ಸೌತ್ ಇಂಡಿಯನ್ ಸೂಪರ್ ಸ್ಟಾರ್ ಇವರೇ ನೋಡಿ ಎಂದ ಸಲ್ಮಾನ್

frame ಸೌತ್ ಇಂಡಿಯನ್ ಸೂಪರ್ ಸ್ಟಾರ್ ಇವರೇ ನೋಡಿ ಎಂದ ಸಲ್ಮಾನ್

somashekhar
    
ಭಜಿರಂಗ್ ಭಾಯ್ ಜಾನ್ ಖ್ಯಾತಿಯ ಸಲ್ಮಾನ್ ಖಾನ್ ಅವರು ಇತ್ತೀಚೆಗೆ ಸೌಂತ್ ಸಿನಿ ಪ್ರಪಂಚದ ಕನ್ನಡದ ಇವರೇ ಸ್ಟಾರ್ ನಟ ಎಂದು ಮಾತನಾಡಿರುವುದು ಪ್ರಸ್ತುತ ಭಾರೀ ವೈರಲ್ ಆಗಿದೆ. ಗಾಂಧೀನಗರದಿಂದ ಬಾಲಿವುಡ್​ವರಗೂ ದಬಾಂಗ್​-3 ಟ್ರೈಲರ್​​ ಬಗ್ಗೆ ಚರ್ಚೆ ಜೋರಾಗಿದೆ. ಚುಲ್​​ಬುಲ್​ ಪಾಂಡೆ ವರ್ಸಸ್​​​ ಬಲ್ಲಿ ಸಿಂಗ್ ಫೈಟ್​​ ಕನ್ನಡದಲ್ಲೇ ಕಿಚ್ಚು ಹಚ್ಚೋ ಸುಳಿವು ಸಿಕ್ಕಿದ್ದು, ಟ್ರೈಲರ್​​​ನಲ್ಲಿ ಕಿಚ್ಚ ಧೂಳೆಬ್ಬಿಸಿದ್ದಾರೆ. ಟ್ರೈಲರ್ ಲಾಂಚ್​ ವೇದಿಕೆಯಲ್ಲಿ ಕಿಚ್ಚ ನನ್ನ ಸಹೋದರ ಅಂದ ಸಲ್ಲುಮಿಯಾ, ಕನ್ನಡದ ಹೆಮ್ಮೆ ಕೆಜಿಎಫ್​​ ಚಿತ್ರಕ್ಕೆ ಸಲಾಂ ಎಂದಿದ್ದಾರೆ. 

ಸಲ್ಮಾನ್​ ಖಾನ್​​, ಕಿಚ್ಚ ಸುದೀಪ್​ ನಟನೆಯ ಬಹುನಿರೀಕ್ಷಿತ ದಬಾಂಗ್​-3 ಟ್ರೈಲರ್​ ರಿಲೀಸ್​ ಆಗಿ ಭರ್ಜರಿ ಸೌಂಡ್ ಮಾಡ್ತಿದೆ. ಪ್ರಭುದೇವಾ ನಿರ್ದೇಶನದ ಸೂಪರ್​ ಹಿಟ್ ದಬಾಂಗ್​ ಸೀರಿಸ್​​ನ ಲೇಟೆಸ್ಟ್ ಸಿನಿಮಾ ಇದು. ಚಿತ್ರದಲ್ಲಿ ಯಂಗ್​ ಚುಲ್​ಬುಲ್​ ಪಾಂಡೆ ಮತ್ತು ಪ್ರಸೆಂಟ್​​ ಸ್ಟೋರಿಯನ್ನ ಹೇಳಲಾಗ್ತಿದೆ. ಪೊಲೀಸ್​ ಆಫೀಸರ್​​ ಚುಲ್​ಬುಲ್​ ಪಾಂಡೆಗೆ ಈ ಸಲ ಮಾಫಿಯಾ ಡಾನ್​ ಬಲ್ಲಿ ಸಿಂಗ್ ಅವತಾರದಲ್ಲಿ ಬಾದ್​ಶಾ ಕಿಚ್ಚ ಸವಾಲ್​ ಹಾಕಿದ್ದಾರೆ. ಚಿತ್ರ ಕನ್ನಡಕ್ಕೂ ಡಬ್​ ಆಗಿದ್ದು, ಟ್ರೈಲರ್​ಗೆ ಒಳ್ಳೆ ರೆಸ್ಪಾನ್ಸ್​ ಸಿಕ್ತಿದೆ.

ಸ್ವತ: ಸಲ್ಮಾನ್​ ಖಾನ್ ತಮ್ಮ ಪಾತ್ರಕ್ಕೆ ತಾವೇ ಕನ್ನಡದಲ್ಲಿ ಡಬ್​ ಮಾಡಿದ್ದಾರೆ. ಅಷ್ಟೇ ಅಲ್ಲ, ಕನ್ನಡದಲ್ಲೇ ಟ್ವೀಟ್​ ಮಾಡಿ ಟ್ರೈಲರ್​ ಶೇರ್​ ಮಾಡಿದ್ದಾರೆ. ದಬಾಂಗ್​-3 ಸಿನಿಮಾ ತೆಲುಗು, ತಮಿಳು, ಕನ್ನಡ ಭಾಷೆಗೆ ಡಬ್​ ಆಗಿದ್ದು, ಕನ್ನಡಕ್ಕೆ ಮಾತ್ರ ಸಲ್ಮಾನ್​ ಖಾನ್ ಡಬ್​ ಮಾಡಿದ್ದಾರೆ. ಇದೇ ಕಾರಣಕ್ಕೆ ಸಲ್ಲುಮಿಯಾ ಕನ್ನಡ ಪ್ರೀತಿಗೆ ​ಎಲ್ಲೆಡೆಯಿಂದ ಮೆಚ್ಚುಗೆ ಸಿಕ್ತಿದೆ. ಸಲ್ಲು ಅದ್ಭುತವಾಗಿ ಕನ್ನಡ ಮಾತನಾಡದೇ ಇದ್ರೂ, ಅವರ ಪ್ರಯತ್ನಕ್ಕೆ ಬಹುಪರಾಕ್​ ಹೇಳ್ತಿದ್ದಾರೆ.
ಮುಂಬೈನಲ್ಲಿ ನಡೆದ ದಬಾಂಗ್​-3ಟ್ರೈಲರ್​ ಲಾಂಚ್​ ವೇದಿಕೆಯಲ್ಲಿ ಸಲ್ಮಾನ್​ ಖಾನ್ ಡಬ್ಬಿಂಗ್​ ಸಿನಿಮಾಗಳ ಬಗ್ಗೆ ಮಾತನಾಡಿದ್ರು. ಸೌತ್​ ಸಿನಿಮಾಗಳು ಹಿಂದಿ ಡಬ್​ ಆಗಿಸಖತ್​ ಸೌಂಡ್ ಮಾಡ್ತಿವೆ. ಕನ್ನಡದ ಕೆಜಿಎಫ್​, ತೆಲುಗಿನ ಬಾಹುಬಲಿ ಸಿನಿಮಾಗಳನ್ನ ನೆನಪಿಸಿಕೊಂಡ್ರು. ಈಗ ನಾವು ದಬಾಂಗ್​-3 ಮೂಲಕಅದೇ ಪ್ರಯತ್ನಕ್ಕೆ ಕೈ ಹಾಕಿದ್ದೇವೆ ಎಂದಿದ್ದಾರೆ.


Find Out More:

Related Articles:

Unable to Load More