ಸೈರಾ ನರಸಿಂಹಾ ರೆಡ್ಡಿ ಚಿತ್ರದ ಅಬ್ಬರ ಶುರು

frame ಸೈರಾ ನರಸಿಂಹಾ ರೆಡ್ಡಿ ಚಿತ್ರದ ಅಬ್ಬರ ಶುರು

somashekhar
ಟಾಲಿವುಡ್ ನ ಮೆಗಾ ಸ್ಟಾರ್ ಚಿರಂಜೀವಿ, ಬಾಲಿವುಡ್ ನ ಬಿಗ್ ಬಿ ಅಮಿತಾಬ್ ಬಚ್ಚನ್, ಕನ್ನಡಿಗ ಕಿಚ್ಚ ಸುದೀಪ್, ನಯನತಾರಾ ಅನುಷ್ಕಾ ಶೆಟ್ಟಿ ಹೀಗೆ ಬಹು ತಾರಾಗಣ ಹೊಂದಿರುವ ಸೈ ರಾ ನರಸಿಂಹಾ ರೆಡ್ಡಿ    ಚಿತ್ರವೂ ಪಂಚ ಭಾಷೆಯಲ್ಲಿ ರಿಲೀಸ್ ಆಗಲಿದೆ.  ಈ ಚಿತ್ರದ ಕನ್ನಡ ಅವತರಣಿಕೆಯ ಪ್ರಿ ರಿಲೀಸ್ ಕಾರ್ಯಕ್ರಮ ಭಾನುವಾರ ಮಹಾನಗರಿ ಬೆಂಗಳೂರಿನಲ್ಲಿ ನಡೆಯಿತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದು ಹ್ಯಾಟ್ರಿಕ್ ಹೀರೋ ಶಿವಣ್ಣ. ಈ ವೇಳೆ ಮಾತನಾಡಿದ ಸ್ಯಾಂಡಲ್​ವುಡ್ ಕಿಂಗ್ ಶಿವಣ್ಣ, 'ಸೈರಾ' ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಬೇಕೆಂದು ವಜ್ರೇಶ್ವರಿ ಕುಮಾರ್ ಕರೆ ಮಾಡಿ ಮತ್ತೇ ತಿಳಿಸಿದ್ದರು.

 ಅಲ್ಲದೆ ನಿಮ್ಮನ್ನು ಮೆಗಾ ಕುಡಿ ರಾಮ್ ಚರಣ್ ತೇಜಾ ಅವರು ಕರೆ ಮಾಡಿ ಆಮಂತ್ರಿಸಲಿದ್ದಾರೆ ಎಂದು ತಿಳಿಸಲಾಗಿತ್ತು. ಆದರೆ ನಾನೇ ಹೇಳಿದೆ ಅದೆಲ್ಲ ಬೇಡ ಎಂದು. ಏಕೆಂದರೆ 'ಸೈರಾ' ಪಂಕ್ಷನ್ ಅಂದರೆ ಅದು ನಮ್ಮ ಫ್ಯಾಮಿಲಿ ಫಂಕ್ಷನ್ ಇದ್ದಂತೆ. ನಮ್ಮ ಕುಟುಂಬದ ಯಾವುದೇ ಕಾರ್ಯಕ್ರಮವಿರಲಿ, ಅಲ್ಲಿ ಮೆಗಾ ಸ್ಟಾರ್ ಚಿರಂಜೀವಿ ಇರುತ್ತಿದ್ದರು. ಅಪ್ಪಾಜಿ ಕೂಡ ಚಿರಂಜೀವಿ ನನ್ನ ದೊಡ್ಡ ಮಗ ಅಂತ ಹೇಳುತ್ತಿದ್ದರು. ಅದಕ್ಕೆ ಮೆಗಾ ಸ್ಟಾರ್ ನನಗೆ ದೊಡ್ಡಣ. ಅವರ ಫ್ಯಾಮಿಲಿ ನಮ್ಮ ಕುಟುಂಬದ ಮೇಲಿರಿಸಿದ ಪ್ರೀತಿಗೆ ಕಾರ್ಯಕ್ರಮಕ್ಕೆ ಬರುವುದು ನಮ್ಮ ಕರ್ತವ್ಯ ಎಂದು ಶಿವಣ್ಣ ಹೇಳಿದರು.

ಇದೇ ವೇಳೆ ಮೆಗಾ ಫ್ಯಾಮಿಲಿ ನಟರನ್ನು ಕೊಂಡಾಡಿದ ಶಿವಣ್ಣ, ನಾನು ಪವನ್ ಕಲ್ಯಾಣ್ ಅವರ ದೊಡ್ಡ ಅಭಿಮಾನಿ. ಈಗ ಚಿರಂಜೀವಿ ಕುಟುಂಬದ ಎಲ್ಲರಿಗೂ ನಾನು ಅಭಿಮಾನಿಯಾಗಿದ್ದೇನೆ ಎಂದರು. ಇನ್ನು 'ಸೈರಾ' ಸಿನಿಮಾವನ್ನು ಫಸ್ಟ್​ ಡೇ ಫಸ್ಟ್ ಶೋ ವೀಕ್ಷಿಸುವುದಾಗಿ ತಿಳಿಸಿದ ಶಿವರಾಜ್ ಕುಮಾರ್, 'ಸೈರಾ' ಚಿತ್ರದಲ್ಲಿ ಕಾಣಿಸಿಕೊಂಡ ಕಾಣಿಸಿಕೊಂಡ ಕಿಚ್ಚ ಸುದೀಪ್, ಅಮಿತಾಭ್ ಬಚ್ಚನ್, ನಯನತಾರಾ, ತಮನ್ನಾ ಅವರನ್ನು ಹಾಡಿ ಹೊಗಳಿದರು. ಕನ್ನಡ ಸೇರಿದಂತೆ ಚಿತ್ರ ಪಂಚ ಭಾಷೆಯಲ್ಲಿ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. 


Find Out More:

Related Articles:

Unable to Load More