ಮತ್ತೇ ಮೋಡಿ ಮಾಡಲು ಶುರುಮಾಡಿದ ವಿಶ್ವಸುಂದರಿ

frame ಮತ್ತೇ ಮೋಡಿ ಮಾಡಲು ಶುರುಮಾಡಿದ ವಿಶ್ವಸುಂದರಿ

somashekhar
ಈ ವಿಶ್ವಸುಂದರಿ 20 ವರ್ಷಗಳ ಹಿಂದೆ ತೆರೆ ಮುಂದೆ ನಟಿಸಿದ್ದು, ಪ್ರಸ್ತುತ ಮತ್ತೇ ತೆರೆ ಮೇಲೆ ಮೋಡಿ ಮಾಡಲು ಸಜ್ಜಾಗ್ಗುತ್ತಿದ್ದಾರೆ. ಆ ಚಲುವೆ ಬೇರಾರು ಅಲ್ಲ. ನಮ್ಮ ಕನ್ನಡತಿ. ಮಂಗಳೂರಿನ ಬೆಡಗಿ ಐಶ್ವರ್ಯ ರೈ. ಇಂದಿಗೂ ಹೊಸ ತಲೆಮಾರಿನ ನಟಿಯರ ಸಮನಾಗಿ ನಿಲ್ಲುವಂತಹ ಮೈಮಾಟವನ್ನು ಹೊಂದಿರುವ ಐಶ್ವರ್ಯ ರೈಗೆ ಬಾಲಿವುಡ್​ನಲ್ಲಿ ಇನ್ನೂ ಬೇಡಿಕೆ ಕಡಿಮೆಯಾಗಿಲ್ಲ. ಬಾಲಿವುಡ್​ನಲ್ಲಿ ಹಲವು  ಪಾತ್ರಗಳಲ್ಲಿ ನಟಿಸಿರುವ ಐಶ್ವರ್ಯಾ ರೈ ಕಾಲಿವುಡ್​ನಲ್ಲೂ ರಜನಿ ಜೊತೆ ಸಿನಿಮಾ ಮಾಡಿದ್ದಾರೆ.

 ಎಸ್. ಶಂಕರ್ ನಿರ್ದೇಶನದ ತಮಿಳು ಸಿನಿಮಾ 'ಜೀನ್ಸ್'ನಲ್ಲಿ ದ್ವಿಪಾತ್ರದಲ್ಲಿ ನಟಿಸಿದ್ದ ಐಶ್ವರ್ಯ ಬರೋಬ್ಬರಿ 20 ವರ್ಷಗಳ ನಂತರ ಮತ್ತೆ ತಮಿಳಿನಲ್ಲಿಯೇ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿಗಳು ವೈರಲ್ ಆಗಿವೆ. ಕಾಲಿವುಡ್ ನಟ ಪ್ರಶಾಂತ್ ಜೊತೆಗೆ ತಮ್ಮ ವೃತ್ತಿ ಜೀವನದ ಆರಂಭದಲ್ಲಿ ಡಬಲ್ ರೋಲ್​ನಲ್ಲಿ ನಟಿಸಿದ್ದ ಐಶ್ವರ್ಯ 2010ರಲ್ಲಿ ತೆರೆಕಂಡಿದ್ದ ತಮಿಳಿನ 'ಎಂದಿರನ್' ಸಿನಿಮಾದಲ್ಲಿ ರಜನಿಕಾಂತ್​ ಜೊತೆ ನಟಿಸಿದ್ದೇ ಕೊನೆ. ಇದೀಗ ತಮಿಳಿನ ಖ್ಯಾತ ಸಾಹಿತಿ ಕಲ್ಕಿ ಕೃಷ್ಣಮೂರ್ತಿ ಅವರ ಐತಿಹಾಸಿಕ ಕಾದಂಬರಿ ಆಧಾರಿತ 'ಪೊನ್ನಿಯಿನ್ ಸೆಲ್ವನ್' ಸಿನಿಮಾ ನಿರ್ದೇಶಿಸಲು ಮುಂದಾಗಿದ್ದಾರೆ. ಈ ಸಿನಿಮಾಗೆ ಐಶ್ವರ್ಯ ರೈ ನಾಯಕಿಯಾಗಿ ಆಯ್ಕೆಯಾಗಿದ್ದು, ಅವರು ದ್ವಿಪಾತ್ರದಲ್ಲಿ ನಟಿಸಲಿದ್ದಾರೆ ಎಂಬುದು ತಿಳಿದುಬಂದಿದೆ. 

ಈ ಸಿನಿಮಾದ ಇತರೆ ಪ್ರಮುಖ ಪಾತ್ರಗಳಿಗೆ ವಿಕ್ರಂ, ಜಯಂ ರವಿ, ಕೀರ್ತಿ ಸುರೇಶ್ ಮುಂತಾದವರನ್ನು ಸಂಪರ್ಕಿಸಲಾಗಿದೆ. ಇನ್ನೂ ವಿಶೇಷವೆಂದರೆ ಈ ಸಿನಿಮಾದಲ್ಲಿ ನಟಿಸಲು ಐಶ್ವರ್ಯ ಅವರ ಮಾವ ಅರ್ಥಾತ್​ ಬಾಲಿವುಡ್​ ಬಿಗ್​ಬಿ ಅಮಿತಾಭ್​ ಬಚ್ಚನ್​ಗೂ ಆಹ್ವಾನ ನೀಡಲಾಗಿದೆಯಂತೆ. ಈ ಸಿನಿಮಾದಲ್ಲಿ ನಾಯಕಿ ಮತ್ತು ನಾಯಕಿಯ ತಾಯಿ ಎರಡೂ ಪಾತ್ರಗಳಲ್ಲಿ ಐಶ್ವರ್ಯಾ ರೈ ಅವರೇ ಅಭಿನಯಿಸಲಿದ್ದಾರೆ. 'ಪೊನ್ನಿಯಿನ್ ಸೆಲ್ವನ್' ಸಿನಿಮಾ ಚಿತ್ರೀಕರಣ ನವೆಂಬರ್​ನಲ್ಲಿ ಆರಂಭವಾಗುವ ಸಾಧ್ಯತೆಯಿದೆ. ಇದರಲ್ಲಿ ಐಶ್ವರ್ಯ ರೈಗೆ ಜೋಡಿಯಾಗಿ ಟಾಲಿವುಡ್ ನಟ ಮಹೇಶ್ ಬಾಬು ನಟಿಸಲಿದ್ದಾರೆ ಎಂಬ ಸುದ್ದಿಗಳೂ ಹರಿದಾಡುತ್ತಿವೆ. ಒಟ್ಟಾರೆ ಮಣಿರತ್ನಂ ಅವರ ಬಹುನಿರೀಕ್ಷಿತ ಸಿನಿಮಾದಲ್ಲಿ ಬಾಲಿವುಡ್, ಟಾಲಿವುಡ್, ಕಾಲಿವುಡ್​ ಸ್ಟಾರ್​ಗಳು ಒಟ್ಟಾಗುವ ಲಕ್ಷಣಗಳು ಕಾಣುತ್ತಿವೆ.


Find Out More:

Related Articles:

Unable to Load More