ರೊಮ್ಯಾಂಟಿಕ್ ಚಿತ್ರದಲ್ಲಿ ರಮ್ಯಾ ಕೃಷ್ಣ ಹೇಗೆ ಕಾಣಲಿದ್ದಾರೆ ಗೊತ್ತಾ!?

frame ರೊಮ್ಯಾಂಟಿಕ್ ಚಿತ್ರದಲ್ಲಿ ರಮ್ಯಾ ಕೃಷ್ಣ ಹೇಗೆ ಕಾಣಲಿದ್ದಾರೆ ಗೊತ್ತಾ!?

somashekhar
ನಟಿ ರಮ್ಯಾ ಕೃಷ್ಣ, ತನ್ನ ಹೆಸರಲ್ಲೇ ಗತ್ತನ್ನು ಹೊಂದಿರುವ ನಟಿ. ಬಾಹುಬಲಿ ಚಿತ್ರದಲ್ಲಿ ಖಳನಟ ಬಲ್ಲಾಳ ದೇವನಿಗೆ ತಾಯಿಯಾಗಿ ನಟಿಸುವ ಮೂಲಕ ಗಾಂಭೀರ್ಯತೆ ಪ್ರದರ್ಶಿಸಿದ್ದರು. ತೆಲುಗಿನ ಅಕ್ಕಿನೇನಿ ನಾಗಾರ್ಜುನ ಜೊತೆಗೆ ಸೋಗ್ಗಾಡೆ ಚಿನ್ನಿ ನಾಯಿನ ಚಿತ್ರದಲ್ಲಿ ತಾಯಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರದಲ್ಲಿ ಸಖತ್ ರೋಮ್ಯಾಂಟಿಕ್ ಆಗಿ ಕಾಣಿಸಿ ಕೊಂಡಿದ್ದ ರಮ್ಯ ಕೃಷ್ಣ ಗೆ  ಸಿನಿಮಾದ ಆಫರ್ ಗಳು ಒಂದರ ಮೇಲೊಂದರಂತೆ ಬಂದವು. ಸಿಕ್ಕ ಅವಕಾಶಗಳನ್ನು ಸದುಪಯೋಗ ಮಾಡಿಕೊಳ್ಳುವುದರಲ್ಲಿ ರಮ್ಯ ಕೃಷ್ಣ ಮೊದಲ ಸಾಲಿನಲ್ಲಿ ನಿಲ್ಲುತ್ತಾರೆ.

ಟಾಲಿವುಡ್ ನಲ್ಲಿ ಇತ್ತೀಚಿಗಷ್ಟೆ 'ರೊಮ್ಯಾಂಟಿಕ್' ಸಿನಿಮಾದಲ್ಲಿ ಸೆಟ್ಟೆರಿತ್ತು. ಈ ಸಿನಿಮಾ ತಂಡಕ್ಕೆ ಈಗ ರಮ್ಯಾ ಕೃಷ್ಣ ಸೇರಿಕೊಂಡಿದ್ದಾರೆ. ವಿಶ್ವ ವಿಖ್ಯಾತ ಬಾಹುಬಲಿ ಚಿತ್ರದ ಬಳಿಕ 'ಸೂಪರ್ ಡಿಲಕ್ಸ್', 'ದೇವ್' ಸಿನಿಮಾಗಳಲ್ಲಿ ನಟಿಸಿದರು. ಇದೀಗ ಮತ್ತೊಂದು ಹೊಸ ಸಿನಿಮಾವನ್ನು ರಮ್ಯಾ ಕೃಷ್ಣ ಒಪ್ಪಿಕೊಂಡಿದ್ದಾರೆ. 'ರೊಮ್ಯಾಂಟಿಕ್' ಸಿನಿಮಾಗೆ ರಮ್ಯಾ ಕೃಷ್ಣ ಸಹಿ ಹಾಕಿದ್ದಾರೆ. 'ರೊಮ್ಯಾಂಟಿಕ್' ನಿರ್ದೇಶಕ ಪೂರಿ ಜಗನ್ನಾಥ್ ಪುತ್ರ ಆಕಾಶ್ ಪೂರಿ ನಟನೆಯ ಸಿನಿಮಾ. ಇತ್ತೀಚಿಗಷ್ಟೆ ಸಿನಿಮಾದ ಫಸ್ಟ್ ಲುಕ್ ಬಿಡುಗಡೆಯಾಗಿ ಸೌತ್ ಇಂಡಿಯಾ ತುಂಬ ಸುದ್ದಿಯಾಗಿತ್ತು. ಸಿನಿಮಾದ ಹೆಸರಿಗೆ ತಕ್ಕ ಹಾಗೆ 'ರೊಮ್ಯಾಂಟಿಕ್' ಆಗಿ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಲಾಗಿತ್ತು. 


ರಮ್ಯಾ ಕೃಷ್ಣ ಈ ಸಿನಿಮಾದಲ್ಲಿ ಬಹು ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂದು ತಿಳಿಸಿರುವ ಚಿತ್ರತಂಡ ಆ ಪಾತ್ರದ ವಿವರವನ್ನು ಬಹಿರಂಗ ಪಡಿಸಿಲ್ಲ. ಚಿತ್ರದಲ್ಲಿ ಕೆತಿಕಾ ಶರ್ಮಾ ಸಿನಿಮಾದ ನಾಯಕಿಯಾಗಿದ್ದಾರೆ. ಪೋಸ್ಟರ್ ನಲ್ಲಿ ಹಾಟ್ ಆಗಿ ಈಕೆ ಕಾಣಿಸಿಕೊಂಡಿದ್ದಾರೆ. ಉಳಿದಂತೆ, ಚಿತ್ರವನ್ನು ಅನಿಲ್ ಪಡುರಿ ನಿರ್ದೇಶನ ಮಾಡುತ್ತಿದ್ದಾರೆ. ಮಗನ ಸಿನಿಮಾಗೆ ಪೂರಿ ಜಗನ್ನಾಥ್ ಅವರೇ ಹಣ ಹಾಕುತ್ತಿದ್ದು, ಚಿತ್ರವನ್ನು ಅದ್ಧೂರಿಯಾಗಿ ತೆರೆಮೇಲೆ ಮೂಡಿಬರುವ ಹಾಗೆ ಮಾಡಲಿದ್ದಾರೆ ಯಂತೆ. 
ನಿರ್ದೇಶಕ ತಂದೆಯೇ ಆಗಿದ್ದರಿಂದ ಮಗನ ಚಿತ್ರವನ್ನು ಭಾರೀ ಯಶಸ್ಸು ಮೂಡುವ ಹಾಗೆ ಮಾಡಲಿದ್ದಾರೆ ಯಂತೆ. ಚಿತ್ರದಲ್ಲಿ ರಮ್ಯ ಕೃಷ್ಣ ಸಹ ಮಿಂಚಲಿದ್ದಾರೆ ಎಂದು ತಿಳಿದು ಬಂದಿದೆ.


Find Out More:

Related Articles:

Unable to Load More