ಮೊಬೈಲ್ ಪೋನ್ ಕಳೆದುಹೋದ 24ಗಂಟೆಯ ಕಥೆಯೇ ಈಚಿತ್ರ

somashekhar

ನಮಗೆಲ್ಲಾ ಮೊಬೈಲ್ ಪೋನ್ ಗಳು ಎಷ್ಟು ಇಂಪಾರ್ಟೆಂಟ್ ಅಲ್ವಾ, ಇನ್ನು ಹೇಳಬೇಕೆಂದರೆ ಅದು ನಮ್ಮ ಮೊದಲನೇ ಹೆಂಡತಿಯೂ ಸಹ ಹೌದು. ಆದ್ರೆ 24 ಗಂಟೆ ಮೊಬೈಲ್ ಮಿಸ್ ಆದಾಗ ಏನ್ ಮಾಡೋದು, ಅಲ್ಲಿ ಏನ್ ನಡೆಯುತ್ತೇ ಅನ್ನೋದೆ ಈ ಚಿತ್ರ. ಯಾವುದು ಆ ಚಿತ್ರ ಅಂತ ಯೋಚಿಸುತ್ತಿದ್ದೀರ, ನಾವ್ ಹೇಳ್ತೀವಿ ಕೇಳಿ. ಇನ್ನು ವಿಶೇಷತೆ ಎಂದರೆ ಚಿತ್ರದಲ್ಲಿ ನಟಿಯೇ ಇಲ್ಲವಂತೆ

ಇತ್ತೀಚೆಗಷ್ಟೇ ಗೌರವ ಡಾಕ್ಟರೇಟ್ ಪದವಿ ಪಡೆದಿರುವ ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ ಆ ದೃಶ್ಯ. ಹೌದು,  ಇದೇ ಕಥೆಯನ್ನಿಟ್ಟುಕೊಂಡು ಚಿತ್ರ ಮಾಡಿದ್ದಾರೆ. ಆ ದೃಶ್ಯ ಒಂದು ಮರ್ಡರ್ ಮಿಸ್ಟ್ರಿಯಾಗಿದ್ದು, ಕೊಲೆಯೊಂದರ ಸುತ್ತ ನಡೆಯುವ ಕಥೆ ಇದರಲ್ಲಿದೆ. ಶಿವಗಣೇಶ್ ಅವರ ನಿರ್ದೇಶನದ ನಾಲ್ಕನೇ ಚಿತ್ರವಿದು. ಸಸ್ಪೆನ್ಸ್ , ಥ್ರಿಲ್ಲರ್ ಕಥಾ ಹಂದರ ಹೊಂದಿದ ಈ ಚಿತ್ರದ ಮೂಲಕ ಪ್ರೇಕ್ಷಕ ಏನನ್ನು ನಿರೀಕ್ಷಿಸಿ ಬರುತ್ತಾರೋ ಅದೆಲ್ಲ ಸಿಗುತ್ತದೆ ಎನ್ನುವ ನಿರ್ಮಾಪಕ ಕೆ.ಮಂಜು 150 ರಿಂದ 160 ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ನಿರ್ಧರಿಸಿದ್ದಾರೆ. 

 
ರವಿಮಾಮನ ಆ ದೃಶ್ಯ ಚಿತ್ರವನ್ನು 300 ಥಿಯೇಟರ್‍ ಗಳಲ್ಲಿ ಹಾಕುವಂತೆ ಬೇಡಿಕೆ ಬರುತ್ತಿದೆ. ಆದರೆ ಕೆ.ಮಂಜು ಮಾತ್ರ 110 ಸಿಂಗಲ್ ಸ್ಕ್ರೀನ್ ಹಾಗೂ 50 ಮಲ್ಟಿಫ್ಲೆಕ್ಸ್‍ಗಳಲ್ಲಿ ಮಾತ್ರವೇ ರಿಲೀಸ್ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ನನಗೆ ಎರಡು ಗೆಟಪ್ ಇದೆ. ಮೊಬೈಲ್ ಫೋನ್ ಏನೆಲ್ಲ ಘಟನೆ ಗಳಿಗೆ ಕಾರಣಲವಾಗುತ್ತದೆ ಎಂದು ಈ ಚಿತ್ರದಲ್ಲಿ ನಿರ್ದೇಶಕರು ತುಂಬಾ ಚೆನ್ನಾಗಿ ತೋರಿಸಿದ್ದಾರೆಂದು ರವಿಮಾಮ ತಿಳಿಸಿದ್ದಾರೆ.  ವಿಶೇಷ ಪಾತ್ರದಲ್ಲಿ ಅಜಿತ್ ಜಯರಾಜ್ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ಎರಡೇ ಹಾಡುಗಳಿದ್ದು ಗೌತಮ್ ಶ್ರೀವತ್ಸ್ ಸಂಗೀತ ಹಾಗೂ ಹಿನ್ನೆಲೆ ಸಂಗೀತ ಒದಗಿಸಿದ್ದಾರೆ. ವಿನೋದ್ ಭಾರತಿ ಅವರ ಛಾಯಾ ಗ್ರಹಣ ಈ ಚಿತ್ರಕ್ಕಿದೆ.ಈ ಚಿತ್ರಕ್ಕೆ ಗುಜ್ಜಲ್ ಪುರುಷೋತ್ತಮ್ ಕೂಡ ನಿರ್ಮಾಣದಲ್ಲಿ ಕೈ ಜೋಡಿಸಿದ್ದಾರೆ. ನಿರೀಕ್ಷೆಯಂತೆ ಚಿತ್ರ ಬೆಳ್ಳಿ ಪರದೆ ಮೇಲೆ ದೃಶ್ಯಗಳ ಸರಮಾಲೆ ಯನ್ನು ಹರಡಲಿದೆ ಯಂತೆ.

Find Out More:

Related Articles: