ಡಿಂಪಲ್ ಕ್ವೀನ್ ರಚಿತಾ ರಾಮ್ ಅಂದ್ರೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಐ ಲವ್ ಯುವ್, ಭರ್ಜರಿ, ಬುಲ್ ಬುಲ್, ಅಯೋಗ್ಯ, ರನ್ನ ಈಗೆ ಸಾಲು ಸಾಲು ಚಿತ್ರಗಳಲ್ಲಿ ನಟಿಸಿ ತಮ್ಮದೇಯಾದ ಅಭಿಮಾನಿ ಬಳಗವನ್ನೇ ಹೊಂದಿದ್ದಾರೆ. ಇದೀಗ ಇವರ ಲಿಸ್ಟ್ ಗೆ ಮತ್ತೊಂದು ಚಿತ್ರವು ಸೇರಿಕೊಂಡಿದೆ. ಸೆಕೆಂಡ್ ಇನ್ನಿಂಗ್ಸ್ನಲ್ಲೂ ಸಿಕ್ಕಾಪಟ್ಟೆಫಾಮ್ರ್ನಲ್ಲಿದ್ದಾರೆ. ಈಗ ‘ಟಗರು’ ಚಿಟ್ಟೆಖ್ಯಾತಿಯ ನಟ ವಸಿಷ್ಠ ಸಿಂಹ ಅಭಿನಯದ ಹೊಸ ಸಿನಿಮಾಕ್ಕೆ ರಚಿತಾ ನಾಯಕಿ ಆಗಿದ್ದಾರೆ. ಆ ಚಿತ್ರದ ಹೆಸರು ‘ಪಂಥ’. ಗೀತ ಸಾಹಿತಿ ವಿ. ನಾಗೇಂದ್ರ ಪ್ರಸಾದ್ ನಿರ್ದೇಶನ ದ ಸಿನಿಮಾ ಇದು.
‘ಕತೆಯಲ್ಲಿ ನಾಯಕಿಯದ್ದು ವಿಶಿಷ್ಟ ವಾದ ಪಾತ್ರ. ಸದ್ಯಕ್ಕೆ ಆ ಪಾತ್ರದ ವ್ಯಕ್ತಿತ್ವದ ಕುರಿತು ನಾನೇನು ಹೇಳೋ ದಿಲ್ಲ. ಆದರೆ ತುಂಬಾ ವಿಭಿನ್ನ ಮತ್ತು ವಿಶಿಷ್ಟಎನಿಸುವ ಪಾತ್ರವಂತೂ ಹೌದು. ಆ ಪಾತ್ರಕ್ಕೆ ಸೂಕ್ತವಾದ ನಾಯಕಿಯ ಹುಡುಕಾಟದಲ್ಲಿದ್ದಾಗ ನನಗೆ ಸೂಕ್ತ ಎನಿಸಿದ್ದು ರಚಿತಾ ರಾಮ್’ ಎನ್ನುತ್ತಾರೆ ನಿರ್ದೇಶಕ ನಾಗೇಂದ್ರ ಪ್ರಸಾದ್. ಅಧಿಕ ಆಳ, ಭಾವ, ವೇದನೆ ತುಂಬಿಕೊಂಡ ಒಬ್ಬ ವಿವಾಹಿತ ಯುವಕ. ಆತನ ಭಾವನೆ, ವೇದನೆ ಅವನದಷ್ಟೇ ಆಗದೆ, ಇಡೀ ಯುವ ಸಮೂಹಕ್ಕೂ ಕನೆಕ್ಟ್ ಆಗುವಂತಹ ಪಾತ್ರ. ಸಿನಿಮಾ ಕೂಡ ಹಾಗೆಯೇ. ಉದ್ವೇಗದ ಪಂಥಾಹ್ವಾನ ಅದು. ಆ ಮೂಲಕ ಕಲಾವಿದನಾಗಿ ನನಗೂ ಒಂದು ಬೆಲೆ ಸಿಗುವ ನಿರೀಕ್ಷೆಯಿದೆನಿರೀಕ್ಷೆಯಿದೆ ಎಂದು ನಟ ವಸಿಷ್ಠ ಸಿಂಹ ತಿಳಿಸಿದ್ದಾರೆ.
‘ಪಂಥ’ ಎನ್ನುವ ಟೈಟಲ್ಗೆ ‘ಡಿಬೇಟ್ ಆನ್ ದಿ ಬೆಟ್’ ಎನ್ನುವ ಸಬ್ ಟೈಟಲ್ ಚಿತ್ರಕ್ಕಿದೆ. ನವೆಂಬರ್ ಮೊದಲ ವಾರ ಚಿತ್ರ ಸೆಟ್ಟೇರುತ್ತಿದೆ. ಎನ್. ಶ್ರೀಧರ್ ಹಾಗೂ ಎಲ್. ಅಶ್ವತ್್ಥ ನಾರಾಯಣ್ ಈ ಸಿನಿಮಾಕ್ಕೆ ಬಂಡವಾಳ ಹೂಡುತ್ತಿದ್ದಾರೆನ್ನುವ ಮಾಹಿತಿ ಲಭ್ಯವಾಗಿದೆ. ಪಂಥ ಎಂಬ ಪದವು ಏನಿರಬಹುದು ಈ ಟೈಟಲ್ ನ ಅರ್ಥ ಎಂಬ ಕುತೂಹಲ ಸಾಮಾನ್ಯವಾಗಿ ಪ್ರೇಕ್ಷಕರಿಗೆ ಇದೆ. ಪಂಥ ಚಿತ್ರವನ್ನು ತೆರೆ ಮೇಲೆ ನೋಡಿದ ಮೇಲೆಯ ಅರ್ಥೈಸಿಕೊಳ್ಳಬೇಕಾಗಿದೆ.