ಆಕ್ಷನ್ ಆಯ್ತು.. ಇದೀಗ ರೊಮ್ಯಾನ್ಸ್ ಗೆ ರೆಡಿಯಾದ ಪ್ರಭಾಸ್

frame ಆಕ್ಷನ್ ಆಯ್ತು.. ಇದೀಗ ರೊಮ್ಯಾನ್ಸ್ ಗೆ ರೆಡಿಯಾದ ಪ್ರಭಾಸ್

somashekhar
ನಾ ಭೂತೋ  ನಾ ಭವಿಷ್ಯತ್ ಎನ್ನುವ ಹಾಗೆ ಬಾಹುಬಲಿ ಯಶಸ್ವಿಯಾದ ಬಳಿಕ ನಟ ಪ್ರಭಾಸ್ ಸಾಹೋ ಎನ್ನುವ ಆಕ್ಷನ್ ಫಿಲ್ಮ್ ಮಾಡಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಇದರ ಭರ್ಜರಿ ಯಶಸ್ಸಿನ ಬೆನ್ನಲ್ಲೇ ನಟ ಪ್ರಭಾಸ್ ತಮ್ಮ ಮುಂದಿನ ರೋಮ್ಯಾಂಟಿಕ್ ಚಿತ್ರದ ತಯಾರಿಯಲ್ಲಿ ತೊಡಗಿದ್ದಾರೆ. ಪ್ರಸ್ತುತ ಪ್ರಭಾಸ್ ಕಠಿಣ ಡಯಟ್ ಮಾಡುತ್ತಿದ್ದು ಮುಂದಿನ ಚಿತ್ರಕ್ಕಾಗಿ ಅವರು ತೂಕ ಕಳೆದುಕೊಳ್ಳಲು ಬಾರಿ ವರ್ಕೌಟ್ ಮಾಡುತ್ತಿದ್ದಾರೆ. ತಮ್ಮ ಮುಂದಿನ ಚಿತ್ರ ಯಾವುದೆಂದು ಒಂದು ಚಿಕ್ಕ ಸುಳಿವನ್ನು ಬಿಟ್ಟುಕೊಡದ ತಂಡ ಇದೀಗ ರೊಮ್ಯಾಂಟಿಕ್ ಸಿನೇಮಾ ಎಂಬುದು ಬಿಸಿ ಬಿಸಿಯಾಗಿ ಚರ್ಚೆಯಾಗುತ್ತಿದೆ. ಪ್ರಸ್ತುತ ಈ ಚಿತ್ರಕ್ಕೆ ಶೀರ್ಷಿಕೆಯೂ ಸಹ ಅಂತಿಮವಾಗಿಲ್ಲ. ಈ ಚಿತ್ರದ ಮೊದಲ ಹಂತದ ಚಿತ್ರೀಕರಣ ಯುರೋಪ್ನಲ್ಲಿ ನಡೆಯುತ್ತಿದೆ. 

ರೆಬೆಲ್ ಸ್ಟಾರ್ ಪ್ರಭಾಸ್ ಗೆ ನಾಯಕಿಯಾಗಿ ಪೂಜಾ ಹೆಗಡೆ ನಟಿಸುತ್ತಿದ್ದಾರೆ ಎಂಬುದು ತಿಳಿದುಬಂದಿದೆ. ಆಕ್ಷನ್ ಥ್ರಿಲ್ಲರ್ ಕಥೆಯನ್ನೊಳಗೊಂಡ ಸಾಹೋ ಚಿತ್ರಕ್ಕೆ ಅಭಿಮಾನಿಗಳು ರಂಜಿಸಲು ಅವರು ಮುಂದಾಗಿದ್ದರು. ಆದರೆ ಇದು ಇವರ 20ನೇ ಚಿತ್ರ. ಈ ಚಿತ್ರಕ್ಕಾಗಿ ಅವರು ಕೆಲ ಕೆಜಿ ಗಳಷ್ಟು ತೂಕವನ್ನು ಕಳೆದುಕೊಳ್ಳಬೇಕಾಗಿದೆ. ಇದಕ್ಕಾಗಿ ನಟ ಈಗ ಕಠಿಣ ಡಯಟ್, ವ್ಯಾಯಾಮ, ತರಬೇತಿ ಹಾಗೂ ಕಠಿಣ ವರ್ಕೌಟ್ ಗಳನ್ನು ಮಾಡುತ್ತಿದ್ದಾರೆ. 

ಈ ಚಿತ್ರದ ಬಗ್ಗೆ ಕೆಲ ದಿನಗಳ ಹಿಂದೆ ಪ್ರಭಾಸ್ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಅದೇನೆಂದರೆ ಮೂರು ಭಾಷೆಗಳಲ್ಲಿ ಬಿಡುಗಡೆಯಾಗಲಿರುವ ನನ್ನ ಮುಂದಿನ ಚಿತ್ರ ಬಗ್ಗೆ ಘೋಷಣೆ ಮಾಡಲು ತುಂಬಾ ಖುಷಿಯಾಗುತ್ತಿದೆ, ಯೂಬಿ ಕ್ರಿಯೇಶನ್ ಅಸೋಶಿಯೇಶನ್ ಸಹಯೋಗದೊಂದಿಗೆ ಗೋಪಿ ಕೃಪ ಮೂವೀಸ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ ಎಂದು ಬರೆದುಕೊಂಡಿದ್ದಾರೆ.

ಇದೀಗ ಅಭಿಮಾನಿಗಳಲ್ಲಿ ಈ ಸ್ಟೋರಿ ಏನು, ಯಾವಾಗ ತೆರೆ ಮೇಲೆ ಕಾಣಬಹುದೆಂದು ಕುತೂಹಲ ಉಂಟಾಗಿದೆ. ಪ್ರಸ್ತುತ ಚಿತ್ರವನ್ನು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಬಾಹುಬಲಿ ಯಶಸ್ಸಿನ ನಂತರ ಪ್ರಭಾಸ್ ಜಗದ್ವಿಖ್ಯಾತಿಯಾಗಿದ್ದು, ಪ್ರಸ್ತುತ ಹಲವಾರು ದೇಶ-ವಿದೇಶಗಳಲ್ಲಿ ಅಭಿಮಾನಿಗಳು ಇದ್ದಾರೆ. 


Find Out More:

Related Articles:

Unable to Load More