ಕಳೆದ 3 ವರ್ಷಗಳ ಹಿಂದೆ ಬಾನಲಿ ಬದಲಾಗೋ ಬಣ್ಣವೇ ಭಾವನೆ ಎಂಬ ಹಾಡು, ಡಬ್ಬಲ್ ಮೀನಿಂಗ್ ಸಖತ್ ಡೈಲಾಗ್ಸ್ ಗಳಿದ್ದ ಸಿಂಪಲ್ ಆಗಿ ಒಂದ್ ಲವ್ ಸ್ಟೋರಿ ಚಿತ್ರ ಸ್ಯಾಂಡಲ್ ವುಡ್ ಮಾತ್ರವಲ್ಲದೇ ಅಂತರ್ ರಾಜ್ಯ ಮಟ್ಟದಲ್ಲೂ ಹೆಸರು ಮಾಡಿತ್ತು. ಈ ಚಿತ್ರದಲ್ಲಿ ನಟಿಸಿ ಖ್ಯಾತಿ ಪಡೆದಿದ್ದ ಶ್ವೇತ ಶ್ರೀವಾತ್ಸವ್ ಅವರ ಬಗೆಗಿನ ಒಂದಿಷ್ಟು ಕುತೂಹಲಕಾರಿ ವಿಷಯಗಳು ಇಲ್ಲಿವೆ ನೋಡಿ. ಆ ಚಿತ್ರದ ನಂತರ ಶ್ವೇತ ಸಿನಿಮಾಗಳಿಂದ ಕೊಂಚ ದೂರ ಉಳಿದುಕೊಂಡಿದ್ದರು. ಈಗ ಅಚಾನಕ್ಕಾಗಿ ಬೆಳ್ಳಿತೆರೆಗೆ ಮರಳುವ ಪ್ಲಾನ್ ಹಾಕಿಕೊಂಡಿದ್ದಾರೆ. ಮೂರು ವರ್ಷದ ಗ್ಯಾಪ್ ಬಳಿಕ ಬಣ್ಣ ಹಚ್ಚುತ್ತಿದ್ದಾರೆ.
ಶ್ವೇತಾ ಇದೀಗ 25 ಕೆ.ಜಿ. ತೂಕ ಕಡಿಮೆಯಾಗಿದ್ದಾರಂತೆ. ಮೂರು ವರ್ಷಗಳ ಬಳಿಕ ಮತ್ತೆ ಸ್ಯಾಂಡಲ್ವುಡ್ಗೆ ಮರಳಿರುವ ಶ್ವೇತಾ ಶ್ರೀವಾತ್ಸವ್ ಹೀಗೆಂದಿದ್ದು, ಅವರು ಇದೀಗ ದೈಹಿಕವಾಗಿ ಹಗುರವಾಗಿದ್ದಾರೆ, ಮಾನಸಿಕವಾಗಿ ಮತ್ತಷ್ಟು ಸ್ಟ್ರಾಂಗ್ ಆಗಿದ್ದಾರಂತೆ. ಗರ್ಭಿಣಿಯಾಗಿದ್ದ ಅವರು ತಮ್ಮ ವೈಯಕ್ತಿಕ ಜೀವನದ ಬಗ್ಗೆ ಆದ್ಯತೆ ನೀಡಿದ್ದರು. ನಂತರ ಮುದ್ದಾದ ಹೆಣ್ಣು ಮಗುವಿಗೆ ಜನ್ಮವಿತ್ತ ಅವರು ಆಕೆಯ ಲಾಲನೆ-ಪಾಲನೆಯಲ್ಲೇ 2 ವರ್ಷಗಳನ್ನು ಕಳೆದರು. ಹೀಗೆ 3 ವರ್ಷ ಸ್ಯಾಂಡಲ್ವುಡ್ನಿಂದ ದೂರವಿದ್ದ ಅವರು ಇದೀಗ ‘ರಹದಾರಿ’ ಸಿನಿಮಾ ಮೂಲಕ ಚಂದನವನಕ್ಕೆ ರೀ ಎಂಟ್ರಿ ಕೊಟ್ಟಿದ್ದಾರೆ.
ವಿಶೇಷವೆಂದರೆ ಬಾಣಂತನ ಸಮಯದಲ್ಲಿ ನನ್ನ ತೂಕ 30 ಕೆ.ಜಿ. ಹೆಚ್ಚಾಗಿತ್ತು. ಅಚ್ಚರಿ ಎಂದರೆ ಯಾವುದೇ ಡಯೆಟ್-ವರ್ಕೌಟ್ ಮಾಡದೆ ಮಗಳ ಪಾಲನೆಯಲ್ಲೇ ನಾನು ಅಂದಾಜು 25 ಕೆ.ಜಿ. ತೂಕ ಕಳೆದುಕೊಂಡೆ’ ಎಂದು ತಾಯ್ತನದ ಸುಖ-ಸಂತೋಷವನ್ನು ಹಂಚಿಕೊಂಡರು ಶ್ವೇತಾ. ಮಗಳಿಗೆ ಎರಡು ವರ್ಷ ಆಗುತ್ತಿದ್ದಂತೆ ತಾನು ಸಿನಿಮಾಗಳನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂಬ ಭಾವ ಅವರನ್ನು ಆವರಿಸತೊಡಗಿತು. ಕಾಕತಾಳೀಯ ಎಂಬಂತೆ ಅದೇ ಸಂದರ್ಭದಲ್ಲಿ ಆಫರ್ಗಳು ಬರತೊಡಗಿದವು. ಕಳೆದ ಆರು ತಿಂಗಳಲ್ಲಿ 9 ಸಿನಿಮಾ ಅವಕಾಶಗಳು ಬಂದಿದ್ದವು. ಆ ಪೈಕಿ 3 ಸ್ಕ್ರಿಪ್ಟ್ಗಳನ್ನು ಶ್ವೇತಾ ತುಂಬ ಇಷ್ಟಪಟ್ಟಿದ್ದರಂತೆ. ಆದರೆ ಶೂಟಿಂಗ್ಗಾಗಿ 30 ದಿನ ಬೇರೆ ಊರಿನಲ್ಲಿ ಇರಬೇಕಾಗುತ್ತದೆ ಎಂಬ ಒಂದೇ ಕಾರಣಕ್ಕೆ ಅವರು ಸಹಿ ಮಾಡಿರಲಿಲ್ಲ.