ಬಿಗ್ ಬಾಸ್ ನಲ್ಲಿ ಚೈತ್ರಾ ಏನ್ ಮಾಡ್ತಿದ್ದಾರೆ ಅಂತ ಕೇಳಿದ್ರೆ ಶಾಕ್ ಆಗ್ತೀರಾ!

frame ಬಿಗ್ ಬಾಸ್ ನಲ್ಲಿ ಚೈತ್ರಾ ಏನ್ ಮಾಡ್ತಿದ್ದಾರೆ ಅಂತ ಕೇಳಿದ್ರೆ ಶಾಕ್ ಆಗ್ತೀರಾ!

somashekhar
 
ಬಿಗ್ ಬಾಸ್, ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ. ಈ ಶೋನಲ್ಲಿ ಕಪ್ಪುಚುಕ್ಕೆಯೊಂದಿದೆಯಂತೆ. ಅಂದರೆ ಬಿಗ್ ಬಾಸ್ ನಲ್ಲಿರುವ ಸ್ಪರ್ಧಿಗಳು ಮಾಡುವುದನ್ನು ನೇರವಾಗಿ ವೀಕ್ಷಿಸಲು ಬಿಗ್ ಬಾಸ್ ಈ ರೀತಿ ಆಯೋಜನೆ ಮಾಡಿದೆ ಯಂತೆ. ಇದೀಗ ಚೈತ್ರ ಮಾಡುತ್ತಿರುವು ನೋಡಿ, ಬಹುತೇಕರು ಇವಳೇನಾ ಅವಳು ಎನ್ನುತ್ತಿದ್ದಾರೆ. ಅಷ್ಟಕ್ಕೂ ಬಿಗ್ ಬಾಸ್ ಗೆಲ್ಲಲು ಚೈತ್ರ ಮಾಸ್ಟರ್ ಪ್ಲಾನೊಂದು ಹಾಕಿಕೊಂಡಿದ್ದಾರಂತೆ. 

ಇದುವರೆಗೂ ಬಿಗ್ ಬಾಸ್ ನಲ್ಲಿ ಬಹುತೇಕ ಸೌಂಡ್ ಮಾಡಿದ್ದು ಎಂದರೆ ಅದು ರವಿ ಬೆಳಗೆರೆ ಮತ್ತು ಚೈತ್ರಾ. ಬೆಳಗೆರೆ ಹೊರ ಬಂದಿದ್ದೇ ತಡ ಸಣ್ಣ ಪುಟ್ಟ ವಿಚಾರಕ್ಕೂ ಜಗಳ ಶುರುವಾಯಿತು. ಇನ್ನು ಮೊದಲನೇ ವಾರದಲ್ಲೇ ಪ್ರೀತಿ ಪ್ರೇಮ ವಿಚಾರದಲ್ಲಿ ಸೌಂಡ್ ಮಾಡಿದವರು ಚೈತ್ರಾ ಕೋಟೂರ್. ಕಿರುತೆರೆ ನಟ ಶೈನ್ ಶೆಟ್ಟಿ ಜೊತೆ ಲವ್ ಆಂಗಲ್ ಕೊಟ್ಟು ಮಾತನಾಡುತ್ತಾ ಒಂದು ವಾರ ಕಳೆದರೆ ಎರಡನೇ ವಾರ ಆಪಲ್ ಗಲಾಟೆ ಮಾಡಿಕೊಂಡು ಸೌಂಡ್ ಮಾಡಿದರು. ಆದರೆ ಕಾಕತಾಳಿಯ ಏನೆಂದರೆ ಈ ಎರಡು ವಾರಗಳು ಚೈತ್ರಾ ನಾಮಿನೇಟ್ ಆಗಿದ್ದರು. ಮೂರನೆ ವಾರ ನಾಮಿನೇಷನ್‌ನಿಂದ ದೂರ ಉಳಿದ ಚೈತ್ರಾ ಯಾವ ಕ್ಯಾಮೆರಾಗೂ ಕಾಣಿಸಿಕೊಳ್ಳದೆ ಸೈಲೆಂಟ್‌ ಆಗಿ ಉಳಿದರು.

ಇದನ್ನು ಗಮನಿಸಿದ ಕಿಚ್ಚ ಸುದೀಪ್ ವಾರದ ಕಥೆ ಕಿಚ್ಚನ ಜೊತೆಯಲ್ಲಿ ಚೈತ್ರಾಗೆ ಪ್ರಶ್ನಿಸುತ್ತಾರೆ, ' ಕಳೆದ ವಾರ ಒಳ್ಳೆ ಎನರ್ಜಿ ಇತ್ತು ಆದರೆ ಈ ವಾರ ತುಂಬಾ ಸೈಲೆಂಟ್ ಆದ್ರೀ. ಮುಂಚೆ ಇದ್ದ ಚೈತ್ರಾ ಈ ವಾರ ಇರಲಿಲ್ಲ, ನೀವು ಅಕ್ಟಿವ್ ಆಗಿರಬೇಕು ಅಂದ್ರೆ ನಾಮಿನೇಟ್‌ ಆಗಿರಬೇಕಾ? ' ಇದಕ್ಕೆ ಚೈತ್ರಾ ಕೊಟ್ಟ ಉತ್ತರವೇನು ಗೊತ್ತಾ? 'ಎರಡು ವಾರಗಳು ಯಾವುದೋ ವಿಚಾರಕ್ಕೆ ನಾಮಿನೇಟ್ ಆದೆ, ಆಗ ನನಗೆ ಆಸೆ ಹುಟ್ಟಿತು. ಒಂದು ವಾರ ಆದ್ರೂ ನಾಮಿನೇಟ್ ಆಗದೆ ಮನೆಯಲ್ಲಿ ಇರಬೇಕು ಎಂದು. ಆ ಆಸೆ ಈಗ ನನಸಾಗಿದೆ. ಈ ವಾರ ನನ್ನ ನಾನು ತೊಡಗಿಸಿಕೊಳ್ಳುವುದಕ್ಕಿಂತ ಎಲ್ಲರನ್ನೂ ಹೆಚ್ಚಾಗಿ ಗಮನಿಸುತ್ತಿದ್ದೆ' ಎಂದು ಉತ್ತರಿಸಿದರು. ಒಟ್ಟಿನಲ್ಲಿ ಗೆಲ್ಲಲು ಪ್ಲಾನೊಂದು ಹಾಕಿಕೊಂಡಿದ್ದಾರಂತೆ. 


Find Out More:

Related Articles:

Unable to Load More