ತಮಿಳು ನಟ ವಿಶಾಲ್ ಮದುವೆ ಏನಾಯ್ತು?!

somashekhar
ತಮಿಳು ನಟ ವಿಶಾಲ್ ಸಿನಿಮಾಗಳಿಗೆ ತಮಿಳಿನಲ್ಲಿ ಮಾತ್ರವಲ್ಲದೆ ಆಂಧ್ರ, ತೆಲಂಗಾಣದಲ್ಲೂ ಭಾರೀ ಬೇಡಿಕೆ. ತನ್ನದೇಯಾದಂತಹ ಪ್ರಭಾವವಿದೆ. ನಟ ವಿಶಾಲ್ ಅವರು ಕಳೆದ ಮಾರ್ಚ್ ತಿಂಗಳಲ್ಲಿ ಎಂಗೇಜ್ ಅಗಿದ್ದರು. ನಟಿ ಅನಿಶಾ ಅಲ್ಲ ರೆಡ್ಡಿ ಜೊತೆ ವೈವಾಹಿಕ ಬದುಕು ಆರಂಭಿಸುವುದಾಗಿ ವಿಶಾಲ್ ಅಧಿಕೃತವಾಗಿ ಪಾರ್ಟಿಯೊಂದರಲ್ಲಿ ಘೋಷಿಸಿದ್ದರು.  2019 ಮಾರ್ಚ್ ನಲ್ಲಿ ವಿಶಾಲ್ ಮತ್ತು ಅನಿಶಾ ಅವರ ನಿಶ್ಚಿತಾರ್ಥವೂ ಆಗಿತ್ತು.
 
ಎಲ್ಲ ಅಂದುಕೊಂಡಂತೆ ಆದರೆ ಅಕ್ಟೋಬರ್ ತಿಂಗಳಲ್ಲಿ ಇವರಿಬ್ಬರ ಮದುವೆ ಅದ್ಧೂರಿಯಾಗಿ ನಡೆಯಲಿದೆ. ಈ ಮಧ್ಯೆ ವಿಶಾಲ್ ಮತ್ತು ಅನಿಶಾ ಮದುವೆ ಬಗ್ಗೆ ಸುದ್ದಿಯೊಂದು ಸಿಡಿಲಿನಂತೆ ಬಂದೆರಗಿದೆ. ಅದೇನೆಂದರೆ ನಿಶ್ಚಿತಾರ್ಥದ ಸಂಭ್ರಮದಲ್ಲಿ ತಮಿಳು ನಟ ವಿಶಾಲ್ ಮತ್ತು ಅನಿಶಾ ಮದುವೆರದ್ದಾಗಿದೆ ಎಂಬ ಗಾಸಿಪ್ ಇಂಡಸ್ಟ್ರಿಯಲ್ಲಿ ಸಖತ್ ಸದ್ದು ಮಾಡ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಘಟನೆಯೊಂದು ಕೂಡ ನಡೆದಿದೆ. ಅಷ್ಟಕ್ಕೂ, ಆ ಘಟನೆ ಏನು? ಮುಂದೆ ಓದಿ. 

ವಿಶಾಲ್-ಅನಿಶಾ ನಡುವೆ ಎಲ್ಲವೂ ಸರಿಯಿಲ್ಲ. ತಮಿಳು ನಟ ವಿಶಾಲ್ ಮತ್ತು ಅನಿಶಾ ಇಬ್ಬರು ಪರಸ್ಪರ ಪ್ರೀತಿಸಿ, ಮನೆಯವರನ್ನ ಒಪ್ಪಿಸಿ ಮದುವೆವರೆಗೂ ಬಂದಿದ್ದಾರೆ. ಎಂಗೇಜ್ ಮೆಂಟ್ ಉಂಗುರ ಕೂಡ ಬದಲಿಸಿಕೊಂಡಿದ್ದಾರೆ. ಈ ಮಧ್ಯೆ ಇಬ್ಬರ ಮಧ್ಯೆ ಮನಸ್ತಾಪ ಮೂಡಿದ್ದು, ಇದರ ಪರಿಣಾಮ ಮದುವೆ ನಿಲ್ಲಿಸಲು ಮುಂದಾಗಿದ್ದಾರೆಂದು ಕೆಲವು ವೆಬ್ ಸೈಟ್ ಗಳು ವರದಿ ಮಾಡಿರುವುದು ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ. 

ಫೋಟೋ ತೆಗೆದು ಹಾಕಿದ ಅನಿಶಾ: ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಇಬ್ಬರು ಒಟ್ಟಿಗಿರುವ ಫೋಟೋ ಹಂಚಿಕೊಂಡು ಮದುವೆ ವಿಷ್ಯ ಬಿಚ್ಚಿಟ್ಟಿದ್ದರು. ಈಗ, ಅನಿಶಾ ಅವರೇ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಆ ಫೋಟೋಗಳನ್ನ ತೆಗೆದುಹಾಕಿದ್ದಾರೆ ಎನ್ನಲಾಗಿದೆ. ಇದನ್ನ ಗಮನಿಸಿದ ನೆಟ್ಟಿಗರು ಬಹುಶಃ ಮದುವೆ ಮುರಿದು ಬಿದ್ದಿರಬೇಕು ಎನ್ನುತ್ತಿದ್ದಾರೆ.

ವಿಶಾಲ್ ಅಥವಾ ಅನಿಶಾ ಸ್ಪಷನೆ ಅಗತ್ಯ.ಖಾಸಗಿ ಜೀವನದ ಬಗ್ಗೆ ಇಂತಹ ಸುದ್ದಿಗಳು ಚರ್ಚೆಯಾದಾಗ, ಸೆಲೆಬ್ರಿಟಿಗಳು ಅಧಿಕೃತವಾಗಿ ಸ್ಪಷ್ಟನೆ ನೀಡುವುದು ಉತ್ತಮ. ಇಲ್ಲಿಯವರೆಗೂ ವಿಶಾಲ್ ಆಗಲಿ ಅಥವಾ ಅನಿಶಾ ಆಗಲಿ ಈ ಬಗ್ಗೆ ಮಾತನಾಡಿಲ್ಲ. ಹಾಗಾಗಿ, ಆ ವದಂತಿಗಳು ಇನ್ನು ಜೀವಂತವಾಗಿವೆ.  


Find Out More:

Related Articles: