆಶೀರ್ವಾದ ಮೇರೆಗೆ ರಜಿನಿ ತಳ್ಳೂರಿ ಚಿತ್ರ ನಿರ್ದೇಶಿಸಿದ್ದಾರೆ.


ಬಹು ನಿರೀಕ್ಷಿತ ಡಿಸ್ಕೋ ರಾಜಾ  ಚಿತ್ರವು ಡಿಸೆಂಬರ್ 20ರಂದು ತೆರೆಕಾಣಲಿದೆ. ತಳ್ಳೂರಿ ಮಾತನಾಡಿ ರವಿತೇಜ ಸಿನಿಮಾ ಜೀವನದಲ್ಲಿ ಅತ್ಯಧಿಕ ಬಜೆಟ್ ನಲ್ಲಿ ಚಿತ್ರ ಮೂಡಿ ಬರುತ್ತಿದ್ದೆ. ಗೋವಾದಲ್ಲಿ 15 ದಿನ ಚಿತ್ರೀಕರಿಸಿದ್ದೇವೆ. ಪ್ರಸ್ತುತ ಯುರೋಪಿನ ಐಸ್ಲ್ಯಾಂಡ್ ಚಿತ್ರೀಕರಣಕ್ಕೆ ನಾಲ್ಕರಿಂದ ಐದು ಕೋಟಿ ಖರ್ಚಾಗಲಿದೆ. ಇಷ್ಟು ಮೊತ್ತದ ಚಿತ್ರೀಕರಣವೂ ಸಿನಿಮಾದಲ್ಲಿ ಕೇವಲ 4 ನಿಮಿಷಗಳು ಮಾತ್ರ ಇರುತ್ತದೆ. 


ಈ ದೃಶ್ಯಗಳು ಚಿತ್ರದಲ್ಲಿ ಅತ್ಯದ್ಭುತವಾಗಿರಲಿವೆ. ಗ್ರಾಫಿಕ್ಸ್ ಅಮೋಘವಾಗಿ ಮೂಡಿಬಂದಿದೆ. ಈಗಾಗಲೇ ಬಿಡುಗಡೆ ಮಾಡಿರುವ ಪೋಸ್ಟರ್ಗಳಿಗೆ ಅಭಿಮಾನಿಗಳಿಂದ ಭರ್ಜರಿ ಪ್ರತಿಕ್ರಿಯೆ ದೊರೆತಿದೆ.  ಜನರನ್ನು ಮನರಂಜಿಸುವ ಸಿನೆಮಾ ಹೆಸರಿಗೆ ತಕ್ಕಂತೆ ಚಿತ್ರವು ಎಲ್ಲಾ ವರ್ಗದ ಜನರನ್ನು ಮನರಂಜಿಸುತ್ತಾರೆ ಎಂದು ತಿಳಿಸಿದರು. ಭಾವಿ ಸಿಂಹ ವೆನ್ನೆಲ, ಕಿಶೋರೆ ಸತ್ಯ ತದಿತರ ನಟಿಸುತ್ತಿರುವ ಈ ಚಿತ್ರವನ್ನು ಸಾಯಿ ರಿಶಿಕ್ ಅವರಿಗೆ ಅರ್ಪಿಸಿದ್ದಾರೆ. ಕಾರ್ತಿಕ್ ಘುಟ್ಟಮೆನಿನ್  ಕ್ಯಾಮೆರಾ ರೋಲ್ ಮಾಡಿದರೆ, ತಮನ್ ಸಂಗೀತ ನೀಡಿದ್ದಾರೆ. 


ಐಸ್ ಲ್ಯಾಂಡ್ ನಲ್ಲಿ ನಡೆಯುತ್ತಿರುವ ಈ ಚಿತ್ರೀಕರಣವು ಹಾಲಿವುಡ್ ಬ್ಲಾಗ್ ಬಸ್ಟರ್ ಸಿನಿಮಾ ಫಾಸ್ಟ್ ಅಂಡ್ ಪ್ಯೂರಿಯಸ್ -7 ಚಿತ್ರ ಯಾಕ್ಷನ್  ಸ್ಟನ್ಟ್  ಮಾಸ್ಟರ್ಸ್ ಇವರು ಅಂತರಾಷ್ಟ್ರೀಯ ಸಿನಿಮಾಗಳಿಗೆ ಮಾಡಿದ್ದು, ಇದೀಗ ಈ ಚಿತ್ರದಲ್ಲೂ ಇದೇ ಟೀಂ ಕೆಲಸ ಮಾಡಲಿದೆ. ಈ ಚಿತ್ರದಿಂದ ರವಿತೇಜ ಮತ್ತೊಮ್ಮೆ ತಮ್ಮ ಫಾರ್ಮ್ ಗೆ ಮರಳಲಿದ್ದಾಲೆ, ಚಿತ್ರವು ಅತ್ಯುತ್ತಮ ವಾಗಿರಲಿದೆ ಎಂದು ತಿಳಿಸಿದ್ದಾರೆ. ಮಾಸ್ ರವಿತೇಜ ಈಸ್ ಬ್ಯಾಕ್ ಎಂದು ಅಭಿಮಾನಿಗಳು ದಿಲ್ ಕುಶಲ ಆಗಿದ್ದಾರೆ. 


Find Out More:

Related Articles:

Unable to Load More