ಮುದ್ದಿನ ಮಡದಿಗೆ ಬಂಗಾರ ಕೊಡಿಸಿ, ಸಿನಿಮಾಗೆ ಕರೆದುಕೊಂಡು ಹೋಗೋದು, ಟೂರ್ ಹೋಗುವುದು, ಅನಾಥಾಲಯ ಗಳಿಗೆ ದಾನ ಮಾಡುವುದು, ದೇವಸ್ಥಾನದಲ್ಲಿ ಪೂಜೆ ಮಾಡಿಸಿಯೋ, ಅವಳಿಗೆ ಇಷ್ಟ ವಾದದನ್ನು ವಾರ್ಷಿಕೋತ್ಸವ ದಲ್ಲಿ ನಾವೆಲ್ಲರು ಮಾಡುತ್ತೇವೆ ಆದರೆ ಪಾಪ್ ಗಾಯಕ ನಿಕ್ ತನ್ನ ಹೆಂಡತಿಗೆ ಹೇಗೆಲ್ಲಾ ಸರ್ ಪ್ರೈಸ್ ಕೊಡಬೇಕೆಂದು ತಲೆಕೆಡಿಸಿ ಕೊಂಡಿದ್ದಾರಂತೆ. ಹೌದ! ಎಂದು ಶಾಕ್ ಆದರೂ ಸಹ ನಂಬಲೇ ಬೇಕಾದ ವಿಷಯವಿದು.
ಡಿಸೆಂಬರ್ 1 ರಂದು ರಾಜಸ್ಥಾನದ ಜೈಪುರದ ಅರಮನೆಯಲ್ಲಿ ಪ್ರಿಯಾಂಕ ಹಿಂದು ಸಂಪ್ರದಾಯದಂತೆ ನಿಕ್ ಜೊತೆ ಸಪ್ತಪದಿ ತುಳಿದಿದ್ದರು. ಇದಾದ ಬಳಿಕ ಅಮೆರಿಕದಲ್ಲಿ ಕ್ರಿಶ್ಚಿಯನ್ ಸಂಪ್ರದಾಯದಂತೆ ಉಂಗುರ ಬದಲಾಯಿಸಿ ಕೊಂಡಿದ್ದರು. ಬಾಲಿವುಡ್ ಸುಂದರಿ, ಹಾಲಿವುಡ್ ಸೊಸೆ ಯಾಗಿರುವ ನಟಿ ಪ್ರಿಯಾಂಕಾ ನಿಕ್ ಕೈ ಹಿಡಿದು ಒಂದು ವರ್ಷ ಕಳೆಯುತ್ತ ಬಂದಿದೆ. ತಮ್ಮ ಮೊದಲ ವಿವಾಹ ವಾರ್ಷಿಕೋತ್ಸವ ಕ್ಕೆ ನಿಕ್ ಕೊಡುವ ಸರ್ಪ್ರೈಸ್ಗೆ ಪ್ರಿಯಾಂಕ ಕಾದು ಕುಳಿತಿದ್ದು, ಹೇಗೆ ತಮ್ಮ ಈ ಕ್ಷಣವನ್ನು ಬೂಟಿಫುಲ್ ಆಗಿ ಆಚರಿಸುವುದು ಎಂಬ ಗೊಂದಲ ದಲ್ಲಿ ಪಾಪ್ ಸಿಂಗರ್ ನಿಕ್ ಇದ್ದರಂತೆ.
ನಾಲ್ಕು ಎತ್ತರದ ಕೇಕ್ ಮೇಲೆ ಕ್ಯಾಂಡಲ್ ಬೆಳಗಿಸಿ, ಅದನ್ನು ಬೆಳಗಿಸಿ ಹ್ಯಾಪಿ ವೆಡ್ಡಿಂಗ್ ಆನಿವರ್ಸರಿ ಬೇಬಿ ಎಂದು ಹೇಳುತ್ತಾ ಆ ದೀಪದ ಬೆಳಕಿನಲ್ಲಿ ಅವಳ ನಗುವ ಕಂಡವ ಪಾಪ್ ಸಿಂಗರ್ ನಿಕ್ ನಿಜಕ್ಕೂ ಅದ್ಭುತ ಎಂದೇ ಹೇಳ ಬಹುದು. ಇನ್ಸ್ ಸ್ಟಾ ಗ್ರಾಂ ನಲ್ಲಿ ಸದ್ದು ಮಾಡು ತ್ತಿರುವ ಪಾಪ್ ಸಿಂಗರ್ ನಿಕ್ ಮತ್ತು ಚೋಪ್ರಾ ಪೋಟೋ ಗೆ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. ಲಕ್ಷಾಂತರ ಸಂಖ್ಯೆ ಯಲ್ಲಿರುವ ಅಭಿಮಾನಿ ಗಳಿಂದ ಲಕ್ಷಾಂತರ ಸಂಖ್ಯೆಯಲ್ಲಿ ವಿಶಸ್ ಬಂ ದಿವೆ. ಇನ್ಸ್ ಸ್ಟಾ ಗ್ರಾಂ ನಲ್ಲಿ ಪೋಸ್ಟ್ ಮಾಡಿರುವ ಮುದ್ದಿನ ಪೋಟೋ ಗೆ ಲಕ್ಷಾಂತರ ಲೈಕ್ಸ್ ಬಂದಿವೆ. ಪ್ರಿಯಾಂಕ ಚೋಪ್ರಾ ತನ್ನ ಮುದ್ದಿನ ಮಡದಿಯೊಂದಿಗಿರುವ ಪೋಟೋ ವನ್ನು ಅಪ್ ಲೋಡ್ ಮಾಡಿದ್ದರು.