ನಟಿ ತಾರಾ ಪುತ್ರನೀಗ ಸ್ಯಾಂಡಲ್ ವುಡ್ ಗೆ ಎಂಟ್ರಿ

frame ನಟಿ ತಾರಾ ಪುತ್ರನೀಗ ಸ್ಯಾಂಡಲ್ ವುಡ್ ಗೆ ಎಂಟ್ರಿ

somashekhar
ನಟಿ ತಾರಾ ಮಗ ಶ್ರೀಕೃಷ್ಣನ ಪಾತ್ರಕ್ಕೆ ತಕ್ಕಂತೆ ಚಿತ್ರದಲ್ಲಿ ಸೊಗಸಾಗಿ ಅಭಿನಯಿಸಿದ್ದಾರೆ ನಟನೆಯ ಬಗ್ಗೆ ಅತೀವ ಆಸಕ್ತಿ ಇದೆ ಕಲೆ ರಕ್ತದಿಂದಲೇ ಬಂದಿದೆ ಆತ ಭವಿಷ್ಯದ ಸ್ಟಾರ್ ಎನ್ನುವುದು ಚಿತ್ರದಲ್ಲಿನ ತನ್ನ ಪಾತ್ರದ ಮೂಲಕ ತೋರಿಸಿದ್ದಾರೆ ಎಂದು "ಶಿವ ತೇಜಸ್" ನಿರ್ದೇಶಕರ ಮಾತಾಗಿದೆ. 

 ಇತ್ತೀಚಿಗೆ ಪ್ರಿಯಾಂಕ ಉಪೇಂದ್ರ ಪುತ್ರಿ ಐಶ್ವರ್ಯ ದೇವಕಿ ಚಿತ್ರದೊಂದಿಗೆ ಬೆಳ್ಳಿತೆರೆಗೆ ಎಂಟ್ರಿಯಾಗಿ ಸಖತ್ ಸೌಂಡ್ ಮಾಡಿದ್ದರು. ಸುಧಾರಾಣಿ  ಪುತ್ರಿ ಹಾಗೂ ಮಾಲಾಶ್ರೀ ಪುತ್ರಿ ಕೂಡ ಬೆಳ್ಳಿತೆರೆಗೆ ಎಂಟ್ರಿ ಆಗುತ್ತಿದ್ದಾರೆ, ಎನ್ನುವ ಸುದ್ದಿ ಇದೆ ಈ ಮಧ್ಯೆ ನಟಿ ತಾರಾ ಪುತ್ರ ಶ್ರೀಕೃಷ್ಣ ಶಿವರಾರ್ಜುನ ಚಿತ್ರದ ಮೂಲಕ ಪರಿಚಯವಾಗುತ್ತಿದ್ದಾರೆ. ಸಿನಿಮಾ ಆಸಕ್ತಿ ಬಗ್ಗೆ ಕೇಳಿದರೆ ಅಮ್ಮನೇ ಕಾರಣ ಎನ್ನುವ ಶ್ರೀಕೃಷ್ಣನಿಗೆ ಯಶ್ ಅಂದ್ರೆ ತುಂಬಾ ಇಷ್ಟ ದ್ರುವ ಸರ್ಜಾ ಅವರ ಹಾಗೆ ಫೈಟಿಂಗ್ ಮಾಡಬೇಕು ಎನ್ನುತ್ತಾನೆ ಪುಟಾಣಿ ಪುಟ್ಟ. 

ಅಷ್ಟೇ ಅಲ್ಲ ಈ ಚಿತ್ರಕ್ಕೆ ವೇಣು ಅವರ ಛಾಯಾಗ್ರಹಣವಿದೆ, ಸದ್ಯ ತಾರಾ ಮತ್ತು ಅವರ ಪುತ್ರ ಕೃಷ್ಣ ಅಭಿನಯದ ದೃಶ್ಯಗಳ ಚಿತ್ರೀಕರಣ ಪೂರ್ಣಗೊಂಡಿದೆ. ಇದೀಗ ಅವರಿಬ್ಬರ ಪಾತ್ರಗಳಿಗೆ ಡಬ್ಬಿಂಗ್ ಕಾರ್ಯ ಶುರುವಾಗಿದೆ. ಬೆಂಗಳೂರಿನ ಅಬ್ಬಯ್ಯ ನಾಯ್ಡು ಸ್ಟುಡಿಯೋದಲ್ಲಿ ಇತ್ತೀಚಿಗೆ ತಾರ ಮತ್ತು ಅವರ ಪುತ್ರ ಶ್ರೀ ಕೃಷ್ಣ ಇಬ್ಬರು ಡಬ್ಬಿಂಗ್ ಪಾಲ್ಗೊಂಡಿದ್ದರು ಸಾಮಾನ್ಯವಾಗಿ ಅಷ್ಟು ಚಿಕ್ಕ ಮಕ್ಕಳಿಗೆ ಭಾಷೆ ತೊಂದರೆ ಆಗುತ್ತಂತೆ ಡಬ್ಬಿಂಗ್ ಆರ್ಟಿಸ್ಟ್ ನೆರವು ಪಡೆಯಲಾಗುತ್ತದೆ, ಆದರೆ ಈತ ತಾನೇ ಡಬ್ಬಿಂಗ್ ಮಾಡಿದ್ದು ಅಚ್ಚರಿ ಎನಿಸಿತು ಇದನ್ನೆಲ್ಲ ನೋಡಿದಾಗ ಸಂತೋಷದಿಂದ ಭಾವುಕಳಾದೆ ಎನ್ನುತ್ತಾರೆ ತಾರ.

 ಪುಟಾಣಿ ಶ್ರೀಕೃಷ್ಣನಿಗೆ ಆರು ವರ್ಷ ಅವರ ನಿವಾಸದ ಬಳಿ ಇರುವ ಕಾಮೆಂಟ್ ಸ್ಕೂಲ್ನಲ್ಲಿ ಫಸ್ಟ್ ಸ್ಟ್ಯಾಂಡರ್ಡ್ ಚಿಕ್ಕವಯಸ್ಸಿನಲ್ಲಿ ತಮ್ಮಂತೆಯೇ ಪುತ್ರನನ್ನು ಸಿನಿ ಜಗತ್ತಿಗೆ ಪರಿಚಯಿಸುತ್ತಿದ್ದಾರೆ . ವೇಣು- ತಾರಾ ದಂಪತಿ ಆತನನ್ನು ಸಿನಿಮಾಕ್ಕೆ ಪರಿಚಯಿಸಬೇಕು ಎನ್ನುವ ಆಲೋಚನೆ ನಮಗಿರಲಿಲ್ಲ, ಚಿತ್ರದಲ್ಲಿ ತಾಯಿ ಪಾತ್ರಕ್ಕೆ ಒಬ್ಬ ಮಗು ಇರುತ್ತಾನೆ ಆ ಪಾತ್ರಕ್ಕೆ ಸೂಕ್ತವಾದ ಬಾಲಕ ಬೇಕು ಅಂತ ಹುಡುಕಾಡುತ್ತಿದ್ದಾಗ ಶಿವಾರ್ಜುನ್ ನಿಮ್ಮ ಮಗನಿಂದಲೇ ಮಾಡಿಸಿ ಎಂದರು.




Find Out More:

Related Articles:

Unable to Load More