ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮುಂಜಾನೆ 3ಕ್ಕೆ 'ಸೈರಾ' ಹವಾ ಶುರು

frame ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮುಂಜಾನೆ 3ಕ್ಕೆ 'ಸೈರಾ' ಹವಾ ಶುರು

somashekhar
ಆಂಧ್ರ ಪ್ರದೇಶದ ಪ್ರಜಾರಾಜ್ಯಂ ಪಕ್ಷದ ಸಂಸ್ಥಾಪಕರಾದ ಮೆಗಾಸ್ಟಾರ್ ಚಿರಂಜೀವಿ ನಟನೆಯ ಸೈರಾ ನರಸಿಂಹ ರೆಡ್ಡಿ ಚಿತ್ರವು ಅಕ್ಟೋಬರ್ 2 ರಂದು ತೆರೆಗೆ ಬರುತ್ತಿದೆ. ತೆಲುಗು, ತಮಿಳು, ಹಿಂದಿ, ಮಲಯಾಳಂ, ಕನ್ನಡ ಸೇರಿದಂತೆ ಪಂಚ ಭಾಷೆಯಲ್ಲಿ ಸೈರಾ ನರಸಿಂಹ ರೆಡ್ಡಿ ಸಿನಿಮಾ ಬಿಡುಗಡೆಯಾಗುತ್ತಿದೆ.

ಚಿತ್ರವು 2ನೇ ತಾರೀಖಿನಂದು ವಿಶ್ವಾದ್ಯಂತ ತೆರೆ ಕಾಣುತಲಿದ್ದು, ಭಾರೀ ನಿರೀಕ್ಷೆ ಹುಟ್ಟಿಸಿದೆ. ಏಕೆಂದರೆ ಚಿತ್ರದಲ್ಲಿ ಮೆಗಾ ಸ್ಟಾರ್ ಚಿರಂಜೀವಿ ಸೇರಿದಂತೆ ಕನ್ನಡದ ಅನುಷ್ಕಾ ಶೆಟ್ಟಿ, ಕಿಚ್ಚಾ ಸುದೀಪ್, ನಯನತಾರಾ, ಬಾಲಿವುಡ್ ಖ್ಯಾತ ನಟ ಅಮಿತಾಬ್ ಬಚ್ಚನ್ ಸೇರಿದಂತೆ ಬಹು ದೊಡ್ಡ ತಾರಾಗಣವಿದೆ. ಇದರ ಜೊತೆಗೆ ಚಿತ್ರದ ಕಥೆಯು ಬ್ರಿಟಿಷರ ವಿರುದ್ದ ಹೋರಾಡುವ ನೈಜ ಕಥೆಯಾಗಿದೆ. ಆದ್ದರಿಂದ ಅಭಿಮಾನಿಗಳು ಸೇರಿದಂತೆ ಸಾರ್ವಜನಿಕರಲ್ಲಿ ಸಿನಿಮಾದ ಮೇಲಿನ ನಿರೀಕ್ಷೆ ಗರಿಗೆದರಿದೆ. ಚಿತ್ರದ ಸ್ಯಾಟಲೈಟ್ ಹಕ್ಕುಗಳು ಭಾರೀ ಮೊತ್ತಕ್ಕೆ ಮಾರಟವಾಗಿತ್ತು. 

ವಿಶೇಷತೆ ಎಂದರೆ  ಈಗಾಗಲೇ ಎಲ್ಲ ಕಡೆ ಸೈರಾ ನರಸಿಂಹ ರೆಡ್ಡಿ ಚಿತ್ರದ ಟಿಕೆಟ್ ಬುಕ್ಕಿಂಗ್ ಓಪನ್ ಆಗಿದೆ. ಬೆಂಗಳೂರಿನಲ್ಲೂ ಸೈರಾ ಬುಕ್ಕಿಂಗ್ ಗೆ ಆರಂಭವಾಗಿದ್ದು, ಎರಡು ಚಿತ್ರಮಂದಿರದಲ್ಲಿ ಮುಂಜಾನೆ 3 ಗಂಟೆಗೆ ಮೊದಲ ಶೋ ಇದೆಯಂತೆ. ಯಾವ ಚಿತ್ರಮಂದಿರದಲ್ಲಿ ಮುಂಜಾನೆ ಶೋ ಇದೆ? ಮುಂದೆ ಓದಿ.

ಬೆಂಗಳೂರಿನ ಊರ್ವಶಿ ಚಿತ್ರಮಂದಿರದಲ್ಲಿ ಸೈರಾ:

ಲಾಲ್ ಬಾಗ್ ಬಳಿಯಿರುವ ಊರ್ವಶಿ ಚಿತ್ರಮಂದಿರದಲ್ಲಿ ಸೈರಾ ನರಸಿಂಹ ರೆಡ್ಡಿ ಸಿನಿಮಾ ರಿಲೀಸ್ ಆಗುತ್ತಿದೆ. ಸದ್ಯ ಎರಡು ಶೋಗಳಿಗೆ ಮಾತ್ರ ಬುಕ್ಕಿಂಗ್ ಓಪನ್ ಆಗಿದ್ದು ಮೊದಲ ಶೋ ಮುಂಜಾನೆ 3.05 ನಿಮಿಷಕ್ಕೆ ಇದೆ. ನಂತರ ಎರಡನೇ ಶೋ 7 ಗಂಟೆಗೆ ಇದೆ. ಟಿಕೆಟ್ ಬೆಲೆ 500, 400, 300 ರೂಪಾಯಿ ನಿಗದಿಯಾಗಿದೆ. ಎಂಜಿ ರಸ್ತೆಯಲ್ಲಿರುವ ಶಂಕರ್ ನಾಗ್‌ ಚಿತ್ರಮಂದಿರದಲ್ಲಿ ಮುಂಜಾನೆ 3.30ಕ್ಕೆ ಮೊದಲ ಶೋ ಇದೆ. ಮೊದಲ ದಿನ ಒಟ್ಟು ಐದು ಶೋಗಳು ಈ ಚಿತ್ರಮಂದಿರದಲ್ಲಿ ಪ್ರದರ್ಶನವಾಗಲಿದೆ. ಇಲ್ಲಿ ಟಿಕೆಟ್ ಬೆಲೆ ಗರಿಷ್ಠ 1200 ರೂಪಾಯಿವರೆಗೂ ಇದೆ.

Find Out More:

Related Articles:

Unable to Load More