ಸರಿಲೇರು ನೀಕೆವ್ವರು ಚಿತ್ರದ ಯಾವಾಗ ಬಿಡುಗಡೆ​ ಗೊತ್ತಾ!?

frame ಸರಿಲೇರು ನೀಕೆವ್ವರು ಚಿತ್ರದ ಯಾವಾಗ ಬಿಡುಗಡೆ​ ಗೊತ್ತಾ!?

somashekhar
ಟಾಲಿವುಡ್ ನ ಪ್ರಿನ್ಸ್ ಎಂದೇ ಖ್ಯಾತಿ ಪಡೆದಿರುವ ಮಹೇಶ್ ಬಾಬು ಸೌತ್ ಇಂಡಿಯನ್ ಸ್ಟಾರ್ ಎಂದೇ ಕರೆಯಲ್ಪಡುತ್ತಾರೆ. ಇದೀಗ ಇವರ ಹೊಸ ಚಿತ್ರ ಸರಿಲೇರು ನೀಕೆವ್ವರು ಚಿತ್ರವು ಬಿಡುಗಡೆಗೆ ಸಿದ್ಧವಾಗುತ್ತಿದ್ದು,  ಅಭಿಮಾನಿ ಗಳಿಗೆ ಚಿತ್ರ ತಂಡವು ಸಿಹಿ ಸುದ್ದಿ ನೀಡಿದೆ.  ಸರಿಲೇರು ನೀಕೆವ್ವರು ಚಿತ್ರದಲ್ಲಿ ಮೇಜರ್​ ಮಹೇಶ್ ಬಾಬು ಅಜಯ್​ ಕೃಷ್ಣ ಪಾತ್ರದಲ್ಲಿ ಮನರಂಜನೆ ಮಾಡಲಿದ್ದಾರೆ. ಇಲ್ಲಿಯವರೆಗೆ ಈ ಚಿತ್ರ ಸಂಕ್ರಾಂತಿಗೆ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿತ್ತು. ಆದರೆ ಈಗ ಈ ಚಿತ್ರದ ರಿಲೀಸ್​ ದಿನಾಂಕ ಬಹಿರಂಗವಾಗಿದೆ. 

ಭರತ್ ಅನೇ ನೇನು, 'ಮಹರ್ಷಿ' ಸಿನಿಮಾದ ನಂತರ ಪ್ರಿನ್ಸ್​ ಮಹೇಶ್​ ಬಾಬು ಅಭಿನಯದ ಬಹು ನಿರೀಕ್ಷಿತ ಸಿನಿಮಾ 'ಸರಿಲೇರು ನೀಕೆವ್ವರು'. ಅನಿಲ್​ ರಾವಿಪುಡಿ ನಿರ್ದೇಶನದಲ್ಲಿ ಮೂಡಿಬರಲಿರುವ ಈ ಸಿನಿಮಾದಲ್ಲಿ ಮಹೇಶ್​ ಮೊದಲ ಬಾರಿಗೆ ಸೇನಾಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದಲ್ಲಿ ಮೇಜರ್​ ಮಹೇಶ್ ಬಾಬು ಅಜಯ್​ ಕೃಷ್ಣ ಪಾತ್ರದಲ್ಲಿ ಮನರಂಜನೆ ಮಾಡಲಿದ್ದಾರೆ. ಇದೇ ಮೊದಲ ಬಾರಿಗೆ ರಶ್ಮಿಕಾ ಹಾಗೂ ಮಹೇಶ್​ ಬಾಬು ತೆರೆ ಹಂಚಿಕೊಳ್ಳುತ್ತಿದ್ದಾರೆ. ಅಲ್ಲದೆ ಬಹಳ ಸಮಯದ ನಂತರ ನಟಿ ವಿಜಯಶಾಂತಿ ಮತ್ತೆ ಬೆಳ್ಳಿತೆರೆ ಮೇಲೆ ಈ ಚಿತ್ರದ ಮೂಲಕ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ಐಟಂ ಹಾಡಿಗಾಗಿ ಪೂಜಾ ಹೆಗ್ಡೆ ಹಾಗೂ ತಮನ್ನಾರನ್ನ ಕರೆತರುವ ಅಲೋಚನೆಯಲ್ಲಿದ್ದಾರೆ ನಿರ್ದೇಶಕ ಅನಿಲ್​ ರಾವಿಪುಡಿ. ಒಟ್ಟಾರೆ ದೊಡ್ಡ ತಾರಾ ಬಳಗ, ಪೋಸ್ಟರ್​, ಟೀಸರ್​ನಿಂದಲೇ ಪ್ರೇಕ್ಷಕರಲ್ಲಿ ಕುತೂಹಲ ಹೆಚ್ಚಿಸುತ್ತಿದೆ ಈ ಚಿತ್ರ ಅತೀ ಶೀಘ್ರವಾಗಿ ಬಿಡುಗಡೆ ಆಗಲಿದೆಯಂತೆ. 

ಮಹೇಶ್ ಬಾಬು ಅವರ ಇತ್ತೀಚಿನ ಚಿತ್ರಗಳಲ್ಲಿ ಕೃಷಿಗೆ ಹಾಗೂ ರೈತರ ಕಷ್ಟ ಕಾರ್ಪಣ್ಯಗಳಿಗೆ ಹೆಚ್ಚು ಒತ್ತು ನೀಡಲಾಗಿತ್ತು. ಇದೀಗ ಸರಿಲೇರು ನೀಕೆವ್ವರು ಚಿತ್ರದಲ್ಲಿ ಸೇನಾಧಿಕಾರಿ ಯಾಗಿ ಕಾಣಿಸಿಕೊಳ್ಳಲಿದ್ದಾರೆ. ಅದರಲ್ಲೂ ಸಹ ವಿಶಿಷ್ಟವಾಗಿ. ಚಿತ್ರದ ಕಥೆಯು ವಿಭಿನ್ನ ವಾಗಿದ್ದು, ಪ್ರಿನ್ಸ್ ಮಹೇಶ್ ಅವರು ತುಂಬಾ ಸ್ಟೈಲಿಶ್ ಸಹನೆಯ ವ್ಯಕ್ತಿಯಾಗಿದ್ದಾರೆ. ಚಿತ್ರದ ಮೇಲೆ ಅಭಿಮಾನಿ ಗಳ ನಿರೀಕ್ಷೆ ಹೆಚ್ಚಾಗಿದ್ದು, ಚಿತ್ರಕ್ಕಾಗಿ ಕಾಯುತ್ತಿದ್ದಾರೆ.


Find Out More:

Related Articles:

Unable to Load More