ಕನ್ನಡ ರಾಜ್ಯೋತ್ಸವ ಕುರಿತು ಡಿಫರೆಂಟ್ ಆಗಿ ವಿಶ್ ಮಾಡಿದ ಅಣ್ತಮ್ಮಾ, ಏನದು ಗೊತ್ತಾ?

somashekhar
ಬೆಂಗಳೂರು: ರಾಜ್ಯಾದ್ಯಂತ ಶುಕ್ರವಾರ ಬೆಳ್ಳಗ್ಗೆಯಿಂದ ರಾತ್ರಿಯ ವರೆಗೂ ಕನ್ನಡಿಗರು ಡಿಫರೆಂಟ್ ಆಗಿ ಕನ್ನಡ ರಾಜ್ಯೋತ್ಸವ ಕುರಿತು ಶುಭಾಶಯಗಳ ಹೂ ಮಳೆಯನ್ನೇ ಸೇರಿಸಿದ್ದಾರೆ. ಅದೇ ರೀತಿಯಲ್ಲಿ ಕೆಜಿಎಫ್ ಖ್ಯಾತಿಯ ಅಣ್ಣಮ್ಮ ಸಹ ಡಿಫರೆಂಟ್ ಡೈಲಾಗ್ ವೊಂದನ್ನು ಸಾಮಾಜಿಕ ಜಾಲತಾಣವಾದ ಫೇಸ್ ಬುಕ್ ಮುಖಾಂತರ ಶುಭಾಶಯ ಕೋರಿದ್ದಾರೆ. 

ರಾಕಿಂಗ್ ಸ್ಟಾರ್ ಯಶ್ ತಮ್ಮ ಫೇಸ್‍ಬುಕ್ ಖಾತೆಯಲ್ಲಿ “ಅಣ್ತಮ್ಮಾ.. ಎದೆ ಉಸಿರಂಗೆ ಇರೋ ಕನ್ನಡ ಭಾಷೆ ಕಂಪು ದೇಶ ಪೂರ ಹರಡಬೇಕು. ಗಡಿಗಳನ್ನ ಮೀರಿ ಗರಿಗೆದರಬೇಕು. ಸಾಗರದಾಚೆಗೂ ಚಾಚಿ ನಿಲ್ಲಬೇಕು. ಕನ್ನಡ ಅಂದರೆ ಮೈ ರೋಮ ಎದ್ದೇಳಬೇಕು. ಕನ್ನಡಿಗರು ಅಂದರೆ ಎದೆ ಉಬ್ಬಿಸಿ ನಿಲ್ಲಬೇಕು. ಕನ್ನಡ ಉಳಿಸಿ ಬೆಳಸಿ ಅಂತ ಬೇಡಿಕೊಳ್ಳುವ ಕಾಲ ಹೋಯಿತು. ಈಗೇನಿದ್ದರೂ ಕನ್ನಡ ಕಲಿತು, ಕಲಿಸಿ, ಬಳಸಿ. ಸರ್ವರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು. ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ” ಎಂದು ಶುಭ ಕೋರಿದ್ದಾರೆ. 

ರಾಕಿಂಗ್ ಸ್ಟಾರ್ ನ ಈ ಕನ್ನಡದ ಪ್ರೀತಿಗೆ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. ಅಣ್ತಮ್ಮಾ ಎಂದು ಖದರ್ ಆಗಿ ಅಪ್ಪಟ ಕನ್ನಡದಲ್ಲಿ ಪ್ರೀತಿಯ ಮನದಿಂದ ಶುಭಾಶಯ ಪ್ರಾರಂಭಿಸುವ ಮೂಲಕ ಅಣ್ತಮ್ಮಂದಿಗೆಲ್ಲಾ ತುಂಬಾನೇ ಇಷ್ಟ ವಾಗಿದ್ದು,  ಒಂದು ಗಂಟೆಯಲ್ಲಿ 14 ಸಾವಿರಕ್ಕೂ ಅಧಿಕ ಜನರು ಲೈಕ್ ಮಾಡಿದ್ದು, 2,800ಕ್ಕೂ ಹೆಚ್ಚು ಅಭಿಮಾನಿಗಳು ಕಮೆಂಟ್ ಮಾಡಿದ್ದಾರೆ. ಈ ಮೂಲಕ ನೆಚ್ಚಿನ ನಾಯಕನಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯ ಕೋರುತ್ತಿದ್ದಾರೆ.

ಯಶ್ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಯಾಕೆಂದರೆ ಎರಡು ದಿನಗಳ ಹಿಂದೆ ರಾಧಿಕಾ ಪಂಡಿತ್ ಅವರು ಜೂನಿಯರ್ ಯಶ್‍ಗೆ ಜನ್ಮ ನೀಡಿದ್ದರು. ಇದರ ಬೆನ್ನಲ್ಲೆ ಸ್ವಲ್ಪ ತಡೀರಪ್ಪಾ ಮಕ್ಕಳ ಜೊತೆ ಸ್ವಲ್ಪ ಬ್ಯೂಸಿ ಇದ್ದೀನಿ ಎಂದು ಯಶ್ ಟ್ವೀಟ್ ಮಾಡಿದ್ದರು. ಯಶ್ ತಾಯಿ ಟ್ವೀಟ್ ಮಾಡಿ ಯಶ್ ಮತ್ತು ರಾಧಿಕ ಮೇಲಿನ ಪ್ರೀತಿಗೆ ನಿಮ್ಮ ಲ್ಲರಿಗೂ ಚಿರರುಣಿ. ಇದೇ ಪ್ರೀತಿ ನನ್ನ ಮೊಮ್ಮಕ್ಕಳ ಮೇಲೂ ಇರಲಿ ಎಂದಿದ್ದರು. ಕೆಜಿಎಫ್ ಚಿತ್ರ ಪರಭಾಷೆಯಲ್ಲಿಯೂ ಬಿಡುಗಡೆಯಾಗಿ ಭಾರೀ ಸದ್ದು ಮಾಡಿತ್ತು.




Find Out More:

Related Articles: