ಟಾಕಿಂಗ್ ಸ್ಟಾರ್ ಚಿತ್ರಕ್ಕೆ ವಿದೇಶಗಳಲ್ಲೂ ಹೆಚ್ಚಿದ ಬೇಡಿಕೆ

frame ಟಾಕಿಂಗ್ ಸ್ಟಾರ್ ಚಿತ್ರಕ್ಕೆ ವಿದೇಶಗಳಲ್ಲೂ ಹೆಚ್ಚಿದ ಬೇಡಿಕೆ

somashekhar
ಟಾಕಿಂಗ್ ಸ್ಟಾರ್ ಎಂದೇ ಖ್ಯಾತಿ ಪಡೆದಿರುವ ಸೃಜನ್ ಲೋಕೇಶ್ ಮತ್ತು ಪಂಚಭಾಷಾ ನಟಿ ಹರಿಪ್ರಿಯಾ ಕಾಂಬಿನೇಷನ್ ನಲ್ಲಿ ಮೂಡಿಬಂದಿರುವ ಎಲ್ಲಿದ್ದೆ ಇಲ್ಲಿ ತನಕ ಸಿನಿಮಾದ ಮೂಲಕ ಈ ಜೋಡಿ ಮೊದಲಬಾರಿಗೆ ಬೆಳ್ಳಿತೆರೆಯನ್ನು ಹಂಚಿಕೊಳ್ಳುತ್ತಿದ್ದಾರೆ. 

ಆಗಸ್ಟ್ ನಲ್ಲಿ ವಿಶ್ವಾದ್ಯಂತ ರಿಲೀಸ್ ಆಗಿದ್ದ ಈ ಚಿತ್ರವು ದೇಶ ವಿದೇಶಗಳಲ್ಲಿಯೂ ಭರ್ಜರಿ ರೆಸ್ಪಾನ್ಸ್ ಪಡೆದಿತ್ತು.  ಕಾಂಗುರೂ ನಾಡು ಆಸ್ಟ್ರೇಲಿಯಾ, ವಿಶ್ವದ ದೊಡ್ಡಣ್ಣ ಅಮೆರಿಕ, ಕೆನಡಾ ಗಳಿಂದ ಸಿನಿಮಾದ ವಿತರಕರು ಕರೆ ಮಾಡಿ ಈ ಚಿತ್ರದ ಬಗ್ಗೆ ಒಳ್ಳೆಯ ಮಾತನ್ನು ಹೇಳಿದರು. ವಿದೇಶದಲ್ಲಿರುವ ನಮ್ಮ ಭಾರತೀಯರು ಈ ಚಿತ್ರಕ್ಕಾಗಿ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಅನಿಸಿಕೆಗಳನ್ನು ಶೇರ್ ಮಾಡಿದ್ದರು. ಸಿನಿಮಾ ರಿಲೀಸ್ಗು ಮುಂಚೆನೇ ಹಾಡು ಟ್ರೈಲರ್ ಗಳಿಂದ ಸಕ್ಕತ್ ಸೌಂಡ್ ಮಾಡಿತ್ತು ಎಲ್ಲಿದೆ ಇಲ್ಲಿ ತನಕ ಸಿನಿಮಾ.

ಲೋಕೇಶ್ ಪ್ರೊಡಕ್ಷನ್ ಮೂಲಕ ಪ್ರಸಾರವಾಗುತ್ತಿರುವ ಮಜಾ ಟಾಕೀಸ್ ಮತ್ತು ಮಜಾ ಭಾರತ ಇನ್ನೂ ಹತ್ತು ಹಲವು  ಕಾರ್ಯಕ್ರಮಗಳಿಂದ ಹೆಸರು ಸಂಪಾದಿಸಿದ ನಮ್ಮ ಸೃಜಾ ದೇಶ-ವಿದೇಶಗಳಲ್ಲಿ ತಮ್ಮದೇ ಆದ ಅಭಿಮಾನಿ ಬಳಗವನ್ನು ಬೆಳೆಸಿಕೊಂಡಿದ್ದಾರೆ, ಸಿನಿಮಾಗಳಿಂದ ಕೇವಲ ಸೋಲನ್ನೇ ಅನುಭವಿಸಿದ ಸೃಜನ್ ಲೋಕೇಶ್ ರವರು ಕಾಮಿಡಿ ಶೋಗಳಿಂದ ತಮ್ಮ ಹೆಸರನ್ನು ಶಿಖರಕ್ಕೆ ಹೆಚ್ಚಿಸಿ ಕೊಂಡಿದ್ದಾರೆ. ನಿರ್ದೇಶಕ ತೇಜಸ್ವಿ ರವರು ಈ ಚಿತ್ರಕ್ಕೆ ಬಂದ ರೆಸ್ಪಾನ್ಸ್ ನೋಡಿ ಬಹಳ ಖುಷಿ ಪಟ್ಟಿದ್ದಾರೆ. ಚಿತ್ರಕ್ಕೆ ಉತ್ತಮ ಕೊಡುಗೆ ಕೊಟ್ಟಿದ್ದ ಲೋಕೇಶ್ ಫ್ಯಾಮಿಲಿಯು ಈಗ  ಸಿನಿಮಾಕ್ಕಾಗಿ ಮೊದಲ ಬಾರಿಗೆ ನಿರ್ಮಾಣ ಮಾಡಿದ್ದಾರೆ.

ನೋಡುಗರ ನಿರೀಕ್ಷೆಗೆ ತಕ್ಕಂತೆ  ನಾನು ಮತ್ತು ನನ್ನ ತಂಡ ಚಿತ್ರವನ್ನು ತಯಾರು ಮಾಡಿದ್ದೇವೆ ಇದೊಂದು ಸಂಪೂರ್ಣವಾಗಿ ಕುಟುಂಬದಲ್ಲಿ ನಡೆಯುವ ಉತ್ತಮ ಮನರಂಜನೆಯ ಸಿನಿಮಾ. ಕಾಮಿಡಿ ಕಿಂಗ್ ಸೃಜಾ ಇರಬೇಕಾದರೆ ಕಾಮಿಡಿಗೆ ಏನಾದರೂ ಬರವೇ ಆಗಿ ಈ ಚಿತ್ರದಲ್ಲಿ ನಗುತ್ತಲೇ ಭಾವುಕ ಪ್ರಪಂಚಕ್ಕೆ ನಮ್ಮನ್ನು ಕರೆದುಕೊಂಡು ಹೋಗುವ ಸನ್ನಿವೇಶ ಈ ಚಿತ್ರದಲ್ಲಿ ಇದೆ. ಸ್ವಲ್ಪ ಮಸಾಲೆ ಮಿರ್ಚಿ ಸೇರಿಸಿದಂತೆ ಈ ಚಿತ್ರದಲ್ಲಿ ಡಬಲ್ ಮೀನಿಂಗ್ ಡೈಲಾಗ್ ಸಕ್ಕತ್ ಆಗಿದೆಯಂತೆ. ಚಿತ್ರಕ್ಕೆ ಸೆನ್ಸಾರ್ ಮಂಡಳಿಯ ಸದಸ್ಯರು ಸಹ ಮೆಚ್ಚಿಗೆ ನೀಡಿದ್ದರು.




Find Out More:

Related Articles:

Unable to Load More