ಝೀ ವಾಹಿನಿಯ ಅವಾರ್ಡ್ ಬೇಡ ಎಂದ ನಟ ಯಾರು?

frame ಝೀ ವಾಹಿನಿಯ ಅವಾರ್ಡ್ ಬೇಡ ಎಂದ ನಟ ಯಾರು?

somashekhar
ಝೀ ವಾಹಿನಿ, ಕನ್ನಡದ ಕನ್ನಡಿಗರ ನೆಚ್ಚಿನ ಚಾನೆಲ್. ಸೀರಿಯಲ್, ಸಿನಿಮಾ ಮತ್ತು ಹಲವಾರು ಉಪಯುಕ್ತ ಶೋಗಳನ್ನು ನಡೆಸಿಕೊಡುವ ಈ ವಾಹಿನಿಯು ಪ್ರತಿವರ್ಷವೂ ಝೀ ಅವಾರ್ಡ್ ಎಂದೇ ಪ್ರಶಸ್ತಿಗಳನ್ನು ನೀಡುತ್ತದೆ. ಆದರೆ ಕನ್ನಡದ ಈ ಹಾಸ್ಯ ಅವಾರ್ಡ್ ಅನ್ನೇ ಬೇಡವೆಂದಿದ್ದಾರೆ. ಅದನ್ನು ಇನ್ನೊಬ್ಬರಿಗೆ ಕೊಟ್ಟಿದ್ದಾರೆ.  ಅವರು ಯಾರು ಎಂದು ನಾವು ಹೇಳುತ್ತೇವೆ ನೋಡಿ. 

ಇತ್ತೀಚೆಗೆ ಝೀ ವೇದಿಕೆಯಲ್ಲಿ ಮನಮುಟ್ಟುವ ಘಟನೆಯೊಂದು ನಡೆದಿದೆ. ಹೌದು ಪ್ರೈಡ್ ಆಫ್ ಜೀ ಕನ್ನಡ ಅವಾರ್ಡ್ ಗೌರವಕ್ಕೆ ನವರಸ ನಾಯಕ ಜಗ್ಗೇಶ್ ಅವರು ಆಯ್ಕೆಯಾಗಿದ್ದರು. ಅವರನ್ನು ವೇದಿಕೆ ಮೇಲೆ ಕರೆಯಲಾಯಿತು. ವೇದಿಕೆ ಮೇಲಿದ್ದ ರಮೇಶ್ ಅರವಿಂದ್ ಅವರು ಜಗ್ಗೇಶ್ ಅವರಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಿದರು. ಆದರೆ ಅದೇಕೋ ಆ ಪ್ರಶಸ್ತಿಯನ್ನು ತಮ್ಮ ಬಳಿ ಇರಿಸಿಕೊಳ್ಳಲು ಜಗ್ಗೇಶ್ ಅವರ ಮನಸ್ಸು ಒಪ್ಪಲಿಲ್ಲ ಎಂದಿದ್ದಾರೆ. ನೇರವಾಗಿ ಜಗ್ಗೇಶ್ ಮೈಕ್ ಪಡೆದು ಕನ್ನಡ ಸಿನಿಮಾರಂಗದ ಲೆಜೆಂಡ್ ನರಸಿಂಹರಾಜು ಅವರ ಮಡದಿ ಅವರನ್ನು ವೇದಿಕೆಗೆ ಕರೆದರು.

ಕನ್ನಡ ಇತಿಹಾಸದಲ್ಲಿ ಹಾಸ್ಯ ಕಲಾವಿದನಾಗಿ ನರಸಿಂಹರಾಜು ಅವರ ಹೆಜ್ಜೆ ಅಜರಾಮರ ಅವರಿಗೆ ನಾವುಗಳು ಎಷ್ಟು ಚಿರಋಣಿಯಾಗಿದ್ದರೂ ಸಾಲದು. ಈ ಪ್ರಶಸ್ತಿ ಇವರ ಕೈನಲ್ಲಿ ಇರಬೇಕು ಎಂದು ಗೌರವ ಪೂರ್ವಕವಾಗಿ ಅದನ್ನು ನರಸಿಂಹರಾಜು ಅವರ ಮಡದಿಗೆ ನೀಡಿ ಗೌರವಿಸಿದ್ದಾರೆ. ಅಷ್ಟೇ ಅಲ್ಲದೆ ನರಸಿಂಹರಾಜು ಅವರ ಹೆಸರು ಅಜರಾಮರವಾಗಿ ಇರಬೇಕೆಂದು ನಾಟಕ ಕಂಪನಿಯೊಂದನ್ನು ಸರ್ಕಾರ ತೆರೆಯಬೇಕೆಂಬುದು ಕುಟುಂಬದ ಬಹುದಿನದ ಬೇಡಿಕೆಯಾಗಿತ್ತು. ಆದರೆ ಅದು ಕಾರ್ಯರೂಪಕ್ಕೆ ಬಂದಿರಲಿಲ್ಲ.

ಇದೇ ವೇದಿಕೆಯಲ್ಲಿ ಜಗ್ಗೇಶ್ ಅವರು ನರಸಿಂಹರಾಜು ಅವರ ಕುಟುಂಬಕ್ಕೆ ನಾನಿದ್ದೇನೆ, ಸರ್ಕಾರದ ಜೊತೆ ನಾನು ಮಾತನಾಡಿ ನರಸಿಂಹರಾಜು ಅವರ ಹೆಸರು ಶಾಶ್ವತವಾಗಿ ಉಳಿಯುವಂತೆ ಮಾಡುತ್ತೇನೆ ಎಂದು ಮಾತು ಕೊಟ್ಟಿದ್ದಾರೆ. 
ನಮಗೆ ನಿಜಕ್ಕೂ ಯಾರೂ ಕೂಡ ಈ ರೀತಿ ನಮಗೆ ಧೈರ್ಯ ತುಂಬಿರಲಿಲ್ಲ ಎಂದು ವೇದಿಕೆ ಮೇಲೆ ಕಣ್ಣಂಚಲ್ಲಿ ನೀರು ತುಂಬಿಕೊಂಡು ನರಸಿಂಹ ರಾಜು ಅವರ ಪತ್ನಿ ತಿಳಿಸಿದರು.




Find Out More:

Related Articles:

Unable to Load More