ಕನ್ನಡದ ಸಿನಿಮಾವೊಂದು ಇದೀಗ ರಾಷ್ಟ್ರೀಯ ಮಟ್ಟದಲ್ಲಿ ಮಿಂಚಲು ಶುರು ಮಾಡುತ್ತಿವೆ. ಇಂಡಸ್ಟ್ರಿ ಶರವೇಗದಲ್ಲಿ ಸಾಗುತ್ತಿದೆ. ಹೌದು ಕೆಜಿಎಫ್ ನಂತರ ಇದೀಗ ಬೆಲ್ ಬಾಟಂ ಚಿತ್ರವು ಬಾಲಿವುಡ್ ನಲ್ಲಿ ಸೆಟ್ಟೇರಲು ರೆಡಿಯಾಗಿದೆ. ಹೌದು, ಅದು ಕೂಡ ಬಾಲಿವುಡ್ ಬಾಕ್ಸ್ ಆಫೀಸ್ ಸುಲ್ತಾನ್ ಅಕ್ಷಯ್ ಕುಮಾರ್ ಅವರ ನಟನೆಯಲ್ಲಿ. ಕನ್ನಡದ ಒಂದು ಚಿತ್ರ ಬಾಲಿವುಡ್ ಗೆ ಡಬ್ ಆಗುತ್ತಿರುವುದು ಹೆಮ್ಮೆ ಮತ್ತು ಸಂತಸದ ವಿಷಯವಾಗಿದೆ.
ಕನ್ನಡದ ಬೆಲ್‌ಬಾಟಂ ತೊಡಲಿದ್ದಾರೆ ಖಿಲಾಡಿ ಅಕ್ಕಿ.ಬಾಲಿವುಡ್ನಲ್ಲಿ ಡಿಟೆಕ್ಟಿವ್ ದಿವಾಕರ ಆಗ್ತಾನಾ ಲಕ್ಕಿ. ಬೆಲ್ ಬಾಟಂ. ಕಳೆದ ಫೆಬ್ರವರಿಯಲ್ಲಿ ತೆರೆಕಂಡು ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಾ ಸೂಪರ್ ಹಿಟ್ ಕಿರೀಟವನ್ನು ಮುಡಿಗೇರಿಸಿಕೊಂಡ ಸಿನಿಮಾ. ನಿರ್ದೇಶಕ ಜಯತೀರ್ಥ ಗೆಲುವಿನ ಲಯಕ್ಕೆ ಮರಳಿದ್ರು , ನಿರ್ದೇಶಕ ರಿಷಬ್ ಶೆಟ್ಟಿ ನಾನು ಮಲ್ಟಿಟ್ಯಾಲೆಂಟೆಡ್ ಎಂದು ಸಾಬೀತು ಮಾಡಿದ್ರು. ಟೋಟಲ್ ಆಗಿ ಇಡೀ ಬೆಲ್‌ಬಾಟಂ ಟೀಮ್ಗೆ ಮೆಚ್ಚುಗೆಯ ಜೊತೆಗೆ ಯಶಸ್ಸು , ಅವಕಾಶಗಳ ಶ್ರೇಯಸ್ಸು ದಕ್ಕಿತ್ತು. ಸಾಕಷ್ಟು ಪ್ರಶಸ್ತಿಗಳನ್ನು ಬಾಚಿಕೊಂಡಿತ್ತು.
ಬಾಲಿವುಡ್ನ ಕೆಲ ಮೂಲಗಳ ಪ್ರಕಾರ ಈ ಸುದ್ದಿ ನಿಜ ಎನ್ನಲಾಗುತ್ತಿದೆ. ಈ ಹಿಂದೆ ‘ಲಖನೌ ಸೆಂಟ್ರಲ್’ ಚಿತ್ರದ ನಿರ್ದೇಶಕ ರಂಜಿತ್ ತೀವಾರಿ ಕನ್ನಡದ ‘ಬೆಲ್‌ಬಾಟಂ’ ಚಿತ್ರವನ್ನು ಹಿಂದಿಯಲ್ಲಿ ಸೃಷ್ಟಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರಂತೆ. ‘ಲಖನೌ ಸೆಂಟ್ರಲ್’ ಚಿತ್ರದ ನಿಖಿಲ್ ಅಡ್ವಾನಿ ಹಿಂದಿ ಬೆಲ್‌ಬಾಟಂ ಚಿತ್ರಕ್ಕೆ ಬಂಡವಾಳ ಹೂಡಲಿದ್ದಾರೆ. ಅಕ್ಷಯ್ಗೂ ಸಿನಿಮಾ ಇಷ್ಟವಾಗಿದೆ ಎಂಬುದು ಮೂಲಗಳ ಮಾಹಿತಿ. ಸಿನಿಮಾದ ಹಕ್ಕುಗಳನ್ನು ಪಡೆದುಕೊಂಡಿರುವ ನಿಖಿಲ್ ಅಡ್ವಾನಿ, ಹಿಂದಿ ಸಿನಿಮಾದ ಚಿತ್ರಕಥೆ ಕೆಲಸಕ್ಕೂ ಚಾಲನೆ ನೀಡಿದ್ದಾರಂತೆ.
ಅಕ್ಷಯ್ ಲಕ್ಷ್ಮೀ ಬಾಂಬ್ , ಸೂರ್ಯವಂಶಿ ಸಿನಿಮಾಗಳಲ್ಲಿ ಅಕ್ಷಯ್ ಬಿಜಿಯಾಗಿದ್ದಾರೆ. 2020ರ ಆರಂಭದಲ್ಲಿ ಅಕ್ಷಯ್ ಅವರನ್ನು ಶೂಟಿಂಗ್ಗೆ ಕರೆಯಲಿದೆ ಅನ್ನೋದು ಸುದ್ದಿ. ಸದ್ಯಕ್ಕೆ ಹಿಂದಿಯಲ್ಲಿಯೂ ಕೂಡ ‘ಬೆಲ್ ಬಾಟಂ’ ಟೈಟಲ್ ಅನ್ನೇ ಫೈನಲ್ ಮಾಡುವ ಸಾಧ್ಯತೆ ಇದ್ದು, ಬೇರೆ ಬೇರೆ ಶೀರ್ಷಿಕೆಯ ಹುಡುಕಾಟದಲ್ಲೂ ತೊಡಗಿಸಿಕೊಂಡಿದೆ ಚಿತ್ರತಂಡ. ತಮಿಳಿನಲ್ಲಿ ಸತ್ಯಶಿವ ನಿರ್ದೇಶನದಲ್ಲಿ ‘ಬೆಲ್ ಬಾಟಂ’ ರಿಮೇಕ್ ಚಿತ್ರೀಕರಣ ಶುರುವಾಗಿದೆ. ಇತ್ತ ತೆಲುಗಿನಲ್ಲಿಯೂ ಶುರುವಾಗುವ ಸಾಧ್ಯತೆಗಳಿವೆ.